ಒಕ್ಕಲಿಗರ ಮಕ್ಕಳ ಬೆಳವಣಿಗೆಯನ್ನು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಸಹಿಸೋದಿಲ್ಲ ಅನ್ನೋ ಮಾತನ್ನು ಆಡಿದ್ದ ಸಿದ್ದರಾಮಯ್ಯ ಈಗ ಮಾಡಿದ್ದೇನು..?

ತನಗೆ ಬೇಕಾದ ಸಮಯದಲ್ಲಿ ಒಕ್ಕಲಿಗರ ನಾಯಕರನ್ನು ಮುಂದೆ ಬಿಟ್ಟು ದೇವೇಗೌಡರ ಬಗ್ಗೆ ಈ ರೀತಿಯ ಆರೋಪ ಮಾಡಿಸುತ್ತಿದ್ದ ಸಿದ್ದರಾಮಯ್ಯ ಈಗ ಕುರುಬ ಜನಾಂಗಕ್ಕೆ ಮಾಡಿದ್ದು ಅನ್ಯಾಯ ಅಲ್ಲವೇ..?

ಕುರುಬ ಸಮುದಾಯಕ್ಕೆ ಸೇರಿದ ಹೆಣ್ಣು ಮಗಳು ಗಾಯತ್ರಿ ಶಾಂತೇಗೌಡ ಬಿಜೆಪಿಯ ಪ್ರಾಣೇಶ್‌ ವಿರುದ್ಧ ಗೆಲುವು ಕಂಡಿದ್ದರೂ ಇಲ್ಲೀವರೆಗೂ ವಿಧಾನ ಪರಿಷತ್‌ಗೆ ಹೋಗಲು ಸಾಧ್ಯವಾಗಿಲ್ಲ.

ಹೈಕೋರ್ಟ್‌, ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ಮಾಡಿ, ಇದೀಗ ಪರಿಷತ್‌ ಸದಸ್ಯೆ ಆಗಿ ಆಯ್ಕೆ ಆಗಿದ್ದಾರೆ. ಅಲ್ಲೂ ಅನ್ಯಾಯ ಆಗಿದೆ. ಇರಲಿ ಅಂತಾ ಹೈಕಮಾಂಡ್‌ ನಾಯಕರು ಸಚಿವ ಸ್ಥಾನ ಕೊಟ್ಟಿದ್ದರು.

ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘ್ವಿ ಮೂಲಕ ಹೈಕಮಾಂಡ್‌ ನಾಯಕರನ್ನು ಸಂಪರ್ಕಿಸಿ ಲಾಬಿ ಮಾಡಿದ್ದರು. ಸಚಿವ ಸ್ಥಾನವೂ ಒಲಿದು ಬಂದಿತ್ತು.

ಆದರೆ, ನಾನೊಬ್ಬ ಕುರುಬರ ನಾಯಕ ಇದ್ದಾಗಲೂ ನನ್ನನ್ನು ಬಿಟ್ಟು ಅದ್ಹೇಗೆ ಕುರುಬ ಸಮಾಜದ ಒಬ್ಬರನ್ನು ಮಂತ್ರಿ ಮಾಡ್ತೀರಿ ಎಂದು ಹೈಕಮಾಂಡ್‌ ಬಳಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಗಾಯತ್ರಿ ಶಾಂತೇಗೌಡ ಕುರುಬ ಸಮಾಜಕ್ಕೆ ಸೇರಿದರೂ ಸಿದ್ದರಾಮಯ್ಯ, ಸಹಿಸಿಕೊಳ್ಳಲಿಲ್ಲ. ನಮ್ಮ ಸಮಾಜದ ಹೆಣ್ಣು ಮಗಳಿಗೆ ಸಚಿವ ಪಟ್ಟ ಒಲಿದು ಬಂದಿದೆ. ನನ್ನ ಮಗನಂತೆ ಈ ಹೆಣ್ಣು ಮಗಳು ಬೆಳೆಯಲಿ ಎಂದು ಔದಾರ್ಯ ತೋರಬೇಕಿತ್ತು.

ಆದರೆ, ಹೈಕಮಾಂಡ್‌ ಬಳಿ ಪಟ್ಟು ಹಿಡಿದು ಲಿಸ್ಟ್‌ನಲ್ಲಿ ಹೆಸರಿದ್ದರೂ ಗಾಯತ್ರಿ ಶಾಂತೇಗೌಡ ಪ್ರಮಾಣ ಸ್ವೀಕರಿಸದಂತೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.

ಈಗ ಸಿದ್ದರಾಮಯ್ಯ ಅವರನ್ನು ಕುರುವ ಸಮಾಜದ ನಾಯಕರನ್ನು ಬೆಳೆಸುತ್ತಿಲ್ಲ.. ಹೊಟ್ಟೆ ಕಿಚ್ಚಿನ ವ್ಯಕ್ತಿತ್ವ ಅನ್ನಬೇಕಾ..? ಅಥವಾ ಮಹಿಳಾ ವಿರೋಧಿ.. ಹೆಣ್ಣು ಮಗಳು ಸಚಿವೆ ಆಗಲು ಬಿಡಲಿಲ್ಲ ಅನ್ನೋದ.. ಆ ಗಾಯತ್ರಿ ಶಾಂತೇಗೌಡ ಸಂಭ್ರಮಾಚರಣೆ ಮಾಡಿದ್ರಲ್ಲ.. ಅವರ ಮನಸ್ಸು ಹೇಗಾಗಿರಬೇಕು ಈಗ ಅಲ್ವಾ..?

LEAVE A REPLY

Please enter your comment!
Please enter your name here