ಚಿತ್ತಾಪುರ : ಇಲ್ಲಿನ ಪ್ರಸಿದ್ಧ ನಾಗವಿ ಎಲ್ಲಮ್ಮ ದೇವಸ್ಥಾನದ ನಾಗಾವಿಯು ಪ್ರಾಚೀನ ಗ್ರಾಮವಾಗಿದ್ದು ರಾಷ್ಟ್ರಕೂಟರ ಆಳ್ವಿಕೆಕಾಲದಲ್ಲಿ ದೇಶದ ಪ್ರಮುಖ 2ನೇ ಅತಿ ದೊಡ್ಡ ವಿಶ್ವವಿದ್ಯಾಲಯ ಶಿಕ್ಷಣ ಕೇಂದ್ರವಾಗಿತ್ತು ಇಲ್ಲಿನ ಸಾವಿರ ವರ್ಷಗಳಷ್ಟು ಪುರಾತನವಾದ ದೇವಸ್ಥಾನದಲ್ಲಿನ ಯಲ್ಲಮ್ಮ ದೇವಿಯನ್ನು ರಾಷ್ಟ್ರಕೂಟರ ಕುಲದೇವತೆಯೆಂದು ಆರಾಧಿಸಲಾಗುತ್ತದೆ ನಾಗಾವಿ ಇತಿಹಾಸವು ರಾಷ್ಟ್ರಕೂಟರು ಕಲ್ಯಾಣದ ಚಾಲುಕ್ಯರು ಮತ್ತು ಬಹುಮನಿ ಸುಲ್ತಾನಂತ ವಿವಿಧ ರಾಜವಂಶಗಳ ಆಳ್ವಿಕೆಯನ್ನು ದಾಖಲಿಸುತ್ತದೆ ಹಾಗಾಗಿ ಇದು ಮಿಶ್ರ ವಾಸ್ತುಶಿಲ್ಪ ಶೈಲಿಯಲ್ಲಿ ಗೋಚರಿಸುತ್ತದೆ ಇಂದಿಗೂ ಭಕ್ತರು ದೂರದಿಂದಲೂ ಸಾವಿರಾರು ಜನ ಜಾತ್ರೆ ಪಲ್ಲಕ್ಕಿ ಉತ್ಸವಕ್ಕೆ ಲಕ್ಷಾಂತರ ಜನರು ಬಂದು ತಾಯಿಯ ದರ್ಶನ ಪಡೆದು ಧನ್ಯರಾಗುತ್ತಾರೆ ದೇವಿಯು ಭಕ್ತಿಯಿಂದ ಬೇಡಿದವರಿಗೆ ಬೇಡಿದನ್ನು ನೀಡುತ್ತಾಳೆಂಬ ಅಚಲವಾದ ವಿಶ್ವಾಸ ಕೂಡ ಭಕ್ತರಲ್ಲಿದೆ ರಾಜವಂಶಗಳ ಅನುಕ್ರಮ ರಾಷ್ಟ್ರಕೂಟರು (753 -974 ಕ್ರಿ. ಶ.) ನಾಗವಿಯನ್ನು ಶಿಕ್ಷಣ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿದರು ಕಲ್ಯಾಣದ ಚಾಲುಕ್ಯರು 10-12 ನೇ ಶತಮಾನ ನಾಗಾವಿ ದೇವಸ್ಥಾನಕ್ಕೆ ಕೊಡುಗೆ ನೀಡಿದರು ಬಹುಮನಿ ಸುಲ್ತಾನರು 14 – 16 ನೇ ಶತಮಾನ ಇಸ್ಲಾಮಿಕ್ ಪ್ರಭಾವ ಮತ್ತು ವಾಸ್ತು ಶೈಲಿ ವಾಸ್ತುಶಿಲ್ಪದ ಮಿಶ್ರಣ ದ್ರಾವಿಡ ಶೈಲಿ ರಾಷ್ಟ್ರಕೂಟ/ಚಾಲುಕ್ಯ ಗೋಪುರ ಕಂಬಗಳು ಕೆತ್ತನೆಗಳು ಕಮಾನುಗಳು ಇತರೆ ನಾಗಾವಿ ಚಿತ್ತಾಪುರ ಮತ್ತು (ಗದಗ- ಹುಬ್ಬಳ್ಳಿ) ಸಮೀಪ ಇನ್ನೊಂದು ನಾಗಾವಿ ಊರು ರಾಷ್ಟ್ರಕೂಟರ ಕಾಲದಲ್ಲಿ ಇರುವುದು ಮತ್ತೊಂದು ವಿಶೇಷ (8 ನೇ 10ನೇ ಶತಮಾನ) ತಕ್ಷಶಿಲೆ ಅಧುನಿಕ-ತಕ್ಷಶಿಲಾ ಪಾಕಿಸ್ತಾನ) ಭಾರತದ ಅತ್ಯಂತ ಪುರಾತನ ವಿಶ್ವವಿದ್ಯಾಲಯಗಳ (ಘಟಿಕಾಸ್ಥಾನ) ಐತಿಹಾಸಿಕ ತಾಣವಾಗಿದೆ ರಾಷ್ಟ್ರಕೂಟರ ರಾಜ ಸೋಮೇಶ್ವರರು 9-10 ನೇ ಶತಮಾನದಲ್ಲಿ ಸ್ಥಾಪಿಸಿದರು 13 ನೇ ಶತಮಾನದವರಿಗೂ ಅಸ್ತಿತ್ವದಲ್ಲಿತ್ತು
