ಕಲಬುರ್ಗಿ:
ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಿಲ್ಲೋಗಿ ಗ್ರಾಮದಲ್ಲಿ 1936ರಲ್ಲಿ ಜನಿಸಿದ ಧರ್ಮಸಿಂಗ್ ಅವರು ಹೈದರಾಬಾದನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂ ಎಂ ಹಾಗೂ ಎಲ್ ಎಲ್ ಬಿ ಎಲ್ಲಿ ಪದವಿ ಪಡೆದು ವಕೀಲರಾಗಿ ವೃತ್ತಿ ಆರಂಭಿಸಿದ ನಂತರ 60ರ ದಶಕದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ನಗರಸಭೆ ಸದಸ್ಯರಾಗಿ ರಾಜಕೀಯ ಜೀವನ ಪ್ರಾರಂಭಿಸಿ ನಂತರ 1972ರಲ್ಲಿ ಜೇವರ್ಗಿ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ನಂತರ ಸತತ ಎಂಟು ಬಾರಿ ಶಾಸಕ ವಿವಿಧ ಇಲಾಖೆಯ ನಗರಾಭಿವೃದ್ಧಿ ಸಮಾಜ ಕಲ್ಯಾಣ ಲೋಕೋಪಯೋಗಿ ಕಂದಾಯ ಗೃಹ ಅಬಕಾರಿ ಯಂತ ಪ್ರಮುಖ ಇಲಾಖೆಯ ಸಚಿವರಾಗಿ 2004 ರಿಂದ 6ರವರೆಗೆ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ರಾಜ್ಯದ 17ನೇ ಮುಖ್ಯಮಂತ್ರಿ ಆಗಿ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ಅವರ ತಾಳ್ಮೆ ಸರಳತೆ ಸಹಕಾರ ಅತ್ಯಂತ ಗಮನ ಹಾರ ಸಂಗತಿ ಕೆಪಿಸಿಸಿ ಅಧ್ಯಕ್ಷರಾಗಿ ವಿರೋಧ ಪಕ್ಷದ ನಾಯಕರಾಗಿ ಹಂಗಾಮಿ ಸಭಾಪತಿಗಳಾಗಿ 1980 ರಲ್ಲಿ ಕಲ್ಬುರ್ಗಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಪಕ್ಷ ನಿಷ್ಠೆಗೆ ಹೆಸರಾಗಿದ್ದ ಧರ್ಮಸಿಂಗ್ ಅವರು ಪಕ್ಷದ ಅದಿ ನಾಯಕಿ ಇಂದಿರಾಗಾಂಧಿ ಅವರ ಸೂಚನೆ ಮೇರೆಗೆ ತಕ್ಷಣ ರಾಜೀನಾಮೆ ನೀಡಿ ಇಂದಿರಾ ಆಪ್ತ ಸ್ಟೀಫನ್ ಅವರನ್ನು ಕಲಬುರ್ಗಿ ಜಿಲ್ಲೆಯಿಂದ ಲೋಕಸಭೆಗೆ ಆಯ್ಕೆ ಮಾಡಿ ಕಳಿಸಿದರು ಅಷ್ಟರ ಮಟ್ಟಿಗೆ ಹೈಕಮಾಂಡಿಗೆ ಆಪ್ತರಾಗಿದ್ದರು ಇದೇ ಕಾರಣಕ್ಕಾಗಿ ಧರ್ಮಸಿಂಗ್ ಅವರು ಸತತ ನಾಲ್ಕು ದಶಕಗಳ ಕಾಲ ರಾಜಕೀಯವಾಗಿ ಅಧಿಕಾರದಲ್ಲಿರಲು ಪ್ರಮುಖ ಕಾರಣ ಮತ್ತು ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ನೇಮಿಸಿದ ಸಮಿತಿಯ ಮುಖ್ಯಸ್ಥರಾಗಿ ನೀಡಿದ ವರದಿ ಆಧಾರದ ಮೇಲೆ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದಿದೆ ಇದು ಅವರ ಪ್ರಯತ್ನದ ಕೊಡುಗೆ ಅವರ ಸರಳತೆ ಜನಪ್ರಿಯತೆ ಅವರನ್ನು ಅಜಾತಶತ್ರು ಬಡವರ ಬಂಧು ಸಂಭಾವಿತ ಸರಳ ಸಜ್ಜನ ಆದರ್ಶ ರಾಜಕಾರಣಿ ಆಗಲು ಹಾಗೂ ಜಿಲ್ಲೆಯ ರಾಜ್ಯದ ಮಟ್ಟಿಗೆ ಸರ್ವ ಪಕ್ಷದ ನಾಯಕನಾಗಿದ್ದರು ನಂತರ ಬೀದರ್ ಲೋಕಸಭಾ ಸದಸ್ಯರಾದರು ಎರಡನೇ ಬಾರಿ ಸೋಲ ಅನುಭವಿಸಿದರು ಮತ್ತು ಎಲ್ಲರಗೂ ಆತ್ಮೀಯ ಸ್ನೇಹ ಸಂಬಂಧ ಹೊಂದಿದರು ಹಾಗೂ ತಾಲೂಕಿನ ಪಕ್ಷದ ಮುಖಂಡರನ್ನು ಅವರವರ ಹೆಸರಿನಿಂದ ಕರೆಯುತ್ತಿದ್ದರು ಮತ್ತು ವಿಶೇಷವಾಗಿ ಕೂಡ ಪ್ರೀತಿಯಿಂದ ಕಾಣುವ ಅತಿ ದೊಡ್ಡ ಗುಣ ವಿದ್ದ ಕಾರಣವೇ ಧರ್ಮಸಿಂಗ್ ಅವರು ದೀರ್ಘಕಾಲ ರಾಜಕೀಯದಲ್ಲಿರಲು ಪ್ರಮುಖ ಕಾರಣವಾಗಿದ್ದು ಅವರು 2017ರ ಜುಲೈ 27ರಂದು ಬೆಂಗಳೂರಿನಲ್ಲಿ ಹೃದಯಘಾತದಿಂದ ನಿಧನರಾದರು ಸರ್ಕಾರ ಅವರ ನಿಧಾನಕ್ಕೆ ಮೂರು ದಿವ್ಸ ಶೋಕಾಚರಣೆ ಮಾಡಿತು ಮತ್ತು ಗ್ರಾಮಸ್ಥರು ಗ್ರಾಮದಲ್ಲಿ ಅವರ ಅಂತಿಮ ಸಂಸ್ಕಾರ ನಡೆಸಲು ಒತ್ತಾಯಿಸಿದರು ಅದರಂತೆ ನೆಲೋಗಿ ಗ್ರಾಮದಲ್ಲಿ ಅಂತ ಕ್ರಿಯೆ ನಡೆಸಲಾಯಿತು ಇಂದು ಅವರ ಪುಣ್ಯ ಸ್ಮರಣೆಯ ನಿಮಿತ್ತ ಅವರಿಗೆ ಶತಾಶತ ನಮನಗಳು





