ಹೊನ್ನಾಳಿ: ದಾವಣಗೆರೆ ಜಿಲ್ಲೆಯ “ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ (ರಿ), ದ 2026 – 27 ನೇ ಸಾಲಿನ ಸರ್ವ ಸದಸ್ಯರ  ವಾರ್ಷಿಕ  ಸಭೆ ಹಾಗೂ *ಮಾಜಿ ಹಾಗೂ ಹಾಲಿ ಸೈನಿಕರ  ಮಕ್ಕಳಿಗೆ ಪ್ರತಿಭಾ ಪುರಸ್ಕಾರ”, ದ ಕಾರ್ಯಕ್ರಮದ  ತುಂಬಾ ಸೊಗಸಾಗಿ ನಡೆಯಿತು, ಈ  ಕಾರ್ಯಕ್ರಮವನ್ನು ಅವಳಿ ತಾಲೂಕಿನ ಶಾಸಕರಾದ ಡಿ ಜಿ  ಶಾಂತನ ಗೌಡ್ರು ಮತ್ತು ಮುಖ್ಯ ಅತಿಥಿಗಳಾದ ಜೋತಿ ಅಕ್ಕನವರು ಉದ್ಘಾಟಿಸಿದರು, ಇದೇ ಸಂದರ್ಭದಲ್ಲಿ ಶಾಸಕರು ಮಾತನಾಡಿ ಮಾಜಿ ಸೈನಿಕರಿಗೆ ನಿವೇಶನವನ್ನು ಮಂಜೂರು ಮಾಡಿಕೊಡುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಭರವಸೆಯನ್ನು ನೀಡಿದರು , ನಂತರ ಮಾಜಿ ಸಚಿವರು ಹಾಗೂ ಶಾಸಕರಾದ ರೇಣುಕಾಚಾರ್ಯರೂ ಸೈನಿಕರ ಮತ್ತು ರೈತರ ಬಗ್ಗೆ ಮಾತನಾಡಿದರು , ಜ್ಯೋತಿ ಅಕ್ಕನವರು ಸೈನಿಕರ ಸೇವೆಯಬಗ್ಗೆ ಮಾತನಾಡಿದರೂ , ಗೌರವಾಧ್ಯಕ್ಷರಾದ ವಾಸಪ್ಪ ನವರು ಪ್ರಾಸ್ತಾವಿಕ ವಾಗಿ ಸಂಘದ ಸ್ಥಾಪನೆಯ ಬಗ್ಗೆ ಮಾತನಾಡಿದರು, ಕಾರ್ಯದರ್ಶಿ  ಗಂಗಾಧರ್  ಎಲ್ಲರನ್ನೂ ಸ್ವಾಗತಿಸಿದರು , ನಿರ್ದೇಶಕರಾದ ಹನುಮಂತಪ್ಪ ದಿಡಗೂರ್ ಅವರು  ಕಾರ್ಯಕ್ರಮದ ನಿರೂಪಣೆ ಮಾಡಿದರು, ಸಂಘದ ಖಜಾಂಚಿ ಅವರಾದ  ವೀರೇಶ್ ಅವರು ಸಂಘದ ಕಳೆದ ವರ್ಷದ ಲೆಕ್ಕಪತ್ರವನ್ನು ಮಂಡಿಸಿದರು ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ   ಪರಮೇಶ್ವರಪ್ಪ ಗೌಡ್ರು ಮಾತನಾಡಿದರು , ಕೊನೆಯದಾಗಿ ನಿರ್ದೇಶಕರಾದ ಸಿದ್ದೇಶಪ್ಪ ಎಲ್ಲರಿಗೂ ವಂದನಾರ್ಪಣೆಯನ್ನು ಸಲ್ಲಿಸಿದರು ,  ಈ  ಕಾರ್ಯಕ್ರಮಕ್ಕೆ ಶ್ರೀಮತಿ ಸ್ವರೂಪ ರಾಣಿ , ಮಹಿಳಾ ರಾಜ್ಯಾಧ್ಯಕ್ಷರು,  ಮಾಜಿ ಸೈನಿಕರ ವಿಭಾಗ, ಕರ್ನಾಟಕ ರಾಜ್ಯ, ಇವರೂ ಉಪಸ್ಥಿತರಿದ್ದು ಸಂಘದ ಬಗ್ಗೆ ಮಾತನಾಡಿದರು , ಸಂಘದ ಹಿರಿಯ ಸದಸ್ಯರನ್ನು ,  ಮತ್ತು ಈಗತ್ತಾನೆ  ನಿವೃತ್ತಿಯಾಗಿ ಬಂದ ಸೈನಿಕರನ್ನೂ ಸನ್ಮಾನಿಸಲಾಯಿತು,

ಈ ಸಂದರ್ಭದಲ್ಲಿ ಅವಳಿ ತಾಲ್ಲೂಕಿನ ಸದಸ್ಯರು , ಕುಟುಂಬದವರು, ರೈತ ಸಂಘದ ಮುಖಂಡರೂ ಉಪಸ್ಥಿತರಿದ್ದರು,*

LEAVE A REPLY

Please enter your comment!
Please enter your name here