ರಿಂಗ್ ರೋಡ್ ಶುಭಾಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ನೋಡಿದ್ದೆ. ಚಿಕ್ಕ ಕೋಣೆಯೊಂದರ ತೆರೆದ ಕಿಟಕಿಯ ಹಿಂದೆ ನಿಂತಿದ್ದಳು. ಸುಂದರ ಮುಖದ ಹಿಂದೆ ಅಡಗಿದ್ದ ಕ್ರೌರ್ಯ ನೆನಪಾಗಿ ಬೆಚ್ಚಿಬೀಳುವಂತಾಗಿತ್ತು ನನಗೆ.

ಅಲ್ಲೇ ಪಕ್ಕದಲ್ಲಿದ್ದ ತುಳಸಿ ಕಟ್ಟೆಗೆ ಪೂರ್ತಿ ಗರತಿ ಗೆಟ್ಟಪ್ಪಿನಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ಮತ್ತೊಬ್ಬ ಹಂತಕಿಯನ್ನು ನೋಡಿ ನಾನು ಬೆಚ್ಚಿಬಿದ್ದಿದ್ದೆ. ಆಕೆ ಯಾರೆಂದರೆ ಗಂಡ ಲಿಕ್ಕರ್ ಉದ್ಯಮಿ ಅಶೋಕ್ ಗುತ್ತೇದಾರ್ ನನ್ನು ಪ್ರಿಯಕರ ಸುಭಾಷ್ ಪಾಟೀಲ ನೊಂದಿಗೆ ಸೇರಿ ಗುಂಡಿಟ್ಟು ಹತ್ಯೆಗೈದ “ಪದ್ಮಾವತಿ”.

ಮೊನ್ನೆ ರಿಂಗ್ ರೋಡ್ ಶುಭಾ ಮತ್ತು Blue drum ಪತಿಹಂತಕಿ ಮುಸ್ಕಾನ್ ರಸ್ತೊಗಿಯ ಜೀವಾವಧಿ ಶಿಕ್ಷೆಯ ಪ್ರಕಟವಾದಾಗ ನನಗೆ ಈ ಘಟನೆಗಳು ನೆನಪಾದವು..

(ಸಂದರ್ಭ : ಆರೋಗ್ಯಇಲಾಖೆ ವತಿಯಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾವು ನಡೆಸಿದ ಕಾರ್ಯಕ್ರಮ)

“ಗಂಡನಾದವನು ಬೇಡವಾದರೆ ಅವನನ್ನು ಬಿಟ್ಚು ಹೋಗಿ. ಸಾಯಿಸ್ತೀರಿ ಯಾಕೆ? ನಿಮಗೆ ಮದುವೆ ಇಷ್ಚವಿಲ್ಲದಿದ್ದರೆ ದೂರವಾಗಿ। ಬೇರೆಯವರ ಮಕ್ಕಳನ್ನು ಸಾಯಿಸಿ ನಿಮಗೇನು ಸಿಗುತ್ತದೆ?? ಅಷ್ಟು ಕ್ರೂರವಾಗಿ ಸಾಯಿಸಲು ಮನಸ್ಸಾದರೂ ಹೇಗೆ ಬರುತ್ತದೆ??

ಇದನ್ನು ಪ್ರಶ್ನಿಸುತ್ತಿರುವುದು ಮಗನನ್ನು ಕಳೆದುಕೊಂಡ ಒಬ್ಬ ತಾಯಿ. ಸೋದರನನ್ನು ಕಳೆದುಕೊಂಡ ಒಬ್ಬ ಅಕ್ಕ..

ಸಂತಸದ ಸುದ್ದಿ ಏನೆಂದರೆ ಹಂತಕಿ ರಿಂಗ್ ರೋಡ್ ಶುಭಾಗೆ ರಾಜ್ಯ ಸಚಿವ ಸಂಪುಟ ಕ್ಷಮಾದಾನ ನಿರಾಕರಿಸಿರುವುದು.

