ಧಾರವಾಡ:ತೃತೀಯ ಭಾಷೆಯಾಗಿ ಹಿಂದಿ ವಿಷಯದ ಅಧ್ಯಯನವನ್ನು ಮುಂದುವರಿಸುವ ಹಾಗೂ ಹಿಂದಿ ಬಿ.ಈಡಿ ಪದವಿಧರನ್ನು ೧೫ ಸಾವಿರ ಶಿಕ್ಷಕರ ನೆಮಕಾತಿಯಲ್ಲಿ ಪರಿಗಣಿಸುವಂತೆ .”ಧಾರವಾಡ ಜಿಲ್ಲಾ ಹಿಂದಿ ಭಾಷಾ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘ”, ಒತ್ತಾಯಿಸುತ್ತಿದೆ. ಕಳೆದ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಬೋರ್ಡ ಪರೀಕ್ಷೆಯಲ್ಲಿ ತೃತಿಯ ಭಾಷೆಗಳಿಗೆ ಅಂಕಗಳ ಬದಲಾಗಿ ಗ್ರೇಡ್ ಕೊಡುವ ವಿಯಮಕ್ಕೆ ವಿದ್ಯಾರ್ಥಿಗಳು ಕೋರ್ಟ ಮೂಲಕ ಅಂಕಗಳನ್ನು ಪಡೆದಿರುವರು. ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು ೧೮೦೦ ಶಾಲೆಗಳಲ್ಲಿ ತೃತಿಯ ಭಾಷೆಯ ಬದಲಾಗಿ ಎನ್.ಎಸ್.ಕ್ಯೂ.ಎಫ್. ಅಡಿಯಲ್ಲಿ ಎಐ ವಿಷಯವನ್ನು ಅಳವಡಿಸುತ್ತಿರುವುದರಿಂದ ತೃತಿಯ ಭಾಷಾ ಭೋಧಕರ ಜೀವನದಲ್ಲಿ ಅಲ್ಲೋಲ ಖಲ್ಲೋಲ ಉಂಟಾಗಿದೆ. ಈ ತರಹದ ಸರ್ಕಾರದ ನಿಲುವಿನಿಂದ ಹಿಂದಿ ಭಾಷೆ ಅದ್ಯಯನ ಮಾಡಲಿಚ್ಚಿಸಿರುವ ಅಸಂಖ್ಯಾತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಂಗಾಲಾಗಿರುವುದನ್ನು ನೋಡುತ್ತಿದ್ದೇವೆ.
ಇದೇ ರೀತಿ ಯಾದರೆ ಮುಂದೆ ೧೦ ನೇ ತರಗತಿಗೂ ಕೂಡ ಮುಂದುವರೆದು ಕೇವಲ ೮ನೇ ತರಗತಿಗೆ ಮಾತ್ರ
ತೃತಿಯ ಭಾಷೆ ( ಹಿಂದಿ ) ಸೀಮಿತವಾಗುವುದು. ಈ ನಿಯಮದ ಪರಿಣಾಮದಿಂದಾಗಿ ಕೇವಲ ಮಾದ್ಯಮಿಕ ಶಾಲೆಗಳಿಗೆ ಸೀಮಿತವಾಗದೆ, ಉನ್ನತ ಶಿಕ್ಷಣದ ಪದವಿಪೂರ್ವ ಶಿಕ್ಷಣ, ಪದವಿ ಶಿಕ್ಷಣ ಹಾಗೂ ವಿಶ್ವವಿದ್ಯಾಲಯದವರೆಗೂ ವ್ಯಾಪಿಸುವುದು. ಹಿಂದಿ ಭಾಷೆ ಕೇವಲ ೮ನೇ ತರಗತಿಗೆ ಸೀಮಿತವಾದರೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣದಲ್ಲಿ ಹಿಂದಿ
ಭಾಷೆಯನ್ನು ಹೇಗೆ ಅದ್ಯಯನ ಮಾಡೂವುದು ಸಾವಿರಾರು ಕನ್ನಡಿಗರು ಹಿಂದಿ ಭಾಷೆ ಪ್ರಾದ್ಯಾಪಕರಾಗಿ,
ಉಪನ್ಯಾಸಕರಾಗಿ ಹಾಗೂ ಶಿಕ್ಷಕರಾಗಿ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವರು. ಸಾವಿರಾರು ಕನ್ನಡಿಗ
ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಅದ್ಯಯನ ಮಾಡಿ ರಾಷ್ಟ್ರ ಮಟ್ಟದಲ್ಲಿ ಉದ್ಯೋಗವನ್ನು ಅರಸಿ ಬದುಕು ಕಟ್ಟಿಕೊಳ್ಳಲು ಹಂಬಲಿಸುತ್ತಿದ್ದಾರೆ. ಅವರೆಲ್ಲರ ಭವಿಷ್ಯವು ಈ ನಿಯಮದಿಂದ ನುಚ್ಚುನೂರಾಗುವುದು. ಈಗಾಗಲೇ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಓದುತ್ತಿರುವರು ಅವರ ಪರಿಶ್ರಮ ವ್ಯರ್ಥವಾಗಿ ಮತ್ತು ಕಣಸ್ಸು ಒಡೆದು ಭವಿಷ್ಯ ಅಂಧಕಾರವಯವಾಗುವ ಭಯವು ಆವರಿಸಿದೆ.
