ಕಲಬುರಗಿ:
- ವೀರಯ್ಯ ಶಾಸ್ತ್ರೀ ಗದಗ ವಿದ್ಯಾರ್ಥಿಗಳಿಗೆ ಕೇವಲ ಅಕ್ಷರ ಜ್ಞಾನವಷ್ಟೆ ಅಲ್ಲದೇ ಸಂಸ್ಕಾರ, ಶಿಸ್ತು, ಮಾನವೀಯ ಮೌಲ್ಯಗಳು ಹಾಗೂ ಸಂವಿಧಾನಿಕ ತತ್ವಗಳು ಕಲಿಸುವಲ್ಲಿ ಶಿಕ್ಷಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ವೇ.ಮೂ. ಪೂಜ್ಯ ವೀರಯ್ಯ ಶಾಸ್ತ್ರೀ ಗದಗ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು. ಒಬ್ಬ ವೈದ್ಯ, ಇಂಜಿನೀಯರ್, ರೈತ, ವಿಜ್ಞಾನಿ ಹಾಗೂ ದೇಶದ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಯಶಸ್ಸಿನ ಹಿಂದೆ ಒಬ್ಬ ಶಿಕ್ಷಕನ ಮಾರ್ಗದರ್ಶನವಿರುವಂತೆ ನಮ್ಮ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಬಬಲಾದ ಶ್ರೀಗಳ ಪುರಾಣ ಪ್ರವಚನದಲ್ಲಿ ದಿನನಿತ್ಯ ಬಂದು ನಮಗೆ ಮಾರ್ಗದರ್ಶನ ಸಲಹೆ ಸಹಕಾರ ಮಾಡುತ್ತಿರುವ ಅನೇಕ ಭಕ್ತರ ಮಧ್ಯದಲ್ಲಿ ಶಿಕ್ಷಕರು ಕೂಡ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ವಿಶೇಷವಾಗಿ ಶಿಕ್ಷಕರ ದಿನಾಚರಣೆ ಇರುವುದರಿಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಶಿಕ್ಷಕರಾದ ಶಿವಶರಣಪ್ಪ ಗೋಗಿ, ಸಿದ್ರಾಮಪ್ಪ ಅಂಡಗಿ, ಶಿವರಾಜ ಪಾಟೀಲ, ಶರಣಮ್ಮ ಬೀದಿಮನಿ, ಸುನಂದಾ ಪಡಶೆಟ್ಟಿ, ಗಣಪತರಾವ ನಿಲೇಗಾರ, ಡಾ. ಓಂ ಪ್ರಕಾಶ ಹೆಬ್ಬಾಳ, ಶಾಂತಯ್ಯ ಬೀದಿಮನಿ, ಮಹಾದೇವಿ ಸಲಗರ, ಚಂದ್ರಕಲಾ ಹೆಬ್ಬಾಳ ಇವರೆಲ್ಲರಿಗೂ ಸನ್ಮಾನಿಸಿ ಗೌರವಿಸಲಾಯಿತು ಕಲಾವಿದರಾದ ಶಿವಕುಮಾರ ಜಾಲಹಳ್ಳಿ, ಅಡಿವೇಶಕುಮಾರ ಗೋಕಾಕ ಮತ್ತು ಕವಿರಾಜ ಪಾಟೀಲ ಅವರು ಗುರುಬ್ರಹ್ಮ, ಗುರುವಿಷ್ಣು ಎಂಬ ಹಾಡಿನ ಮೂಲಕ ಗುರುಗಳ ಸೇವೆ ನೆನೆಸಿಕೊಟ್ಟರು ಎಂದು ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ನಿರೂಪಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಪದಾಧಿಕಾರಿಗಳಾದ ಬಸವಂತರಾವ ಜಾಬಶೆಟ್ಟಿ, ಸುಭಾಷ ಮಂಠಾಳೆ, ಶ್ರೀಮಂತರಾವ ರಾಜಾಪೂರ, ಉದಯಕುಮಾರ ಪಡಶೆಟ್ಟಿ, ಗುರುಲಿಂಗಯ್ಯ ಮಠಪತಿ, ಕಲ್ಯಾಣಪ್ಪ ಮುತ್ತಾ, ವಿರುಪಾಕ್ಷಪ್ಪ ಕಿರಣಗಿ, ತರುಣಶೇಖರ ಬಿರಾದಾರ, ಸಂಜುಕುಮಾರ ಕಾಮಗಿರಿ, ಗಂಗಾಧರ ಕಣ್ಣಿ, ನೂರೊಂದಪ್ಪ ಧಾರಕ್, ಕುಮಾರ ನಿಖಿಲ್, ಕುಮಾರ ಸಮಕ್ಷ್, ಅರುಣಾ ಸಂಘಶೆಟ್ಟಿ, ಸುಮಂಗಲಾ ನಾಗಶೆಟ್ಟಿ, ಜಗದೇವಿ ಚೇಂಗಟಿ ಟೆಂಗಳಿ, ಜಗದೇವಿ ಪ್ಯಾಟಿ, ವಿಜಯಲಕ್ಷ್ಮಿ ರಟಕಲ್ ಹಾಗೂ ಉಪಸ್ಥಿತರಿದ್ದರು.
ಫೋಟೊ : ಪುರಾಣ ವೇದಿಕೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ಯ ಶಿಕ್ಷಕರನ್ನು ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ ಹಾಗೂ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಲಾಯಿತು.(ಶಿವರಾಜ ಅಂಡಗಿ)





