ವಿಜಯಪೂರ: ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ತೆರೆಬೀಳುವ ಕಾಲ ಸನ್ನಿಹಿತವಾಗಿದೆ. ಭೀಮಾ ನದಿಯ ಸೇತುವೆಯ ದುರಸ್ತಿ ಹಾಗೂ ಸೇತುವೆಯ ಮೇಲಿನ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಇಂದು (ಆಗಸ್ಟ್.30) ಅಧಿಕೃತ ಉದ್ಘಾಟನಾ ಸಮಾರಂಭ ನಡೆಯಲಿದೆ.
ಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ ಅವರ ತೀವ್ರ ಇಚ್ಛಾಶಕ್ತಿ ಹಾಗೂ ವಿಶೇಷ ಶ್ರಮದಿಂದಾಗಿ ₹3.50 ಕೋಟಿ ವೆಚ್ಚದಲ್ಲಿ ಈ ಸೇತುವೆ ದುರಸ್ತಿ ಹಾಗೂ ರಸ್ತೆ ಕಾಮಗಾರಿ ಸಂಪೂರ್ಣಗೊಂಡಿದೆ. ಶಾಸಕರ ನೇತೃತ್ವದಲ್ಲೇ ನಡೆಯಲಿರುವ ಈ ಕಾರ್ಯಕ್ರಮದಿಂದಾಗಿ ದೇವಣಗಾಂವ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರಲ್ಲಿ ತೀವ್ರ ಹರ್ಷ ವ್ಯಕ್ತವಾಗಿದೆ.
ಸುಗಮ ಸಂಪರ್ಕಕ್ಕೆ ದಾರಿ:
ಶಿಥಿಲಗೊಂಡಿದ್ದ ಭೀಮಾ ನದಿ ಸೇತುವೆ ಹಾಗೂ ಹಾಳಾಗಿದ್ದ ರಸ್ತೆಯನ್ನು ₹3.50 ಕೋಟಿ ಅನುದಾನದಲ್ಲಿ ಕಾಯಕಲ್ಪಗೊಳಿಸಿರುವುದರಿಂದ ದೈನಂದಿನ ಸಂಚಾರಕ್ಕೆ ಇದ್ದ ದೊಡ್ಡ ಅಡಚಣೆ ದೂರವಾಗಿದೆ. ರೈತರ ಕೃಷಿ ಉತ್ಪನ್ನಗಳ ಸಾಗಣೆ, ವಿದ್ಯಾರ್ಥಿಗಳ ಶಾಲಾ-ಕಾಲೇಜು ಪಯಣ ಹಾಗೂ ಸ್ಥಳೀಯ ವ್ಯಾಪಾರ-ವಹಿವಾಟಿಗೆ ಇದು ಪ್ರಮುಖ ಕೊಂಡಿಯಾಗಿದೆ. ಮಳೆಗಾಲ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಎದುರಾಗುತ್ತಿದ್ದ ಸಂಚಾರದ ತೊಂದರೆಗಳು ಈ ನವೀಕೃತ ಸೇತುವೆಯಿಂದಾಗಿ ಶಾಶ್ವತವಾಗಿ ಪರಿಹಾರ
”ದೇವಣಗಾಂವ ಭೀಮಾ ನದಿ ಸೇತುವೆಯ ದುರಸ್ತಿ ಹಾಗೂ ರಸ್ತೆ ನವೀಕರಣ ಕಾಮಗಾರಿಯನ್ನು ₹3.50 ಕೋಟಿ ವೆಚ್ಚದಲ್ಲಿ ಅತ್ಯಂತ ಗುಣಮಟ್ಟದಿಂದ ಪೂರ್ಣಗೊಳಿಸಲಾಗಿದೆ. ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ಸೇತುವೆಯನ್ನು ಆಗಸ್ಟ್ 30ರಂದು ಅಧಿಕೃತವಾಗಿ ಮುಕ್ತಗೊಳಿಸಲಾಗುವುದು.”
”ಸೇತುವೆ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯಲು ಪಡಬಾರದ ಕಷ್ಟ ಪಡುತ್ತಿದ್ದೆವು. ಶಾಸಕ ಅಶೋಕ ಮನಗೂಳಿ ಅವರ ಇಚ್ಛಾಶಕ್ತಿಯಿಂದಾಗಿ ₹3.50 ಕೋಟಿ ಅನುದಾನದಲ್ಲಿ ಸೇತುವೆ ದುರಸ್ತಿಯಾಗಿ ರಸ್ತೆ ಸರಿಹೊಂದಿದ್ದು, ನಮಗೆಲ್ಲ ಅನುಕೂಲವಾಗಿದೆ