ಹಿಂದಿ ಬಿ.ಈಡಿ ಪದವಿಧರನ್ನು ೧೫ ಸಾವಿರ ಶಿಕ್ಷಕರ ನೆಮಕಾತಿಯಲ್ಲಿ ಪರಿಗಣಿಸಬೇಕೆಂದು, ಕಳೆದ ಸುಮಾರು ೧೦ ರಿಂದ ೧೨ ವರ್ಷದ ಅವಧಿಯಲ್ಲಿ ಕರ್ನಾಟಕ ಸರ್ಕಾರ ಯಾವುದೇ ನೇಮಕಾತಿಯನ್ನು ಮಾಡಿರುವುದಿಲ್ಲ. ಈಗ ಸರ್ಕಾರ ೧೫ ಸಾವಿರ ನೇಮಕಾತಿ ಮಾಡಲು ಸಿದ್ದವಾಗಿದೆ. ಈ ೧೫ ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಕೇವಲ ಇಂಗ್ಲೀಷ ಆಂಗ್ಲ) ಮತ್ತು ಕನ್ನಡ ಭಾಷಾ ಶಿಕ್ಷಕರಿಗೆ ಮಾತ್ರ ಅವಕಾಶ ಕೊಟ್ಟು ಉಳಿದ ವಿಷಯಗಳಿಗೆ ಅನ್ಯಾಯವನ್ನು ಎಸಗಿರುವುದು ಕಂಡುಬರುತ್ತಿದೆ.ಸದರ ನೇಮಕಾತಿಗೆ ಸಂಬಂಧಿಸಿದ ನೇಮಕಾತಿ ರಾಜ್ಯಪತ್ರದಲ್ಲಿ ವಿಷಯವಾರು ಶಿಕ್ಷಕರ ನೇಮಕಾತಿ ಸರಿಯಾಗಿ ಮಾಡಿಲ್ಲ ಎಂಬ ಲೋಪದೋಷಗಳ ಮಾಹಿತಿ ಕಂಡುಬಂದ ಸಂದರ್ಭದಲ್ಲಿ ಸರ್ಕಾರ ಹೆಚ್ಚುವರಿಯಾಗಿ ೮೦೦ ಉರ್ದು
ಮತ್ತು ೨೦೦ ಮರಾಠಿ ಭಾಷಾ ಶಿಕ್ಷಕರನ್ನು ತೆಗೆದುಕೊಳ್ಳುತ್ತೇವೆ ಎಂದು ಮಾಧ್ಯಮದ ಮುಂದೆ ಮಾಹಿತಿಯನ್ನು ನೀಡುವ ಸಂದರ್ಭದಲ್ಲಿ ಹಿಂದಿ ಭಾಷಾ ಶಿಕ್ಷಕರ ನೇಮಕಾತಿಯ ಬಗ್ಗೆ ಸರ್ಕಾರ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಈ ದೊರಣೆಯನ್ನು ನಾವುಗಳು ಖಂಡಿಸುತ್ತೇವೆ. ಸರ್ಕಾರ ಕೂಡಲೇ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಹಿಂದಿ ಭಾಷಾ ಶಿಕ್ಷಕರನ್ನು
ಪರಿಗಣಿಸಲೇಬೇಕಾಗಿ ಧಾರವಾಡ ಜಿಲ್ಲಾ ಹಿಂದಿ ಭಾಷಾ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘ” ವತ್ತಾಯಿಸುತ್ತೇವೆ.ಎಚ್. ಎಸ್.ಟಿ. ಅರ್. ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಭಾಷಾ ಶಿಕ್ಷಕರಿಗೆ ಘೋರ ಅನ್ಯಾಯವಾಗಿದೆ ಕರ್ನಾಟಕದಲ್ಲಿ ೪ ಸಾವಿರಕ್ಕಿಂತ ಅಧಿಕ ಹಿಂದಿ ಭಾಷಾ ಶಿಕ್ಷಕರ ಹುದ್ದೆಗಳು ಖಾಲಿ ಇದ್ದಾಗ್ಯೂ ಕೂಡ ಸರ್ಕಾರ
