ವಿಜಯಪುರ:ಶ್ರೀ ಬಿ ಎಂ ಪಾಟೀಲ್ ಪಬ್ಲಿಕ್ ಜಲನಗರ ಶಾಲೆಯಲ್ಲಿ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ ಆಚರಣೆ!
‌ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು ಈ ಕಾರ್ಯಕ್ರಮವನ್ನು ಶಾಲೆಯ ಪ್ರಾಚಾರ್ಯರಾದ ಶ್ರೀಯುತ ವಿಕ್ರಂ ನಾರ್ವೆಕರ್ ಉದ್ಘಾಟಿಸಿ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡುತ್ತಾ ಪರಿಸರವು ನಮ್ಮ ಜೀವನದ ಆಧಾರವಾಗಿದೆ. ಗಾಳಿ, ನೀರು, ಮಣ್ಣು, ಮರಗಳು, ಪ್ರಾಣಿಗಳು ಹಾಗೂ ಸಸ್ಯಗಳು ಪರಿಸರದ ಪ್ರಮುಖ ಅಂಗಗಳಾಗಿವೆ. ಆರೋಗ್ಯಕರ ಪರಿಸರವಿಲ್ಲದೆ ಜೀವ ಜಗತ್ತು ಉಳಿಯಲು ಸಾಧ್ಯವಿಲ್ಲ. “ಪರಿಸರ ಉಳಿಸಿ, ಮರಗಳು ನೀಡುವ ಆಮ್ಲಜನಕ ಸರಿಯಾಗಿ ಬಳಸಿ. ಪ್ರಕೃತಿ ರಕ್ಷಿಸಿ” ಅದರ ಜೊತೆಗೆ ನಿಮ್ಮ ಹುಟ್ಟು ಹಬ್ಬಕ್ಕೆ ಒಂದು ಗಿಡ ನೆಟ್ಟು ನೀವೆಲ್ಲ ಪರಿಸರ ಸ್ನೇಹಿ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಕ್ಕಳು

ಕಾರ್ಯಕ್ರಮದಲ್ಲಿ ಹಲವಾರು ಸಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತ ಪರಿಸರದ ಕುರಿತು ಸುಂದರವಾದ ನಾಟ್ಯವನ್ನು ಮಾಡಿದರು. ತಮ್ಮ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹ ಅಭ್ಯಾಸಗಳನ್ನು ಉಳಿಸಿಕೊಳ್ಳಬೇಕು ಮರಗಳನ್ನು ಬೆಳೆಸುವುದು ನೀರನ್ನು ಮಿತವಾಗಿ ಬಳಸುವುದು ನಮ್ಮ ಕರ್ತವ್ಯ ಎಂದು ವಿದ್ಯಾರ್ಥಿಗಳು ಅತ್ಯಂತ ಸುಂದರವಾಗಿ ಪರಿಸರದ ಬಗ್ಗೆ ಅರಿವನ್ನು ಮೂಡಿಸುವಂತಹ ಭಾಷಣವನ್ನು ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಜಾಗೃತಿ ಘೋಷಣೆಗಳನ್ನು ಕೂಗಿದರು. ಶಾಲಾ ಆವರಣದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಸಸಿಗಳನ್ನು ನೆಡುವ ಸಂಕಲ್ಪ ಮಾಡಿದರು. ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿ ಪರಿಸರ ಸಂರಕ್ಷಣೆಯ ಸಂಪರ್ಕ ಸಂಕಲ್ಪ ಕೈಗೊಂಡರು. ನಂತರ ವಿದ್ಯಾರ್ಥಿಗಳು ಪಥ ಸಂಚಲನ ಮಾಡುತ್ತಾ ಅಂಗಡಿ ಮುಗ್ಗಟ್ಟುಗಳಿಗೆ ತೆರಳಿ ಪ್ಲಾಸ್ಟಿಕ್ ಬಳಕೆಯನ್ನು ಬಿಟ್ಟು ಕಾಗದದ ಹಾಗೂ ಬಟ್ಟೆಯ ಚೀಲಗಳನ್ನು ಬಳಸಿ ಪರಿಸರ ಸಂರಕ್ಷಿಸಿ ಎಂದು ಅಂಗಡಿ ಮಾಲೀಕರ ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದರು.

ಸುಂದರ ಪರಿಸರದ ಅರಿವು ಮೂಡಿಸಲು ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತು ಪ್ರಬಂಧವನ್ನು ಏರ್ಪಡಿಸಲಾಯಿತು. ಹಿರಿಯ ಸಂಯೋಜಕರಾದ ಶ್ರೀಮತಿ ಜಯಾ ಗಲಗಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಒಟ್ಟಾರೆ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಪ್ರಕೃತಿ ಸಂರಕ್ಷಣೆಗೆ ಪ್ರೇರಣೆ ನೀಡುವಲ್ಲಿ ಯಶಸ್ವಿಯಾಗುವಂತಿತ್ತು.(ವರದಿ:ಇಂದಿರಾ ಬಿದರಿ ಶಿಕ್ಷಕಿ ಹಾಗೂ ಸಾಹಿತಿ)

LEAVE A REPLY

Please enter your comment!
Please enter your name here