ರಾಯಚೂರು:12ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ. ನಾಲ್ಕು ಪ್ರಮುಖ ನಿರ್ಣಯಗಳನ್ನ ಕೈಗೊಳ್ಳಲಾಯಿತು. ರಾಯಚೂರು ಜಿಲ್ಲೆಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್ )ಮಂಜೂರು ಮಾಡಬೇಕು. ಈ ಕುರಿತು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು ಕೇಂದ್ರ ಸರಕಾರಕ್ಕೆ ತುರ್ತಾಗಿ ಪ್ರಸ್ತಾವ ಸಲ್ಲಿಸಬೇಕೆಂದು ಒತ್ತಾಯಿಸಲಾಯಿತು. ಸರ್ಕಾರ ನಿರ್ಧರಿಸಿರುವ ಕೆ.ಪಿ.ಎಸ್ ಮ್ಯಾಗ್ನಿಟ ಶಾಲೆಗಳ ಆರಂಭವನ್ನು ತಕ್ಷಣ ನಿಲ್ಲಿಸಬೇಕು . ಗಡಿನಾಡು ಕೃಷ್ಣ ಮಂಡಲ ವ್ಯಾಪ್ತಿಯ ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕದ ಎಲ್ಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಬೇಕು .ಗಡಿ ಭಾಗದ ಕನ್ನಡ ಮಾತನಾಡುವ ಎಲ್ಲಾ ಹಳ್ಳಿಗಳಲ್ಲಿ ಗಡಿ ಹಳ್ಳಿಗಳೆಂದು ಗೆಜೆಟ್ಟಿನಲ್ಲಿ ಪ್ರಕಟಿಸಬೇಕು. ಗಡಿನಾಡಿನ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಸರ್ಕಾರ ಆದೇಶಗಳನ್ನು ಜಾರಿಗೊಳಿಸಬೇಕು. ಎಂದು ಒತ್ತಾಯಿಸಲಾಯಿತು. ತುಂಗಭದ್ರಾ ನದಿಗೆ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು .ಎಂದು ನಿರ್ಣಯ ಕೈಗೊಳ್ಳಲಾಯಿತು. ಸಮ್ಮೇಳನ ಅಧ್ಯಕ್ಷರಾದ ರಾಮಣ್ಣ ಹವಳೆ ಅವರ ಸಮ್ಮುಖದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಮಂಜುನಾಥ್ ಕಾಮಿನ ನಿರ್ಣಯಗಳನ್ನ ಮಂಡಿಸಿದರು. ಸಹ ಕಾರ್ಯದರ್ಶಿಗಳಾದ ಡಾ. ದಂಡಪ್ಪ ಬಿರಾದಾರ .ವೆಂಕಣ್ಣ ಯಾದವ್. ಸಂಘಟನಾ ಕಾರ್ಯದರ್ಶಿ ರಾಮಣ್ಣ ಬೋಯರ್ ಹಾಗೂ ಮೈನುದ್ದಿನ್ ಕಾಟಮಳ್ಳಿ ಉಪಸಿತರಿದ್ದರು. ತಾಯಪ್ಪ ಬಿ ಹೊಸೂರ್ ಕಾರ್ಯದರ್ಶಿಗಳು ಸ್ವಾಗತಿಸಿದರು. ನಾಗಪ್ಪ ಹೊರಪಾಟಿ ವಂದಿಸಿದರು.





