ಬೆಂಗಳೂರು: ವೃತ್ತಿರಂಗಭೂಮಿಯ ಪ್ರಖ್ಯಾತ ನಾಟಕಕಾರರಾದ ಶಿಪಿ.ಬಿ.ಧುತ್ತರಗಿಯವರ ನಾಟಕೋತ್ಸವವನ್ನು ಅಕ್ಟೋಬರ್ ೨೪-೨೫,ರಂದು ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ.ಕೆ.ಎಂ.ವಸುಂಧರಾ ಕೆಎಂಎಸ್,ರವರು ಉದ್ಘಾಟಿಸಲಿದ್ದಾರೆ. ೨೪,ರಂದು ಸಂಜೆ ೬-೦೦ಗಂಟೆಗೆ ಪ್ರಾರಂಭವಾಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ.ಕೆವಿ.ನಾಗರಾಜಮೂರ್ತಿಯವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರಾದ ಡಾ. ಮಲ್ಲಿಕಾರ್ಜುನ ಕಡಕೋಳ ಮತ್ತು ಕೊಪ್ಪಳದ ವೃತ್ತಿ ರಂಗಭೂಮಿ ಕಲಾವಿದೆ ಶ್ರೀಮತಿ ಶ್ರೀದೇವಿ ಧುತ್ತರಗಿ ಯವರು ಭಾಗವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗಕಲಾವಿದರ ಸಂಘ(ರಿ)ಕೊಪ್ಪಳ ಇವರ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕಾದ ಶ್ರೀ ಜೋತಿಲಕ್ಷ್ಮಿ ಮಂಗಳೂರು, ರವೀಂದ್ರ ನಾಥ್ ಸಿರಿವರ,ಜಗದೀಶ್ ಸಿ ಜಾಲ ಮತ್ತು ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ರಾದ ಬಿ.ನೀಲಮ್ಮನವರು ತಮಗೆಲ್ಲರಿಗೂ ಆದರದ ಸ್ವಾಗತವನ್ನು ಈ ಮೂಲಕ ಕೋರಿದ್ದಾರೆ.





