ಬೆಂಗಳೂರು:ಡಾಕ್ಟರ್ ವಿಷ್ಣುವರ್ಧನ್ ರವರ ಜನ್ಮದಿನಾಚರಣೆ ಮತ್ತು ಪೌರಕಾರ್ಮಿಕರ ದಿನಾಚರಣೆಯಪ್ರಯುಕ್ತ.ಬೆಂಗಳೂರು ಜಿಬಿಎ.ಸಿಬ್ಬಂದಿ ಶ್ರೀ ವೆಂಕಟರಾಮು ರವರು ಪೌರಕಾರ್ಮಿಕರಿಗೆ ಬಟ್ಟೆ,ಅನ್ನಪ್ರಸಾದ,ತಾಂಬೂಲವಿತರಣೆ ಮಾಡಿದರು.
ದಿನಾಂಕ:25-09-2026,ರಂದು ಬೆಂಗಳೂರಿನ ವಿಲ್ಸನ್ ಗಾರ್ಡನ್ (ಹೊಂಬೇಗೌಡ ವಾರ್ಡ್) ಜಿಬಿಎ ಕಚೇರಿಯ ಆವರಣದಲ್ಲಿ ನೂರಾರು ಜನರಿಗೆ ಬಟ್ಟೆ ವಿತರಿಸಿ ಅನ್ನ ಸಂತರ್ಪಣೆ ಮಾಡಿ ತಾಂಬೂಲ ಕೊಟ್ಟು ಪೌರಕಾರ್ಮಿಕರರಿಗೆ ಪುರಸ್ಕಾರ ನೀಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ವೆಂಕಟರಾಮು ಹಾಗೂ ಇತರರು ಡಾಕ್ಟರ್ ವಿಷ್ಣುವರ್ಧನ್ ಚಿತ್ರಗಳ ಹಾಡುಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.ಈ ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಇತರೆ ಸಂಘಸಂಸ್ಥೆಗಳ ಮುಖಂಡರು ಭಾಗವಹಿಸಿ ವೆಂಕಟರಾಮು ರವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮಕ್ಕೆ ಸಹಾಯವಾಣಿ ಕನ್ನಡದಿನಪತ್ರಿಕೆಯ ಸಂಪಾದಕ ಎಸ್.ಕೆ.ಒಡೆಯರ್,ಓಕಳಿಪುರದ ರಾಜೇಂದ್ರ ಹಾಗೂ ಇತರೆ ಮಿತ್ರರು,ಪ್ರಕಾಶ್ ನಗರದ ಸುರೇಶ್ ಸೇರಿದಂತೆ ಅನೇಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.





