ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ನನಗೆ ಹಾಗೂ ನನ್ನ ಕುಟುಂಬಸ್ಥರಿಗೆ ಬಹಿರಂಗವಾಗಿಯೇ ಜೀವದ ಧಮ್ಕಿ ಹಾಕಿ ಕೆಟ್ಟ ಪದಗಳಿಂದ ನಿಂದಿಸಿದ್ದು, ತಕ್ಷಣ ಅವರ ಮೇಲೆ ಕ್ರಮ ಕೈಗೊಂಡು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದರು. ಜೊತೆಗೆ ಇದಕ್ಕೆ ಪೂರಕವಾಗಿ ವಿಡಿಯೋಗಳನ್ನೊಳಗೊಂಡ ಪೆನ್ ಡ್ರೈವ್ ಸಹ ಇಲಾಖೆಗೆ ಹಸ್ತಾಂತರಿಸಿದರು.
ಈ ವೇಳೆ ವಿವರಣೆ ನೀಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ, ಕೆಲ ದಿನಗಳ ಹಿಂದೆ ಶಾಸಕ ಯತ್ನಾಳರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಬಹಿರಂಗವಾಗಿಯೇ ನನಗೆ, ನನ್ನ ಮಕ್ಕಳನ್ನೂ ಸೇರಿ ಜೀವ ಬೆದರಿಕೆ ಹಾಕಿದ್ದಾರೆ, ಅಸಂಬದ್ಧವಾದ ಪದ ಪ್ರಯೋಗಿಸಿ ನನಗೆ ಜೀವ ಬೆದರಿಕೆ ಹಾಕಿದ್ದಾರೆ, ಸಾರ್ವಜನಿಕವಾಗಿಯೇ ನಿಂದನೆ ಮಾಡಿದ್ದಾರೆ, ಈ ಹಿಂದೆಯೂ ಸಹ ನನಗೆ ಅನೇಕ ಬಾರಿ ಈ ರೀತಿ ಜೀವದ ಬೆದರಿಕೆ ಹಾಕುವ ಕೆಲಸ ಮಾಡಿದ್ದಾರೆ, ಅವರು ನನ್ನ ವಿರುದ್ಧ ಹಾಕಿರುವ ಜೀವದ ಬೆದರಿಕೆಗೆ ಸಂಬಂಧಿಸಿದ ವಿಡಿಯೋಗಳನ್ನು ಸಹ ಸಾಕ್ಷಿಗಳನ್ನು ನೀಡಿರುವೆ, ನನ್ನ ರಾಜಕೀಯ ಬೆಳವಣಿಗೆ ಸಹಿಸದೇ ಈ ರೀತಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ, ಕೂಡಲೇ ಈ ಪ್ರಕರಣದ ತನಿಖೆ ನಡೆಸುವಂತೆ ಪರಶುರಾಮ ರಜಪೂತ .
ಯುವ ಮುಖಂಡ ನಂದು ಗಡಗಿ ಮೊದಲಾದವರು ಉಪಸ್ಥಿತರಿದ್ದರು.





