ಮೈಸೂರು:ಕರ್ನಾಟಕ ರಾಜ್ಯದ ಹಾಲಮತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಗುವುದು.ಒಂದನೇ ತರಗತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವರೆಗೆ ಸರ್ಕಾರಿ ಶಾಲೆಗಳಲ್ಲಿಯೇ ಓದಿ ಶೇಕಡಾ ತೊಂಭತ್ತಕಿಂತ ಹೆಚ್ಚು ಅಂಕಪಡೆದು ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ಮೌರ್ಯ ಎಜ್ಯುಕೇಷನ್ ಟ್ರಸ್ಟ್ (ರಿ)ಮೈಸೂರು ಜಿಲ್ಲೆ ಹಾಗೂ ಸಹಾಯವಾಣಿ ಕನ್ನಡ ದಿನಪತ್ರಿಕೆ ಬೆಂಗಳೂರು ಯಿವರ ಸಹಯೋಗದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.ಅಂಥಾ ವಿದ್ಯಾರ್ಥಿಗಳು ದಿನಾಂಕ: ೩೧-೦೫-೨೦೨೬,ರ ಒಳಗೆ ಆಧಾರ್ ಕಾರ್ಡ್,ಒಂದನೇ ತರಗತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವರೆಗೆ ಓದಿರುವ ಶಾಲೆಯ ಮುಖ್ಯೋಪಾಧ್ಯಾಯ ರಿಂದ ಪಡೆದ ಪ್ರಮಾಣ ಪತ್ರ ಮತ್ತು ಅಂಕಪಟ್ಟಿ,ಎರಡು ಪೋಟೋ, ಪರ್ಮೆಂಟ್ ಮತ್ತು ಪ್ರಸ್ತುತ ವಿಳಾಸ ಕಳಿಸಲು ಕೋರಿಕೆ.
ಅರ್ಜಿ ಸಲ್ಲಿಸುವ ವಿಳಾಸ:ಸರ್ವೆ ನಂಬರ್248/4,ಕೆಂಪಿ ಸಿದ್ದನ ಹುಂಡಿ ಚಿಕ್ಕಯ್ಯಚತ್ರ ಹೋಬಳಿ,ನಂಜನಗೂಡು ತಾಲೂಕು ಮೈಸೂರು ಜಿಲ್ಲೆ.ಮೋಬೇಲ್ 9916462342, 8297544442, 9141920642, 9902543494.ಜೂನ್ ಮೊದಲ ವಾರದಲ್ಲಿ ಪ್ರತಿಭಾ ಪುರಸ್ಕಾರ ಗೌರವ ಸಮರ್ಪಣೆ ಸಮಾರಂಭವನ್ನು ಆಯೋಜಿಸಲಾಗುವುದು.ಆದ್ದರಿಂದ ವಿಳಂಬಮಾಡದೆ ಇಂದೇ ನಿಮ್ಮ ಮಾಹಿತಿ ಕಳಿಸಿರಿ.