ನಾಗಾವಿಯಲ್ಲಿ ತೀವ್ರವಾದ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಹೇಳಲಾಗುತ್ತದೆ ಸಂಶೋಧಕರು ಇದನ್ನು ನಳಂದ ವಿಶ್ವವಿದ್ಯಾಲಯದ ಮಾದರಿಯಲ್ಲಿರುವುದರಿಂದ ದಕ್ಷಿಣದ ತಕ್ಷಶಿಲೆ ಎಂದು ಕರೆಯುತ್ತಾರೆ ಈ ಪ್ರದೇಶದಲ್ಲಿ ಕಂಡು ಬರುವ ಶಾಸನಗಳು ಮತ್ತು ಐತಿಹಾಸಿಕ ದಾಖಲೆಗಳ ಪ್ರಕಾರ ಪ್ರಾಚೀನ ಪಟ್ಟಣವು ಆ ಕಾಲದ ಪ್ರಸಿದ್ಧ ಘಟಿಕಾ ಸ್ಥಾನವನ್ನು ಹೊಂದಿತು ಘಟಿಕಾ ಸ್ಥಾನವೆಂದರೆ ಕಲಿಕೆಯ ಸ್ಥಳ ಇಂದಿನ ವಿದ್ಯಾಲಯದ ಸ್ಥಾನಮಾನವನ್ನು ಹೊಂದಿತು ಪುರಾತತ್ವ ವಿಶೇಷಗಳು ಅವಶೇಷಗಳು ನಾಗಾವಿ ಗ್ರಾಮದ ರವಲಯದಲ್ಲಿ ಅಂದಿನ ಸೈಕ್ನಿಕ ಕೇಂದ್ರದ ಕುರುವಗಳು ಶಿಲಾಶಾಸನಗಳು ಮತ್ತು ಸುಂದರವಾದ ಕೆತ್ತನೆಗಳನ್ನು ಒಳಗೊಂಡ 60 ಕಂಬಗಳ ಗುಡಿ ರಾಮೇಶ್ವರ ದೇವಸ್ಥಾನ ಹಾಗೂ ಪ್ರಸಿದ್ಧ ನಾಗವೇ ಎಲ್ಲಮ್ಮ ದೇವಾಲಯ ಇಂದಿಗೂ ಇವೆ ನಕ್ಷತ್ರ ಮತ್ತು ಉತ್ಖನನ ಯೋಜನೆ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಸರ್ಕಾರ ಪುರತತ್ವ ಇಲಾಖೆಯ ಐತಿಹಾಸಿಕ ಶೈಕ್ಷಣಿಕ ಕೇಂದ್ರವನ್ನು ಅಭಿವೃದ್ಧಿಪಡಿಸಲು ಮತ್ತು ಇದರ ವೈಭವವನ್ನು ಗುರು ಸ್ಥಾಪಿಸಲು ಸುಮಾರು 100 ಎಕರೆ ಜಾಗದಲ್ಲಿ ವಿಶೇಷ ಉತ್ಕನ್ನನ ಹಾಗೂ ಜೀರ್ಣೋದ್ಧಾರ ಕಾರ್ಯೇಜವನ್ನು ರೂಪಿಸುತ್ತಿದ್ದು ಅದಾಗು ಪ್ರಸ್ತುತ ಈ ತಾಣದ ಹಲವು ಭಾಗಗಳು ಶಿಥಿಲಾವಸ್ಥೆಯಲ್ಲಿವೆ
ಕರ್ನಾಟಕ ಪದದ ಉಲ್ಲೇಖ ಈ ನಾಗಾವಿ ತಾಣದಲ್ಲಿ ದೊರೆತಿರುವ ಕ್ರಿಸ್ತಶಕ 1058ರ ಕಾಲದ ಶಿಲಾಶಾಸನದಲ್ಲಿ ಕರ್ನಾಟಕ ಎಂಬ ಪದದ ಉಲ್ಲೇಖ ವಿರುವುದು ಇದರ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ ಹೀಗಾಗಿ ಚಿತ್ತಾಪುರ ನಾಗಾವಿ ಎಂಬುದು ನಮ್ಮ ಹೆಮ್ಮೆಯ ಶೈಕ್ಷಣಿಕ ಇತಿಹಾಸವನ್ನು ಸಾರ್ವತ್ರಿಕ ಒಂದು ಅಪರೂಪದ ಐತಿಹಾಸಿಕ ಸ್ಮಾರಕ ಮತ್ತು ಪುರಾತತ್ವ ತಾಣವಾಗಿ ಅಸ್ತಿತ್ವದಲ್ಲಿದೆ ಸುಮಾರು 100 ಎಕರಗೂ ಹೆಚ್ಚು ಪ್ರದೇಶ್ ವ್ಯಾಪಿಯನ್ನು ಹೊಂದಿರುವ ನಾಗಾವಿಯನ್ನು ರಾಜ್ಯ ಸರ್ಕಾರ ಪ್ರಾರ್ಥನಾ ಉತ್ಕನನ ಇಲಾಖೆಯ ವರದಿ ಪ್ರಕಾರ ಅಭಿವೃದ್ಧಿಪಡಿಸಲು ಮುಂದಾಗಬೇಕೆಂದು ಸಾಮಾಜಿಕ ಹೋರಾಟಗಾರ ವಿಶ್ವನಾಥ್ ಪಾಟೀಲ್ ಅವರು ಸರ್ಕಾರ ಮತ್ತು ಜಿಲ್ಲೆಯ ಸಚಿವರಲ್ಲಿ ಒತ್ತಾಯಪಡಿಸಿದ್ದಾರೆ

LEAVE A REPLY

Please enter your comment!
Please enter your name here