ಬೆಂಗಳೂರು:ನಗರದ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಗಲಿದ ಪತ್ರಕರ್ತರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ, ಒಂದು ನಿಮಿಷ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರ ಒತ್ತಡದ ಬದುಕಿನಿಂದಾಗಿ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ತೀವ್ರಗೊಳ್ಳುತ್ತಿದ್ದು, ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ನೋವಿನ ಸಂಗತಿಯಾಗಿದೆ. ಪತ್ರಕರ್ತರ ಆರೋಗ್ಯ ಮತ್ತು ಅವರ ಸಂಕಷ್ಟಗಳ ಬಗ್ಗೆ ಸರ್ಕಾರ ವಿಶೇಷ ಗಮನಹರಿಸಿ, ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು. ಅಗಲಿದ ಪತ್ರಕರ್ತರ ಸೇವೆ ಸ್ಮರಿಸಿದರು.
ಐಎಫ್ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಬದುಕಿನಲ್ಲಿ ಅವಕಾಶ ದೊರೆತಾಗ ನಾವು ಮಾಡುವ ಉತ್ತಮ ಕೆಲಸಗಳೇ ಜೀವನದ ಸಾರ್ಥಕತೆಗೆ ಸಾಕ್ಷಿಯಾಗುತ್ತವೆ ಎಂದರು. ಗೋಪಾಲರಾವ್ ಮತ್ತು ಎನ್.ಎಸ್.ಶಂಕರ್ ಸೇವೆ ಸ್ಮರಿಸಿದರು
ಹಿರಿಯ ಪತ್ರಕರ್ತರು ಹಾಗೂ ಚಿತ್ರ ನಿರ್ದೇಶಕ ಎನ್.ಎಸ್. ಶಂಕರ್, ಜನವಾಹಿನಿ ಪತ್ರಿಕೆಯ ಮಾಜಿ ಸಂಪಾದಕ ಪ್ರೊ. ಕೆ.ಟಿ. ಬಾಲಕೃಷ್ಣಗಟ್ಟಿ, ಕೆಯುಡಬ್ಲ್ಯೂಜೆ ಮಾಜಿ ರಾಜ್ಯ ಕಾರ್ಯದರ್ಶಿ ದಾವಣಗೆರೆಯ ಪೆ.ನ. ಗೋಪಾಲರಾವ್, ಒ.ಎನ್. ಸಿದ್ದಯ್ಯ, ತುಮಕೂರಿನ ಕಮಲಾ ಗಂಗಹನುಮಯ್ಯ, ಈಶ್ವರಪ್ಪ, ಬಳ್ಳಾರಿಯ ವೇಣು ಲೋಕನಾಥ್, ಚಿತ್ರದುರ್ಗದ ಉಜಿನಪ್ಪ, ಇಂದಿರಾ ಲಂಕೇಶ್, ಉಡುಪಿಯ ನಾಗೇಶ್ ಗಾಣಿಗ ಸಿದ್ದಾಪುರ, ಬೈಂದೂರಿನ ಜನಾರ್ದನ ಮರವಂತೆ, ಮಹೇಶ್ ಕುಮಾರ್, ಸಿಂದಗಿಯ ಇಸ್ಮಾಯಿಲ್ ಶೇಖ್, ಬಸವಾಪಟ್ಟಣದ ಜಯಕುಮಾರ್, ಬಸವರಾಜಪ್ಪ, ತುಮಕೂರಿನ ವೆಂಕಟೇಶ್ ಮೂರ್ತಿ, ಧ್ರುವಕುಮಾರ್, ನಾಗೇಂದ್ರ ಹಾಗೂ ಶೇಷಗಿರಿ ಸೇರಿದಂತೆ ಅಗಲಿದ ಪತ್ರಕರ್ತರನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೆಯುಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಖಜಾಂಚಿ ವಾಸುದೇವ ಹೊಳ್ಳ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್ ಕೆ ರವೀಶ್, ಪ್ರಧಾನ ಕಾರ್ಯದರ್ಶಿ ಆರ್. ಜೈ ಕುಮಾರ್ ಗೌಡ, ನಗರ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಎನ್.ಶಿವಾನಂದ, ಗಂಡಸಿ ಸದಾನಂದ ಸ್ವಾಮಿ,ರಾಜಗಿರಿ ಪ್ರದೀಪ್, ಬಿ ಕೆ ಹನುಮಂತರಾಜು, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.