ರಾಜ್ಯಪತ್ರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಕೈಬಿಟ್ಟಿರುವುದು ಸರಿಅಲ್ಲ ಈ ಸರ್ಕಾರ ಕೂಡಲೇ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಹಿಂದಿ ಭಾಷಾ ಶಿಕ್ಷಕರನ್ನು ಪರಿಗಣಿಸಲೇಬೇಕಾಗಿ ವತ್ತಾಯಿಸುತ್ತೇವೆ.ಆದಕಾರಣ ಎನ್. ಎಸ್. ಕ್ಯೂ. ಎಫ್. (ಎಐ) ಎನ್ನುವ ನಿಯಮವನ್ನು ಕೈಬಿಟ್ಟು ತೃತಿಯ ಸಾವಿರಾರು
ಕನ್ನಡಿಗರು ಹಿಂದಿ ಭಾಷೆಯ ನಿಯಮವನ್ನು ಯತಾವತ್ತಾಗಿ ಮುಂದುವರೆಸುತ್ತಾ ಸಾವಿರಾರು ವಿದ್ಯಾರ್ಥಿಗಳಿಗೆ ತಮಗೆ ಇಷ್ಟದ ವಿಷಯವನ್ನು ಅದ್ಯಯನ ಮಾಡಲು ಅವಕಾಶ ಕಲ್ಪಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷವನ್ನು ಕಾಪಾಡಬೇಕಾಗಿ
ನಾವು ತಮ್ಮಲ್ಲಿ ಕಳಕಳಿಯಿಂದ ಬೇಡಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ಪ್ರಮುಖ ಸಂಘಟಕರಾದ ಡಾ. ಎಲ್ ಪಿ
ಲಮಾಣಿ, ಡಾ. ಪ್ರತೀಕ ಮಾಳಿ, ಡಾ. ರಾಜಕುಮಾರ ನಾಯ್ಕ, ಡಾ. ಶೇಖ, ಡಾ. ಶೀಲಾ ಭಂಡಾರಿ, ಡಾ. ಕವಿತಾ ಚಾಂದಗುಡೆ, ಡಾ. ಶೀಲಾ ಭಾಸ್ಕರ, ಡಾ. ನೀಲಾಂಬಿಕಾ ಪಾಟಿಲ, ಡಾ. ಮಮತಾ ಶೀರಗಂಬಿ, ಡಾ. ವಿರೇಶ ಬಿಸನಳ್ಳಿ, ಡಾ. ಜಯಲಕ್ಷಿö್ಮ ಪಾಟಿಲ, ಡಾ. ಶಕಿಲಾ ಮುಸತ್ತಪ್ಪಾ. ಶ್ರೀ ಸತೀಶ ಭಾಸ್ಕರ್, ಶ್ರೀ ಹೊಂಗದಪ್ಪಾ ಹೆಬ್ಬಾಳ, ಅರುಣ ಹೂನ್ನಬಿಂದಗಿ, ತೇಜಸ್ವನಿ, ಡಾ. ಮುಕ್ತಾ ಗುಳಗುಂಡಿ, ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿ ಬಳಗ ಉಪಸ್ಥಿತರಿದ್ದರು.
Home ಸಾರ್ವಜನಿಕ ಧ್ವನಿ ತೃತೀಯ ಭಾಷೆಯಾಗಿ ಹಿಂದಿ ವಿಷಯದ ಅಧ್ಯಯನವನ್ನು ಮುಂದುವರಿಸುವ ಹಾಗೂ ಹಿಂದಿ ಬಿ.ಈಡಿ ಪದವಿಧರನ್ನು ೧೫ ಸಾವಿರ...





