ಕಲಬುರ್ಗಿ: ಕರ್ನಾಟಕ ರಾಜ್ಯದಲ್ಲಿ ವೀರಶೈವ ಲಿಂಗಾಯತ ಉಪ ಜಾತಿ ಪಟ್ಟಿ ಪ್ರಕಾರ ಒಟ್ಟು 9 ಬಣಜಿಗ ಉಪಜಾತಿಗಳಿದ್ದು ಅವುಗಳು 1) ಆದಿ ಬಣಜಿಗ 2) ಲಿಂಗಾಯತ ಬಣಜಿಗ 3) ದಾಸ ಬಣಜಿಗ 4) ಗಾಜಲು (ಬೆಳೆ) ಬಣಜಿಗ 5) ತೆಲುಗು ಬಣಜಿಗ 6) ಹೂವಿನ ಬಣಜಿಗ 7) ಎಲೆ (ವಿಳೆದೇಲೆ) ಬಣಜಿಗ 8) ದುಂದಿ (ದೂದಿ) ಬಣಜಿಗ 9) ಗಂಧಡಿ ಬಣಜಿಗ ಹೀಗೆ ವೀರಶೈವ ಲಿಂಗಾಯತರಲ್ಲಿ ಒಟ್ಟು 9 ಬಣಜಿಗ ಉಪ ಪಂಗಡಗಳಿದ್ದು ಪ್ರಸ್ತುತ ಕರ್ನಾಟಕ
ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಅನ್ವಯ ಪ್ರವರ್ಗ 2 ಎ ಅಡಿಯಲ್ಲಿ ಒಟ್ಟು 6 ಬಣಜಿಗ ಸಂಬಂಧಿತ ಉಪಜಾತಿಗಳು ಮೀಸಲಾತಿ ಸೌಲಭ್ಯ ಪಡೆಯುತ್ತವೆ ಇದರಲ್ಲಿ ಮೂಲತ ಆದಿ ಅನಾದಿ ಕಾಲದಿಂದಲೂ ಇರುವ ಆದಿ ಬಣಜಿಗ ಸಮಾಜಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸಲು ಸಮಾಜದ ಮುಖಂಡ ವಿಶ್ವನಾಥ ಪಾಟೀಲ ಗವನಳ್ಳಿ ಅವರು ಸರ್ಕಾರ ಆಯೋಗಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ ಹಿಂದುಳಿದ ಇಲಾಖೆಯ ಅಧಿಕೃತ ಜಾತಿ ಪಟ್ಟಿಯ ಪ್ರಕಾರ ಪ್ರವರ್ಗ 2 ಎ ಅಡಿಯಲ್ಲಿ ಬರುವ 6 ಬಣಜಿಗ ಹೆಸರುಗಳು ಈ ರೀತಿ ಇವೆ 1) ಬಣಜಿಗ 2) ಬಣಜಿಗ ಗೌಡ 3) ತೆಲಗ ಬಣಜಿಗ 4) ಶೆಟ್ಟಿ ಬಣಜಿಗ 5) ದಾಸ ಬಣಜಿಗ 6 ) ನಾಯ್ಡು ಬಣಜಿಗ ಸೇರಿದಂತೆ 2 ಎ ಮೀಸಲಾತಿ ಸೌಲಭ್ಯ ಪಡೆಯುತ್ತವೆ ಕರ್ನಾಟಕದಲ್ಲಿ ಬಣಜಿಗ ಸಮುದಾಯದ ವಿವಿಧ ಒಳಪಂಗಡಗಳು ಮತ್ತು ಪ್ರಾದೇಶಿಕ ಹೆಸರುಗಳನ್ನು ಗಣನೆಗೆ ತೆಗೆದುಕೊಂಡು ಇವುಗಳನ್ನು ಒಂದೇ ಮುಖ್ಯ ಶೀರ್ಷಿಕೆಯಡಿ ಉಪಜಾತಿಗಳಾಗಿ ವರ್ಗೀಕರಿಸಲಾಗಿದೆ ಬಣಜಿಗ ಎಂಬುದು ದಕ್ಷಿಣ ಭಾರತದ ಪ್ರಮುಖ ಕೃಷಿ ಮತ್ತು ವ್ಯಾಪಾರ ಸಮುದಾಯ ಇದು ಸಂಸ್ಕೃತದ ವಣಿಕ ಅಥವಾ ವಣಿಜ ಪದದಿಂದ ಬಂದಿದೆ ಕರ್ನಾಟಕದಲ್ಲಿ ಇವರುಗಳು ಉಪ ಜಾಸ್ತಿಯಾಗಿವೆ ಆದಿ ಬಣಜಿಗ ಸಮುದಾಯವು ಅತ್ಯಂತ ಹಳೆಯ ಮತ್ತು ಪ್ರಮುಖ ಪಂಗಡವಾಗಿದೆ ಲಿಂಗಾಯತ ಬಣಜಿಗ ವ್ಯಾಪಾರ ಮಾಡುವವರು ದಾಸ ಬಣಜಿಗ ಧಾರ್ಮಿಕ ಮತ್ತು ಸಾಮಾಜಿಕ ಹಿನ್ನೆಲೆಯುಳ್ಳವರು ಗಾಜಲು/ ಬೆಳೆ ಬಣಜಿಗ ಬಳೆಗಳ ವ್ಯಾಪಾರ ಮಾಡುವರು ತೆಲುಗು ಬಣಜಿಗ ಇವರು ಆಂಧ್ರ ಮತ್ತು ತಮಿಳ್ನಾಡು ಗಡಿಭಾಗದಲ್ಲಿ ಇವರನ್ನು ಬಲಿಜ ಅಂತ ಕೂಡಾ ಕರೆಯುತ್ತಾರೆ ಪೂವ್ವಲು ಬಣಜಿಗ ಹೂವಿನ ವ್ಯಾಪಾರದ ಕಾಯಕ ಮಾಡುವರು ಎಲೆ ಬಣಜಿಗ ವೀಳ್ಯದೆಲೆ ವ್ಯಾಪಾರ ಕೃಷಿ ಕಾಯಕ ಮಾಡುವರು ದುಂದಿ ಬಣಜಿಗ ಮತ್ತು ಗಂಧುಡಿ ಬಣಜಿಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳವರು ಕೆಲವರು ಮೂಲತಃ ಜೈನ ಧರ್ಮದವರು 12 ನೇ ಶತಮಾನದಲ್ಲಿ ಶರಣರ ಕ್ರಾಂತಿ ಹಾಗೂ ತದನಂತರ 16-17 ನೇ ಶತಮಾನದಲ್ಲಿ ಬಣಜಿಗ ರಾದರು ಇವರು ಮೂಲತಃ ವ್ಯಾಪಾರಿಗಳು ಆದಿ ಬಣಜಿಗ ಸಮಾಜದವರು ಪ್ರಥಮರು ಮೂಲತ ಇವರು 4-5 ನೇ ಶತಮಾನದಲ್ಲಿ ಇದ್ದರೂ ಎಂಬ ಇತಿಹಾಸ ಇದೆ ಇ
ಇವರ ಮೂಲ ಕಸುಬು ಗೋವುಗಳ ಪೂಜೆ ರಕ್ಷಣೆ ಕೃಷಿ ಕಾಯಕ ಜೊತೆಗೆ ಶಿವನ ಆರಾಧಕರು ಮತ್ತು ಇವರು ಮೂಲತರು ಎಂಬ ಇತಿಹಾಸ ಇದ್ದರೂ ಕೂಡ ಇವರನ್ನು ಸರ್ಕಾರ ಗೇಟಿನಲ್ಲಿ ಸೇರಿಸದೆ ಹಾಗೂ ಪ್ರವರ್ಗ 2 ಎ ಮೀಸಲಾತಿ ಸೌಲಭ್ಯ ನೀಡಿದೆ ಆಳುವ ವರ್ಗದವರು ನಿರ್ಲಕ್ಷಿಸಿರುವುದು ಖಂಡನೆ ಮತ್ತು ನೋವಿನ ಸಂಗತಿ ಈ ಕೂಡಲೇ ಸರ್ಕಾರ ಐತಿಹಾಸಿಕ ಹಿನ್ನೆಲೆಯುಳ್ಳ ಕೂಲಿ ಕೃಷಿ ಕಾಯಕ ಮಾಡುವ ಅತ್ಯಂತ ಹಿಂದುಳಿದಿರುವ ಆದಿ ಬಣಜಿಗ ಸಮಾಜವನ್ನು ಸರ್ಕಾರದ ಗೆಜೆಟ್ ನಲ್ಲಿ ಸೇರಿಸಿ 2 ಎ ಮೀಸಲಾತಿ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಮತ್ತು ಹಿಂದುಳಿದ ವರ್ಗದ ಆಯೋಗಕ್ಕೆ ಡಾ ಶರಣಪ್ರಕಾಶ್ ಪಾಟೀಲ ಸೇರಿದಂತೆ ಹಲವು ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ

LEAVE A REPLY

Please enter your comment!
Please enter your name here