ರಾಯಚೂರು: ನಗರದ ವಾರ್ಡ್ ನಂಬರ್ 32ರ ಅರಬ್ ಮೊಹಲ್ಲಾದ ಸಾರ್ವಜನಿಕರು ಈ ಮೂಲಕ ರಾಯಚೂರು ಜಿಲ್ಲಾಡಳಿತ ಮತ್ತು ನಗರಸಭೆಯ ಗಮನವನ್ನು ಈ ಭಾಗದ ಅತ್ಯಂತ ಗಂಭೀರ ಸಮಸ್ಯೆಯ ಕಡೆಗೆ ಸೆಳೆಯಲು ಬಯಸಿದ್ದಾರೆ. ಪ್ರಸ್ತುತ ರಾಯಚೂರು ವಾರ್ಡ್ ನಂ. 32 (ಅರಬ್ ಮೊಹಲ್ಲಾ) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ.ರಸ್ತೆಯಲ್ಲಿ ಸಾರ್ವಜನಿಕರು ನಡೆದುಕೊಂಡು ಹೋಗುವಾಗ, ಬೈಕ್ ಅಥವಾ ಆಟೋಗಳಲ್ಲಿ ಸಂಚರಿಸುವಾಗ ಬೀದಿ ನಾಯಿಗಳು ಅತ್ಯಂತ ಭೀಕರವಾಗಿ ಜನರ ಹಿಂದೆ ಬಿದ್ದು ಅಟ್ಯಾಕ್ ಮಾಡಲು ಓಡುತ್ತಿವೆ. ಇದರಿಂದಾಗಿ ಬೈಕ್ ಸವಾರರು ಗಾಬರಿಯಿಂದ ಬಿದ್ದು ಈಗಾಗಲೇ ಹಲವರು ಗಾಯಗೊಂಡಿದ್ದಾರೆ. ನಿರಂತರವಾಗಿ ದೊಡ್ಡ ಅಪಘಾತಗಳು (Accidents) ಸಂಭವಿಸುವ ಭೀತಿ ಎದುರಾಗಿದೆ. ಈ ನಾಯಿಗಳು ಈಗಾಗಲೇ ಅನೇಕ ಜನರನ್ನು ಕಚ್ಚಿ ಗಾಯಗೊಳಿಸಿದ್ದು, ಮಕ್ಕಳು ಮತ್ತು ವೃದ್ಧರು ಮನೆಯಿಂದ ಹೊರಗಡೆ ಬರಲು ಹೆದರುವ ವಾತಾವರಣ ನಿರ್ಮಾಣವಾಗಿದೆ.ಸಾರ್ವಜನಿಕರ ಜೀವದ ರಕ್ಷಣೆ ಮಾಡುವುದು ಆಡಳಿತದ ಮುಖ್ಯ ಕರ್ತವ್ಯವಾಗಿದೆ. ಆದ್ದರಿಂದ ನಗರಸಭೆ ಮತ್ತು ಜಿಲ್ಲಾಡಳಿತವು ತಕ್ಷಣವೇ ಎಚ್ಚೆತ್ತುಕೊಂಡು, ವಾರ್ಡ್ ನಂ. 32ರಲ್ಲಿರುವ ಬೀದಿ ನಾಯಿಗಳನ್ನು ಇಲ್ಲಿಂದ ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ. ಒಂದು ವೇಳೆ ಆಡಳಿತ ಮಂಡಳಿಯು ತಕ್ಷಣವೇ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು “- ಸೈಯದ್ ಇಮಾಮ್ ಸಾಬ್ಸಾಮಾಜಿಕ ಕಾರ್ಯಕರ್ತ, ಅರಬ್ ಮೊಹಲ್ಲಾ (ವಾರ್ಡ್ ನಂ. 32), ರಾಯಚೂರು.ಇವರು ಎಚ್ಚರಿಸುತ್ತಿದ್ದಾರೆ

LEAVE A REPLY

Please enter your comment!
Please enter your name here