ದಾವಣಗೆರೆ:ಕರ್ನಾಟಕದಲ್ಲಿ ಒಟ್ಟು 56696 ಮತಕ್ಷೇತ್ರಗಳಿಂದಾ
10800000 ಮತದಾರರನ್ನ ಕೈ ಬಿಡಲಾಗಿದೆ. ಇದರ ಪ್ರಕಾರ
10800000/56696= 190.
ಅಂದರೆ ಒಂದೊಂದು ಮತಕ್ಷೇತ್ರದಿಂದಾ ಸರಾಸರಿ 190 ಮತದಾರರನ್ನ ಕೈ ಬಿಡಲಾಗಿದೆ. ಇದನ್ನೇ ದೊಡ್ಡ ಅಪರಾಧವೆನ್ನುವಂತೆ ಬಿಂಬಿಸುವ ಹಾಗೂ ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣಾ ಆಯೋಗವನ್ನ ಅಪರಾಧಿ ಮಾಡಲು ಹೊರಟ ಜನಕ್ಕೆ ಏನನ್ನಬೇಕೋ. ಈ ದೇಶದ ಸಂವಿಧಾನದ ಮೇಲೆ ಸತತವಾಗಿ ದಾಳಿಯಾಗುತ್ತಲೇ ಇದೆ. ಅದು ಪರಕೀಯರಿಂದಲೂ ಹಾಗೂ ಸ್ವಾರ್ಥಿಗಳಾದ ನಮ್ಮವರಿಂದಲೂ ಮುಂದುವರೆದಿದೆ. ದೇಶದ ಸಂವಿಧಾನ ಅಪಾಯ ಎದುರಿಸುವ ಸಮಯದಲ್ಲಿ ನಮ್ಮ ಪ್ರತಿಭಟನೆ ಅವಶ್ಯಕ.ಅದು ನಮ್ಮ ಆದ್ಯ ಕರ್ತವ್ಯ.
2002 ರಿಂದಾ ಇಲ್ಲಿಯವರೆಗೆ 24 ವರ್ಷಗಳಲ್ಲಿ ಸತ್ತವರ, ಸ್ಥಳಾಂತರವಾದವರ, ಹಾಗೂ ಒಬ್ಬನೇ ಮತದಾರನ ಹೆಸರು ಎರಡು ಮೂರು ಕಡೆಗಳಲ್ಲಿ ಇರುವುದು,ಮತ್ತು ಭಾರತೀಯ ಪೌರತ್ವವೇ ಇಲ್ಲದವರ ಹೆಸರನ್ನು ತೆಗೆದು ಹಾಕಲು ಶ್ರಮ ಪಡುತ್ತಿರುವ ಮತದಾನದ ಸಿಬ್ಬಂದಿಗೆ ಈ ರೀತಿಯ ಅವಮಾನ ಮಾಡುವುದು ಎಷ್ಟು ಸರಿ. ಹಾಗೊಂದು ವೇಳೆ ಅಲ್ಲಿರುವ ಯಾವುದಾದರೂ ಮತದಾರರ ಹೆಸರು ಕೈ ಬಿಟ್ಟು ಹೋಗಿದ್ದರೆ ಅದನ್ನು ಸೇರಿಸುವುದಕ್ಕೆ ಕೆಲವು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಅದು ಎಲ್ಲಾ ನಾಗರೀಕರ ಆದ್ಯ ಕರ್ತವ್ಯವೂ ಹೌದು . ಇದನ್ನು ಬಿಟ್ಟು ರಾಜಕಾರಣಕ್ಕಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ಅಶಕ್ತಗೊಳಿಸುವಂತಹ ಯತ್ನಗಳನ್ನು ಯಾರು ಮಾಡಬಾರದು. ಈ ದೇಶದ ಸತ್ಪ್ರಜೆಯಾಗಿ ನಮ್ಮ ಹಕ್ಕುಗಳಿಗೆ ಹೋರಾಡುವಂತೆ ಕರ್ತವ್ಯಗಳನ್ನು ನಿಭಾಯಿಸಬೇಕಲ್ಲವೇ. ಎಲ್ಲಿಯಾದರೂ ಏನಾದರೂ ತಪ್ಪಾದರೆ ಅದನ್ನ ಸರಿಪಡಿಸುವ ಶಕ್ತಿ ಯನ್ನ ನಮ್ಮ ಸಂವಿಧಾನ ನೀಡಿದೆ, ಅದನ್ನು ಬಿಟ್ಟು ವಿನಾಕಾರಣ ಹೋರಾಟ ಮಾಡುವ ಮನಸ್ಥಿತಿ ಯಾರಿಗೂ ಸಲ್ಲದು. ಹಾಗೆಂದಾಕ್ಷಣ ಹೋರಾಟ ಮಾಡಬಾರದೆಂದೇನಲ್ಲ ಯಾವುದೇ ವಿಷಯದ ಬಗೆಗೆ ಪರ ಮತ್ತು ವಿರೋಧ ಇದ್ದೇ ಇರುತ್ತದೆ. ಎಲ್ಲರಿಗೂ ಅದನ್ನು ಖಂಡಿಸುವ ಹಾಗೂ ಅದರ ವಿರುದ್ಧ ಹೋರಾಡುವ ಹಕ್ಕನ್ನು ನಮ್ಮ ಸಂವಿಧಾನ ಕರ್ತೃಗಳು ನೀಡಿದ್ದಾರೆ. ಹಾಗೆಂದಾಕ್ಷಣ ಖಂಡಿಸಲಿಕೆಂದೇ ಹೋರಾಟ ಸಲ್ಲದು.ಹಾಗಾಗಿ ಏನೋ ಆಗಬಾರದ್ದು ಆಗಿಹೋಯಿತು ಎಂದು ಸಮಾಜದಲ್ಲಿ ಕೋಲಾಹಲ ಎಬ್ಬಿಸುವುದು ರಾಷ್ಟ್ರ ದ್ರೋಹಕ್ಕೆ ಸಮನಾದದ್ದು. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಹಕ್ಕು ಮತ್ತು ಕರ್ತವ್ಯಗಳಿಗೆ ಸಮನಾಗಿ ಸ್ಪಂದಿಸುವ ಗುಣವನ್ನು ಅಳವಡಿಸಿಕೊಳ್ಳೋಣ.

LEAVE A REPLY

Please enter your comment!
Please enter your name here