ಕಲಬುರಗಿ:ವಿಭಿನ್ನ ಸಂಗೀತ ದಿನಾಚರಣೆ ಸರಳವಾಗಿ ಹೇಳುವುದಾದರೆ, ಜೂನ್ ೨೧, ವಿಶ್ವ ಸಂಗೀತ ದಿನ ಎಲ್ಲರಿಗೂ ಸಂಗೀತ ತಲುಪಿಸುವ ದಿನವಾದರೆ ಅಗಸ್ಟ್ ೨೪, ವಿಭಿನ್ನ ಸಂಗೀತ ದಿನ. ಇಲ್ಲಿಯವರೆಗೆ ನೀವು ಕೇಳದೆ ಇರುವ ವಿಭಿನ್ನ ಸಂಗೀತ ಕೇಳಿ ಎಂದು ಹೇಳುವ ದಿನವೇ ವಿಭಿನ್ನ ಸಂಗೀತ ದಿನಾಚರಣೆ ಎಂದು ಶಿವರಾಜ ಅಂಡಗಿ ಹೇಳಿದರು. 

ಭಾರತೀಯ ರಾಗ, ತಾಳ, ವಾದ್ಯಗಳ ಪರಂಪರೆಯನ್ನು ಉಳಿಸುವುದು ಸಂಗೀತ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದು ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲಾ ರೀತಿಯ ಸಂಗೀತ ದಿನಾಚರಣೆಯ ಉದ್ದೇಶ ಇಷ್ಟೇ     ಸಂಗೀತವು ಭಾಷೆ, ಜಾತಿ, ಗಡಿಯನ್ನು ಮೀರಿದ ಭಾವನೆಯಾಗಿದೆ ಎನ್ನುತ್ತಾ ಯೋಗದಂತೆ ಸಂಗೀತವೂ ಮಾನವನಿಗೆ ಆರೋಗ್ಯ ಮತ್ತು ನೆಮ್ಮದಿ ಕೊಡುವ ಅಲೌಕಿಕ ಸಂಪತ್ತು ಎಂದು ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಆಶ್ರಯದಲ್ಲಿ ಇತ್ತೀಚಿಗೆ ನಡೆದ “ವಿಭಿನ್ನ ಸಂಗೀತ ದಿನಾಚರಣೆ” ನಿಮಿತ್ಯ ಕಲಾವಿದರಾದ ಶಿವಕುಮಾರ ಹಿರೇಮಠ ಜಾಲಹಳ್ಳಿ ಹಾಗೂ ಅಡಿವೇಶಕುಮಾರ ಗೋಕಾಕ ಕಲಾವಿದರಿಗೆ ಸನ್ಮಾನಿಸಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 

ಇದೇ ಸಂದರ್ಭದಲ್ಲಿ ಸಾಹಸಸಿಂಹ ವಿಷ್ಣುವರ್ದನ್ ನಟಿಸಿರುವ ಮಹಾಕ್ಷತ್ರಿಯ ಚಲನಚಿತ್ರದ ಹಂಸಲೇಖ ಸಂಗೀತದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿರುವ “ಈ ಭೂಮಿ ಬಣ್ಣದ ಬುಗುರಿ” ಹಾಡು ಹಾಡುವ ಮೂಲಕ ಕಲಾವಿದ ಶಿವಕುಮಾರ ಜಾಲಹಳ್ಳಿಯವರು ವಿಭಿನ್ನ ಸಂಗೀತ ನುಡಿಸಿ ಭಕ್ತರ ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. 

ಈ ಸಂದರ್ಭದಲ್ಲಿ ವೀರಯ್ಯ ಶಾಸ್ತ್ರೀ ಗದಗ, ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಆಡಳಿತ ಮಂಡಳಿ ಸದಸ್ಯರಾದ ಗುರುಲಿಂಗಯ್ಯ ಮಠಪತಿ, ಸುಭಾಷ ಮಂಠಾಳೆ, ನಾಗಭೂಷಣ ಹಿಂದೊಡ್ಡಿ, ವಿಶ್ವನಾಥ ರಟಕಲ್, ಬಸವಂತರಾವ ಜಾಬಶೆಟ್ಟಿ, ಉದಯಕುಮಾರ ಪಡಶೆಟ್ಟಿ, ಶಾಂತಯ್ಯ ಬೀದಿಮನಿ, ವಿರುಪಾಕ್ಷಪ್ಪ ಕಿರಣಗಿ ಹಾಗೂ ವಿನೋದಕುಮಾರ ಗೋರೆ, ಬಸವರಾಜ ಸಜ್ಜನ್, ಅಶೋಕ ಬಿರಾದಾರ್, ಮಡಿವಾಳಪ್ಪ ಸಜ್ಜನ್, ಶರಣಯ್ಯ ಮಠಪತಿ, ಅಭಿಷೇಕ್ ಅನದಕರ್, ಕು. ನಿಖಿಲ್, ಕು. ಸಮರ್ಥ್ ಇತರರು ಉಪಸ್ಥಿತರಿದ್ದರು. 

ಫೋಟೊ : ವಿದ್ಯಾನಗರದಲ್ಲಿ “ವಿಭಿನ್ನ ಸಂಗೀತ ದಿನಾಚರಣೆ” ನಿಮಿತ್ಯ ಸಂಗೀತ ಕಲಾವಿದರಾದ ಶಿವಕುಮಾರ ಹಿರೇಮಠ ಜಾಲಹಳ್ಳಿ, ಅಡಿವೇಶಕುಮಾರ ಗೋಕಾಕ್ ರವರನ್ನು ಸನ್ಮಾನಿಸಿದ ಸಂದರ್ಭ ಮಲ್ಲಿನಾಥ ದೇಶಮುಖ, ಶಿವರಾಜ ಅಂಡಗಿ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here