ದಾವಣಗೆರೆ:ಇದೇ ಅಕ್ಟೋಬರ್ ೧೧ ರಿಂದ ೨೧ ರ ವರೆಗೆ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಉತ್ಸವ ಜರುಗಲಿದೆ. ಉತ್ಸವದ ಅಂಗವಾಗಿ ಹತ್ತು ಹಲವು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ.

ಈ ಬಾರಿಯ ದಸರಾ ಉತ್ಸವಕ್ಕೆ ದಾವಣಗೆರೆಯ ಯುವ ಕಲಾವಿದೆ ಬಿ. ಸುಜಾತಾ ಅವರ ರಂಗ ತಂಡದ ನಾಟಕ ಆಯ್ಕೆಗೊಂಡಿದೆ.

ಅಕ್ಟೋಬರ್ ೧೮ ರಂದು ಸುಜಾತಾ ಸಾರಥ್ಯದ “ಧರ್ಮ ಸಾಮ್ರಾಜ್ಯದಲ್ಲಿ ದುರಾತ್ಮ” ಎಂಬ ಸಾಮಾಜಿಕ ನಾಟಕ ಮೈಸೂರಿನ ಪುರಭವನದಲ್ಲಿ ಪ್ರದರ್ಶನ ಕಾಣಲಿದೆ. ಯಲ್ಲೇಶ್ ಯಾಳಗಿ ಈ ನಾಟಕ ರಚಿಸಿದ್ದು, ಬಿ. ಸುಜಾತಾ ನಾಯಕಿಯಾಗಿ ಅಭಿನಯಿಸುವರು. ಪ್ರಸಾದನ ಕೆ. ಎಸ್. ರಾಮಾಚಾರ್, ನೀಲಗುಂದ ಬಸವನಗೌಡರು ಸಂಗೀತ ನಿರ್ದೇಶನ ಮಾಡಿದ್ದಾರೆ.

LEAVE A REPLY

Please enter your comment!
Please enter your name here