ಬೆಂಗಳೂರು, ಡಿ.31; ಪ್ರೆಸ್ ಕ್ಲಬ್ ಆಫ್ ಬೆಂಗಳೂರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ,, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಪ್ರದಾನ ಮಾಡಿದರು.
ಹಿರಿಯ ಪತ್ರಕರ್ತರಾದ ಮೃತ್ಯುಂಜಯ, ಲೋಚನೇಶ್ ಹೂಗಾರ್, ಎಂ.ಎನ್. ಗುರುಮೂರ್ತಿ, ನಂಜುಂಡಪ್ಪ.ವಿ, ಪ್ರಭುದೇವ್ ಶಾಸ್ತ್ರಿಮಠ್, ಬಿ.ಆರ್. ವಿಶ್ವನಾಥ್, ಛಾಯಾಗ್ರಾಹಕ ನಾಗಾರಾಜ್ ಗಡೇಕಲ್, ನವೀನ್ ಅಮ್ಮೆಂಬಳ ಮತ್ತಿತರೆ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದರು.
ಶಾಸಕರಾದ ಷಡಕ್ಷರಿ, ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್, ಪ್ರಧಾನ ಕಾರ್ಯ ಶಿವಕುಮಾರ್ ಬೆಳ್ಳಿತಟ್ಟೆ, ಉಪಾಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಜಿ.ವೈ. ಮಂಜುನಾಥ್, ಜಂಟಿ ಕಾರ್ಯದರ್ಶಿ ಧರಣೇಶ್, ಖಜಾಂಚಿ ಶರಣಬಸಪ್ಪ ಎ.ಎಚ್. ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here