ಗದಗ:ನರೇಗಲ್ಲ ಪ್ರತಿವರ್ಷದ ಪದ್ಧತಿಯಂತೆ ನವೋದಯ ಯುವಕ ಮಂಡಲ ನಿಡಗುಂದಿ ಕೊಪ್ಪ . ಇವರ ವತಿಯಿಂದ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು*.
ಈ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಶ್ರೀ ಶಾಖಾ ಶಿವಯೋಗ ಮಂದಿರ ನಿಡಗುಂದಿ ಕೊಪ್ಪ ಪೂಜ್ಯರು ಮಾತನಾಡಿ ಗಣೇಶ ಚತುರ್ಥಿ ಕೇವಲ ಆಚರಣೆ ಆಗಬಾರದು ಇಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಒಳ್ಳೆಯ ಕೆಲಸಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅದನ್ನು ಹೊರ ತರಲು ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಕಾರ್ಯಕ್ರಮ ಇಟ್ಟಿರುವುದು ಒಳ್ಳೆಯ ಕೆಲಸ ಆಗಿದೆ ಎಂದು ಶ್ರೀಗಳು ಆಶೀರ್ವಚನ ನೀಡಿ ಹೇಳಿದರು.
ಈ ಸಮಾರಂಭದಲ್ಲಿ ಊರಿನ ಹಿರಿಯರು ಆದ ಎಮ್ ಎಮ್ ಸರ್ವಿ ಗುರುಗಳು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನವೋದಯ ಯುಸರ್ವಿವಕ ಮಂಡಲ ಈ ಕಾರ್ಯ ಸುಮಾರು ವರ್ಷಗಳಿಂದ ಸಾಗಿ ಬಂದ ಅದೇ ಹಾದಿಯಲ್ಲಿ ಪ್ರಸ್ತುತ ದಿನಗಳಲ್ಲಿ ಅತ್ಯಂತ ಅವಶ್ಯಕ ಇರುವ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ನಡೆಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ನಿಡಗುಂದಿ ಕೊಪ್ಪ ಒಂದು ಚಿಕ್ಕ ಗ್ರಾಮ ವಾರದೊಳಗೆ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹಾರೈಸಿದರು.
ಈ ಸಮಾರಂಭದಲ್ಲಿ ನಿವೃತ್ತ ನೌಕರರಾದ ಭೀಮಪ್ಪ ಬೂದಿಹಾಳ ಆಮಿ ಮತ್ತು ಹುಚ್ಚಿರಪ್ಪ ಸವಿ ಪೋಲೀಸ್ ಇಲಾಖೆ ಇವರಿಗೂ ಸನ್ಮಾನಿಸಲಾಯಿತು.
ವೇದಮೂರ್ತಿ ಶ್ರೀ ಶೇಖರಯ್ಯ ಹಿರೇಮಠ ಮಾತನಾಡಿ
ಒಂದು ದೇಶದ ಸುಭದ್ರತೆ ನಡೆಯಬೇಕಾಗಿದೆ ಆ ದೇಶದ ಖಾವಿ. ಖಾಕಿ. ಮಹತ್ವದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಊರಿನ ಕರವೀರಪ್ಪ ಮ ಸವಿ.ಶೇಖರಪ್ಪ ಸೂಡಿ. ಮುದಿಯಪ್ಪ ಸರ್ವಿ ಬಸವರಾಜ ಬನಿಗೋಳ.ಪುಲಕೇಶಿಪ್ಪ. ಸರ್ವಿ . ಶರಣಪ್ಪ ಬೆಲ್ಲದ. ಬಸಲಿಂಗಪ್ಪ.ಸರ್ವಿ . ರಮೇಶ್ ಮಾಸ್ತಿ. ಶರಣಪ್ಪ ಅವಾರಿ.ಶರಣಪ್ಪ ಬಾಲಣ್ಣನವರ. ಶರಣಪ್ಪ ಖವಾಸ್ತೆ. ವೀರಯ್ಯ ಹಿರೇಮಠ ಮತ್ತು ಊರಿನ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.
(ವರದಿ ಮಹೇಶ ಮೇಟಿ )





