ಕಲಬುರಗಿ:

  • ಶಿವರಾಜ ಅಂಡಗಿ ಇಂಜಿನಿಯರ್ ಅಂದರೆ ಕೇವಲ ಮನೆ ಕಟ್ಟುವವನು ಅಥವಾ ಮಷೀನ್ ರಿಪೇರಿ ಮಾಡುವವನು ಅಲ್ಲ. ಇಂಜಿನೀಯರ್ ಅಂದರೆ ಸಮಸ್ಯೆಯನ್ನು ನೋಡಿ ವಿಜ್ಞಾನ ಮತ್ತು ಗಣಿತವನ್ನು ಬಳಸಿ ಮನಸ್ಸಿಗೆ ಉಪಯುಕ್ತವಾದ ಪರಿಹಾರವನ್ನು ಕಂಡುಹಿಡಿಯುವವನೇ ಇಂಜಿನೀಯರ್ ಎಂದು ಶಿವರಾಜ ಅಂಡಗಿ ಮಾತನಾಡಿದರು. ವಿದ್ಯಾನಗರದ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ಹಮ್ಮಿಕೊಂಡ ಗಣೇಶೋತ್ಸವ ಹಾಗೂ ಸಂಘದ ೨೯ನೇ ವಾರ್ಷಿಕೋತ್ಸವ ನಿಮಿತ್ಯ ಹಮ್ಮಿಕೊಂಡ ಕ್ರೀಡಾ ಚಟುವಟಿಕೆ ಸಂದರ್ಭದಲ್ಲಿ ಇಂಜಿನಿರ‍್ಸ್ ದಿನಾಚರಣೆ ನಿಮಿತ್ಯ ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂಘದಲ್ಲಿರುವ ಇಂಜಿನೀಯರ್‌ಗಳಿಗೆ ಸನ್ಮಾನಿಸಿ ಗೌರವಿಸುತ್ತಾ ಮಾತನಾಡಿದ ಇವರು ವಕೀಲರು ಇಂಜಿನಿಯರ್, ಡಾಕ್ಟರ್, ಉದ್ಯಮಿಗಳು, ಪ್ರೋಫೇಸರ್ ಆಗಿ ಹೀಗೆ ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜೊತೆಗೆ ಸಂಘದಲ್ಲಿ ನಡೆಯುವ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸನಾತನ ಧರ್ಮ ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಬಹಳ ಹೆಮ್ಮೆಯ ವಿಷಯ ಎನ್ನುತ್ತಾ ಸಾಂಕೇತಿಕವಾಗಿ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಜಿನಿಯರ್‌ಗಳಾದ ಲಿಂಗರಾಜ ಕಾಳೆ, ಸಂತೋಷ ನಿಂಬೂರ, ಸಂಗಮೇಶ ಹೆಬ್ಬಾಳ, ಧನರಾಜ ಹೆಬ್ಬಾಳ, ಪ್ರೀಯಾ ನಾಗಶೆಟ್ಟಿ, ಕೃತಿಕಾ ಹೆಬ್ಬಾಳ, ರಶ್ಮಿ ನಿಂಬೂರ ಇವರನ್ನು ಕಾಲೋನಿ ಹಿರಿಯ ಮಹಿಳೆಯರಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಕರಣಕುಮಾರ ಆಂದೋಲಾ, ಶಶಿಧರ ಪ್ಯಾಟಿ, ಸಂಜು ತಂಬಾಕೆ, ಶಿವರಾಜ ಕೋಳಕೂರ, ಡಾ. ಗುರುರಾಜ ಮುಗಳಿ, ಶ್ರೀವತ್ಸ ಸಂಗೋಳಗಿ, ಮಹಾದೇವ ತಂಬಾಕೆ, ಸುನೀಲ ಮುತ್ತಾ, ಅಮೀತ್ ಸಿಕೇದ, ವಿಶ್ವನಾಥ ಮಠಪತಿ, ಧರ್ಮರಾಜ ಹೆಬ್ಬಾಳ, ಅನೀಲಕುಮಾರ ನಾಗೂರ, ಶಿವರಾಜ ಪಾಟೀಲ ಮಾಡ್ಯಾಳ, ಅರುಣಕುಮಾರ ಪಾಟೀಲ, ನಿಖಿತ್ ಮುಗಳಿ, ಹರ್ಷಾ ಸಂಗಶೆಟ್ಟಿ ಹಾಗೂ ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here