ವಿಜಯಪುರ: ವಿಜಯಪುರ ನಗರ ದಲ್ಲಿ ಬೃಹತ್ ಪ್ರತಿಭಟನೆಗೆ ಅಹಿಂದ ಸಜ್ಜು *ಕಲಬುರ್ಗಿ ನಗರದ ಹೈಕೋರ್ಟ್ ಕ್ರಾಸ್ ಬಳಿ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರ ವೃತ್ತ ಹಲವಾರು ವರ್ಷಗಳಿಂದ ಇದ್ದು, ಅಲ್ಲಿ ಅಭಿಮಾನಿಗಳು ಪ್ರತಿಷ್ಠಾಪಿಸಿದ 9 ಅಡಿ ಮೂರ್ತಿಯನ್ನು ಪಾಲಿಕೆ ತೆರವುಗೊಳಿಸಿರುವುದು ಅಕ್ಷಮ್ಯ ಅಪರಾಧ. ಎಲ್ಲ ವರ್ಗದ ಬಡವರಿಗಾಗಿ ಇಡೀ ದೇಶಕ್ಕೆ ಮಾದರಿಯಾದ ಪಂಚ ಗ್ಯಾರಂಟಿಗಳನ್ನು ಮತ್ತು ಅನೇಕ ವಿದಾಯಕ ಕಾರ್ಯಕ್ರಮಗಳನ್ನು ನೀಡಿದ ಸಿದ್ದರಾಮಯ್ಯನವರು ಬಡವರ ಶೋಷಿತರ ಧ್ವನಿಯಾಗಿದ್ದಾರೆ. ಅವರೊಬ್ಬ ಅತ್ಯಂತ ಜನಪ್ರಿಯ ನಾಯಕರಲ್ಲದೆ ಬಸವಣ್ಣ ಅಂಬೇಡ್ಕರ್ ಅವರ ಸಮಾನತೆಯ ಹಾದಿಯಲ್ಲಿ ನಡೆಯುತ್ತಿರುವ ಧೀಮಂತ ರಾಜಕಾರಣಿ. ತಕ್ಷಣ ಅವರ ಮೂರ್ತಿಯನ್ನು ಅಧಿಕಾರಿಗಳು ಅಲ್ಲಿಯೇ ಮರು ಸ್ಥಾಪಿಸಬೇಕೆಂದು ಒತ್ತಾಯಿಸಲು ವಿಜಯಪುರ ಜಿಲ್ಲಾ ಕೇಂದ್ರದ ಅಂಬೇಡ್ಕರ್ ವೃತ್ತದಲ್ಲಿ ನಾಳೆ ಶನಿವಾರ ದಿನಾಂಕ 19/09/2026 ರಂದು ಬೆಳಿಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಈ ಪ್ರತಿಭಟನೆಯಲ್ಲಿ ಎಲ್ಲ ತಾಲೂಕುಗಳಿಂದ ಅನೇಕ ಮುಖಂಡರು ಭಾಗವಹಿಸಲಿದ್ದು ಅಭಿಮಾನಿಗಳು ಹಿತೈಷಿಗಳು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಬಲಿಸಬೇಕೆಂದು ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here