ರಾಯಚೂರು:
ಲಿಂಗಸುಗೂರು ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 1 ಕರಡಕಲ್–ಜಾಲಿಬೆಂಚಿ ರಸ್ತೆಯ ಪಕ್ಕದ ಖಾಸಗಿ ಜಮೀನಿನಲ್ಲಿ ಕ್ರೂರವಾಗಿ ಕೊಲೆಯಾಗಿದ್ದ ಕರಡಕಲ್ ನಿವಾಸಿ ಶ್ರೀಮತಿ ರಾಣಿ (ಗಂಡ: ತಿಪ್ಪಣ್ಣ) ಅವರ ಸಾವಿಗೆ ಕೊನೆಗೂ ನ್ಯಾಯ ದೊರೆತಿದೆ.
ಬಡ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಿರಂತರವಾಗಿ ಧ್ವನಿ ಎತ್ತಿ ಹೋರಾಡಿದ ಮೋಹನ್ ಗೋಸ್ಲೆ ಕರಡಕಲ್ಲ್ SC ST ದೌರ್ಜನ್ಯ ತಡೆ ಸಮಿತಿ ನಾಮನಿರ್ದೇಶಿತ ಸದಸ್ಯರು ಲಿಂಗಸುಗೂರು ಮಸ್ಕಿ ಸಿಂಧನೂರು. ಹಾಗೂ ಎಲ್ಲಾ ನಾಯಕರಿಗೆ ಮತ್ತು ಅವರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
ಅಂಜುಮನ್ ಕಮಿಟಿಯಿಂದ ಸಾಂತ್ವನ ಹಾಗೂ ನೆರವು
ಇಂದು ಅಂಜುಮನ್ ಕಮಿಟಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಕರಡಕಲ್ಲ್ ಗ್ರಾಮದಲ್ಲಿರುವ ನೊಂದ ಕುಟುಂಬದ ಮನೆಗೆ ಭೇಟಿ ನೀಡಿ, ಧೈರ್ಯ ತುಂಬಿ ರೇಷನ್ ಕಿಟ್ ವಿತರಿಸಿದರು.
“ಹುಟ್ಟು-ಸಾವು ಎಂಬುದು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದಿನ ಬಂದೇ ಬರುತ್ತದೆ. ಆದರೆ, ಯಾವುದೇ ಸಮುದಾಯದ ಮೇಲಾಗಲಿ ಅನ್ಯಾಯ, ದೌರ್ಜನ್ಯ ಹಾಗೂ ಕೊಲೆಯಂತಹ ಘಟನೆಗಳು ನಡೆದಾಗ ಯುವಕರು ಅದನ್ನು ಸಹಿಸದೆ ನ್ಯಾಯಕ್ಕಾಗಿ ಧ್ವನಿ ಎತ್ತಬೇಕು,” ಎಂದು ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ನಾಯಕರು ಕರೆ ನೀಡಿದರು.
ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆ ಅಥವಾ ಸಮಸ್ಯೆ ಎದುರಾದರೆ ತಕ್ಷಣ ನಮಗೆ ಅಥವಾ ನಿಮ್ಮ ಜೊತೆಗಿರುವ ನಾಯಕರಿಗೆ ಫೋನ್ ಮಾಡಿ ತಿಳಿಸುವಂತೆ ಅಂಜುಮನ್ ಕಮಿಟಿ ಅಧ್ಯಕ್ಷರು ಮನವಿ ಮಾಡಿದರು
ಈ ಸಂದರ್ಭದಲ್ಲಿ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿಯ ಅಧ್ಯಕ್ಷರು ಹುಸೇನ್ ಭಾಷಾ, ಉಪಾಧ್ಯಕ್ಷರು ಮುಸ್ತಫಾ, ಅಂಜುಮನ್ ಕಮಿಟಿಯ ಸದಸ್ಯರಾದ ವಸೀಮ್ ಭಾಯಿ, ಅಲ್ಲಾಸಾಬ್, ಅಮೀನ್ ಭಾಯಿ, ಉಬೆದ್ ಖುರೇಶಿ, ಅಲ್ಲಾಬಕ್ಷ, ಸಾಬೀರ್ ಖುರೇಶಿ, ಸಿಕಂದರ್ ಮನಿಯಾರ್, ರಹೇಮಾನ್, ಸಲೀಂ, ಅಕ್ಬರ್, ಮಹೇಬೂಬ್, ಮೊಹಮ್ಮದ್, ಅಜ್ಮಿರ್, ಸದ್ದಾಂ, ಸಾದಿಕ್, ಉಮರ್, ವಸೀಮ್ ಅಕ್ರಂ, ಅಬ್ಬಾಸ್, ಹಜರತ್, ಉಮರ್ ಇನ್ನಿತರರು ಉಪಸ್ಥಿತರಿದ್ದರು