ಎರಡನೆದು ಗಂಡ ಸೌರಭ್ ರಾಜಪೂತ್ ( merchant navy ಅಧಿಕಾರಿ) ನನ್ನು ಹತ್ಯೆಗೈದು ದೇಹವನ್ನು 15 ತುಂಡುಗಳಾಗಿ ಕತ್ತರಿಸಿ Blue drum ನಲ್ಲಿ ಮುಚ್ಚಿಟ್ಟ ಮುಸ್ಕಾನ್ ರಸ್ತೊಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಇಬ್ಬರಿಗೂ ಮೀರತ್ ಕೋರ್ಟ್ ಮರಣದಂಡನೆ ವಿಧಿಸಿದೆ..

ಶುಭಾ ಶಂಕರ ನಾರಾಯಣ ಸಾಪ್ಟ್ ವೇರ್ ಎಂಜಿನಿಯರ್ ಗಿರೀಶ್ ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ರಿಂಗ್ ರೋಡ್ ಗೆ ಕರೆಯಿಸಿ ಪ್ರಿಯಕರ ಅರುಣ್ ವರ್ಮಾ ನೊಂದಿಗೆ ಸೇರಿ ಭಾವಿ ಪತಿಯನ್ನು ಹತ್ಯೆಗೈದ ಪಾಪಿ.
ಮೇಲ್ಕಂಡ ಎರಡೂ ಘಟನೆಗಳು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದ್ದವು.

ಗಿರೀಶ್ ಅಕ್ಕ ಸುನೀತಾ ತನ್ನ ಸೋದರನಿಗೆ ನ್ಯಾಯ ದೊರಕಿಸಿ ಕೊಡಲು ಕಳೆ 23 ವರ್ಷದಿಂದ ಮತ್ತು ಸಾಹಿಲ್ ಶುಕ್ಲಾ ತಾಯಿ ಕಳೆದೆರಡು ವರ್ಷದಿಂದ ತನ್ನ ಮಗನಿಗಾಗಿ ನಿರಂತರ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಗಂಡನನ್ನು , ಭಾವಿ ಪತಿಯನ್ನು ಕೊಲ್ಲುವ cold blooded murder ಗಳು , cruel trend ಗಳು ಇತ್ತೀಚೆಗೆ ಹೆಚ್ಚಾಗಿವೆ. ರಿಂಗ್ ರೋಡ್ ಶುಭಾ ಪ್ರಕರಣವೇ ಈ ಕ್ಯಾಟಗರಿಯಲ್ಲಿ ಮೊದಲನೆಯದು.

Rule of the land ತಪ್ಪು ಮಾಡಿದವನಿಗೆ ಶಿಕ್ಷೆ ಆಗಲೇಬೇಕು. ಹಂತಕಿ ರಿಂಗ್ ರೋಡ್ ಶುಭಾ ಆಗಲಿ, ಮುಸ್ಕಾನ್ ರಸ್ತೋಗಿ ಇರಲಿ ಇಬ್ಬರೂ ಕೊನೆಯವರೆಗೂ ನಾಲ್ಕು ಗೋಡೆಗಳ ಮಧ್ಯೆ ನರಳಿ ನರಳಿ ಸಾಯಬೇಕು. ಆಗಲೇ ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ..
( ದುರಂತವೆಂದರೆ ಈ ಘಟನೆಯಲ್ಲಿ ಹಂತಕಿಯ ಮಗುವಿದೆ. ಹೆತ್ತವರು ಮಾಡುವ ತಪ್ಪಿಗೆ ಮಕ್ಕಳು ಜೈಲುಪಾಲಾಗುವುದು/ಜೀವನಪೂರ್ತಿ ಹೆತ್ತವರ ಆಸರೆಯಿಲ್ಲದೇ ಬದುಕುವಂತಾಗುವುದು ಅತ್ಯಂತ ದುರದೃಷ್ಟಕರ)(ಕೃಪೆ:ಶಾರದಾ ನಾಯಕ್ ಫೇಸ್ಬುಕ್)

LEAVE A REPLY

Please enter your comment!
Please enter your name here