ವಿಜಯಪುರ:ಬಬಲೇಶ್ವರ ಮತಕ್ಷೇತ್ರದ ಸವನಳ್ಳಿ ಹಾಗೂ ಗೊಣಸಗಿ ಗ್ರಾಮದ ಹಲವು ಪ್ರಮುಖರು, ಮುಖಂಡರು ಹಾಗೂ ಯುವಕರು ಭ್ರಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಲೀಲರ ಸಮ್ಮುಖದಲ್ಲಿ ಹೊನಗನಹಳ್ಳಿ ಗ್ರಾಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಾಂತಾಬಾಯಿ ಮಮದಾಪುರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸವನಳ್ಳಿಯಲ್ಲಿ ಮಾಜಿ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಶಾಂತಾಬಾಯಿ ಮಮದಾಪುರ ಅವರ ನೇತೃತ್ವದಲ್ಲಿ ಹಲವು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು, ಕಾಂಗ್ರೆಸ್ ಪಕ್ಷದ ಮೇಲಿನ ವಿಶ್ವಾಸ ಮತ್ತು ಕ್ಷೇತ್ರದ ಅಭಿವೃದ್ಧಿಯ ಮೇಲಿನ ನಿರೀಕ್ಷೆಗೆ ಸಾಕ್ಷಿಯಾಗಿದೆ ಎಂದು ಸಚಿವರು ಹೇಳಿದರು.
ಗೊಣಸಗಿಯ 17 ಕುಟುಂಬಗಳು ಒಟ್ಟಾಗಿ ಕಾಂಗ್ರೆಸ್ ಸೇರಿದ್ದು, ಇನ್ನೂ ಹಲವು ಕುಟುಂಬಗಳು ಪಕ್ಷದೊಂದಿಗೆ ಕೈಜೋಡಿಸುವ ವಿಶ್ವಾಸ ವ್ಯಕ್ತಪಡಿಸಿರುವುದು ಸಂತಸ ತಂದಿದೆ ಎಂದು ಸಚಿವರು ವ್ಯಕ್ತಪಡಿಸಿದ್ದಾರೆ.
ಪಕ್ಷಕ್ಕೆ ಸೇರ್ಪಡೆಗೊಂಡ ಎಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆಂದು ಸಚಿವರು ತಿಳಿಸಿದ್ದಾರೆ. ಹೊಸ ಹಾಗೂ ಹಿರಿಯ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸೋಣವೆಂದರು.
ಸವನಳ್ಳಿಯ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಅಗತ್ಯ ನೀರಿನ ಸೌಲಭ್ಯ ಒದಗಿಸುವುದು ಹಾಗೂ ಗೊಣಸಗಿ ಸೇರಿದಂತೆ ಕ್ಷೇತ್ರದ ಗ್ರಾಮಗಳಿಗೆ ಹೆಚ್ಚಿನ ನೀರು ಹರಿಸಿ ಜನರ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಆದ್ಯತೆ.
ಅಭಿವೃದ್ಧಿಯ ಪಥದಲ್ಲಿ ಬಬಲೇಶ್ವರ ಮತ್ತಷ್ಟು ಮುನ್ನಡೆಯಲಿ ; ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಸಚಿವರು ಕಾರ್ಯಕುತ್ಸಹದ ಮಾತುಗಳನ್ನಾಡಿದ್ದಾರೆ.





