ಬೆಂಗಳೂರು:ಸೋಮವಾರ, 24ನೇ ಆಗಸ್ಟ್ 2026,ರಂದು ಬೆಂಗಳೂರಿನ ಗಾಂಧಿಭವನದಲ್ಲಿನ ಮಹದೇವ ದೇಸಾಯಿ ಸಭಾಂಗಣದಲ್ಲಿ, ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘ (ರಿ.) ಹಾಗೂ ವಿ. ನಾಗರಾಜು ಪ್ರತಿಷ್ಠಾನ (ರಿ.) ಇವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಕರ್ಪೂರಿ ಠಾಕೂರ್ ಹಾಗೂ ವಿ.ಪಿ. ಸಿಂಗ್ ಪ್ರಶಸ್ತಿ ಪ್ರದಾನ ಸಮಾರಂಭ” ಮತ್ತು ಡಾಕ್ಟರ್ ಎಂ ಎಸ್ ಮಣಿ ರವರು ರಚಿಸಿರುವ “ತೊಡರು ಬಳ್ಳಿ- ಸಮಸ್ಯೆಗಳ ಹಾದಿಯಲ್ಲಿ ” ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೃತಿ ಲೋಕಾರ್ಪಣೆಗೊಳಿಸಲಾಯಿತು.
ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಹಕ್ಕುಗಳು ಹಾಗೂ ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಮಾಧ್ಯಮ ಮಿತ್ರರನ್ನು ಗುರುತಿಸಿ ಗೌರವಿಸುವ ಈ ಅರ್ಥಪೂರ್ಣ ವೇದಿಕೆಯಲ್ಲಿ ತಮಿಳುನಾಡು ವಿಸಿಕೆ ಪಕ್ಷದ ಅಧ್ಯಕ್ಷರು ಹಾಗೂ ಲೋಕಸಭಾ ಸಂಸದರಾದ ಶ್ರೀ ಡಾ. ತಿರುಮಾವಳವನ್ ಅವರೊಂದಿಗೆ
ಪಾಲ್ಗೊಂಡು, ಮಾಧ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿದವರಿಗೆ “ಕರ್ಪೂರಿ ಠಾಕೂರ್ ಹಾಗೂ ವಿ.ಪಿ. ಸಿಂಗ್ ಪ್ರಶಸ್ತಿ ಪ್ರದಾನ ಮಾಡಿ, ಐ.ಡಿ ಕಾರ್ಡ್ ವಿತರಿಸಲಾಯಿತು.
ಈ ವೇಳೆ ಶ್ರೀ ಹೆಚ್.ಎನ್. ನಾಗಮೋಹನ್ ದಾಸ್ ರವರು, ಮಾನ್ಯ ನಿವೃತ್ತ ಮುಖ್ಯ ನ್ಯಾಯಾಧೀಶರು ಕರ್ನಾಟಕ ಉಚ್ಚ ನ್ಯಾಯಾಲಯ, ಮಾನ್ಯ ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ.ವಿ.ಪ್ರಭಾಕರ್ ರವರು, ಸೇರಿದಂತೆ ಹಲವು ಹಿರಿಯ ನಾಯಕರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.





