ಬೆಂಗಳೂರು ನಗರ ಜಿಲ್ಲೆ, ಏಪ್ರಿಲ್ 16: ಏಪ್ರಿಲ್ 8 ರಂದು ರೈಲುಗಾಡಿ ಸಂ:-12627 ಕರ್ನಾಟಕ ಎಕ್ಸ್ ಪ್ರೆಸ್ ರೈಲುಗಾಡಿಯಲ್ಲಿ ಸಿಬ್ಬಂದಿ ಕ್ಲಿನಿಂಗ್ ಮಾಡುವಾಗ ಕೋಚ್ ನಲ್ಲಿ ಸುಮಾರು 09 ತಿಂಗಳ ಹೆಣ್ಣು ಶಿಶು ಸಿಕ್ಕಿದ್ದು, ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ತಿಳಿಸಿರುತ್ತಾರೆ. ಮಗುವಿನ ತಾತ್ಕಲಿಕ ಪಾಲನೆ ಪೋಷಣೆಗಾಗಿ ಕೆನರಾ ಬ್ಯಾಂಕ್ ರಿಲೀಫ್ ಮತ್ತು ವೆಲ್ ಫೇರ್ ಸೊಸೈಟಿ (ಮಾತೃಛಾಯ) ರವರಿಗೆ ನೀಡಲಾಗಿರುತ್ತದೆ. ಪೋಷಕರು ಮಗುವನ್ನು ರೈಲುಗಾಡಿಯಲ್ಲಿ ಬಿಟ್ಟು ಹೋಗಿರುವ ಬಗ್ಗೆ ವರದಿಯಾಗಿದ್ದು, ಮಗುವಿನ ಪೋಷಕರನ್ನು ಪತ್ತೆ ಹಚ್ಚುವ ಸಲುವಾಗಿ ಏಪ್ರಿಲ್ 13, 2026 ರಂದು ಬೆಂಗಳೂರು ನಗರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಶುವಿನ ಚಹರೆ: 1.5 ಅಡಿ ಎತ್ತರ ,ಸಾಧಾರಣ ಶರೀರ, ಗೋಧಿ ಮೈಬಣ್ಣ,ದುಂಡು ಮುಖ, ತಲೆಯಲ್ಲಿ 2.5 ಇಂಚು ಕಪ್ಪು ಕೂದಲು, ಬಿಳಿ ಬಣ‍್ಣದ ಬನಿಯಾನ್ ಧರಿಸಿರುತ್ತಾಳೆ.ಕತ್ತಿನಲ್ಲಿ ಒಂದು ಕಪ್ಪು ದಾರದ ಹಿಡಿಕೆ ಇರುವ ತಾಯಿತಾ ಇರುತ್ತದೆ. ಎಡಗಣ್ಣು ಮೆಳ್ಳಗಣ್ಣಾಗಿರುತ್ತದೆ.
ಮಗುವಿನ ಪಾಲಕರು ಪತ್ತೆಯಾದಲ್ಲಿ ಬೆಂಗಳೂರು ನಗರ ರೈಲ್ವೇ ಪೊಲೀಸ್ ಠಾಣೆಗೆ ಅಥವಾ ದೂರವಾಣಿ ಸಂಖ್ಯೆ : 080-22156370, 9480802113, 9480802140, 6268626916 ಅಥವಾ ಇ-ಮೇಲ್ blorecityrly@ksp.gov.in ಇಲ್ಲಿಗೆ ಮಾಹಿತಿ ನೀಡಬಹುದು ಎಂದು ಬೆಂಗಳೂರು ನಗರ ರೈಲ್ವೇ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





