ಬೆಂಗಳೂರು/ದಾವಣಗೆರೆ- ಮಧ್ಯಾಹ್ನ ಉಪಹಾರ ಯೋಜನೆ ಯಡಿ ರಾಜ್ಯಾದ್ಯಂತ ಒಂದು ಲಕ್ಷದ ಹದಿನೈದು ಸಾವಿರ ಬಿಸಿಊಟ ತಯಾರಕ ಮಹಿಳೆಯರಿಗೆ ಕಳೆದ 3 ತಿಂಗಳ ಗೌರವ ಸಂಭಾವನೆಯನ್ನು ಬಿಡುಗಡೆ ಮಾಡದೆ ತಮ್ಮ ಕರ್ತವ್ಯದಲ್ಲಿ ಲೋಪ ಎಸೆಗಿರುವ ಮಧ್ಯಾಹ್ನ ಉಪಹಾರ ಪಿಎಮ್ ಪೋಷಣ್ ರಾಜ್ಯ ಜಂಟಿ ನಿರ್ದೇಶಕರ ವಿರುದ್ಧ ಬೆಂಗಳೂರು ಲೋಕಾಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಬಿಸಿಊಟ ತಯಾರಕರ ಫೆಡರೇಶನ್ ರಾಜ್ಯ ಅಧ್ಯಕ್ಷ ಕಾಂ ಆವರಗೆರೆ ಚಂದ್ರು ತಿಳಿಸಿದ್ದಾರೆ.

ಎಐಟಿಯುಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಊಟ ತಯಾರಕರ ಫೆಡರೇಶನ್ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನ ಮಧ್ಯಾಹ್ನ ಉಪಹಾರ ಯೋಜನೆ ರಾಜ್ಯ ನಿರ್ದೇಶಕರ ಕಚೇರಿಗೆ ಮೊದಲು ತೆರಳಿ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡ ಆವರಗೆರೆ ಚಂದ್ರುರವರು , ಕಚೇರಿಯಲ್ಲಿ ಕುಳಿತುಕೊಂಡು ಬಿಸಿಊಟ ತಯಾರಕರಿಗೆ ವೇತನ ಬಿಡುಗಡೆ ಮಾಡದೆ ನೀವು ಏನು ಕೆಲಸ ಮಾಡುತ್ತಿದ್ದೀರಿ ಎಂದು ದಬಾಯಿಸಿದರು.
ರಾಜ್ಯ ಕಚೇರಿಲ್ಲಿದ್ದ ಎ ಡಿ ಪಿ ಐ ಗೀತಾ ಮೇಡಂ ರವರಿಗೆ ಮನವಿ ಸಲ್ಲಿಸಿ ಕೂಡಲೇ ವೇತನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ, ನಂತರ ರಾಜ್ಯ ಲೋಕಾಯುಕ್ತ ಕಚೇರಿಗೆ ತೆರಳಿ ಮಧ್ಯಾಹ್ನ ಉಪಹಾರ ಪಿಎಮ್ ಪೋಷಣ್ ರಾಜ್ಯ ಜಂಟಿ ನಿರ್ದೇಶಕರ ವಿರುದ್ಧ , ಬಿಸಿಊಟ ತಯಾರಕರಿಗೆ ಗೌರವ ಸಂಭಾವನೆ ನೀಡಲು ಹಣ ಇದ್ದರೂ ಇವರು ಏಕೆ ನಿರ್ಲಕ್ಷೆ ವಹಿಸಿದ್ದಾರೆ ಎನ್ನುವ ಬಗ್ಗೆ ದೂರು ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಆವರಗೆರೆ ಚಂದ್ರು, ಪ್ರಧಾನ ಕಾರ್ಯದರ್ಶಿ ಜಿಜಿ ಅಕ್ಕಮ್ಮ, ಸಂಘಟನಾ ಕಾರ್ಯದರ್ಶಿ ಸರೋಜಾ, ರಾಜ್ಯ ಉಪಾಧ್ಯಕ್ಷರಾದ ಹಲಗಿ ಸುರೇಶ್, ರಾಜ್ಯ ಸಮಿತಿ ಸದಸ್ಯರುಗಳಾದ ಡಿಸಿಎಂ ಸುವರ್ಣಮ್ಮ ಮತ್ತು ಮುಕ್ತೇನಹಳ್ಳಿ ಸರೋಜಮ್ಮ ಇದ್ದರು.

LEAVE A REPLY

Please enter your comment!
Please enter your name here