ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ 2025 ರ ಜಾಗತಿಕ AI ವೈಬ್ರೆನ್ಸಿ ಸೂಚ್ಯಂಕದಲ್ಲಿ ಭಾರತವು ಕೇವಲ ಒಂದು ವರ್ಷದಲ್ಲಿ ನಾಲ್ಕು ಸ್ಥಾನಗಳನ್ನು ಜಿಗಿದು ಈಗ ಜಾಗತಿಕವಾಗಿ 3 ನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಚೀನಾ ಮಾತ್ರ ಭಾರತಕ್ಕಿಂತ ಮುಂದಿವೆ. ಈ ಶ್ರೇಯಾಂಕವು ಆರ್ & ಡಿ, ಪ್ರತಿಭೆ, ಜವಾಬ್ದಾರಿಯುತ AI, ನೀತಿ ಮತ್ತು ಮೂಲಸೌಕರ್ಯ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿದೆ. ಭಾರತದ ಶ್ರೇಯಾಂಕದ ಏರಿಕೆಗೆ ಪ್ರಬಲವಾದ ಸಂಶೋಧನಾ ಫಲಿತಾಂಶ, ಅಧಿಕ ಪೇಟೆಂಟ್, ಬೆಳೆಯುತ್ತಿರುವ AI ಉದ್ಯೋಗ ಮಾರುಕಟ್ಟೆ ಮತ್ತು ವಿಸ್ತರಿಸುತ್ತಿರುವ ಡಿಜಿಟಲ್ ಮೂಲಸೌಕರ್ಯ ಕಾರಣ. ಪ್ರತಿಭೆಯ ವಿಷಯದಲ್ಲಿ, ಭಾರತವು ಈಗಾಗಲೇ ಜಾಗತಿಕವಾಗಿ 2 ನೇ ಸ್ಥಾನದಲ್ಲಿದೆ. ಇದು ನಮ್ಮ AI ಕಾರ್ಯಪಡೆ ಮತ್ತು ಶಿಕ್ಷಣ ಇಕೋ ಸಿಸ್ಟಂನ ಸಾಮರ್ಥ್ಯ ಮತ್ತು ಆಳವನ್ನು ಪ್ರತಿಬಿಂಬಿಸುತ್ತದೆ.

ಕರ್ನಾಟಕವು ಈ ಆವೇಗಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ನಾವು ರಾಜ್ಯವನ್ನು ಭಾರತದ AI ನಾಯಕನ ಸ್ಥಾನದಲ್ಲಿ ಇರಿಸುತ್ತಿದ್ದೇವೆ. ನಮ್ಮ ಸ್ಟಾರ್ಟ್‌ಅಪ್ ನೀತಿ 2025-30 ಸದೃಢ AI ಮತ್ತು ಡೀಪ್‌ಟೆಕ್ ಲಕ್ಷ್ಯದೊಂದಿಗೆ 25,000 ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು ₹518 ಕೋಟಿ ಅನುದಾನ ಒದಗಿಸಲು ಬದ್ಧವಾಗಿದೆ.

ಡೀಪ್‌ಟೆಕ್ ದಶಕದ ₹600 ಕೋಟಿ ನಿಧಿ, ಹೊಸ ಐಟಿ ನೀತಿ 2025-30 ಮತ್ತು IISc ನಲ್ಲಿರುವ ARTPARK ನಂತಹ ಸಂಸ್ಥೆಗಳು, 9 ಎಕರೆ BRAINZ (ಬೆಂಗಳೂರು ರೊಬೊಟಿಕ್ಸ್ ಮತ್ತು AI ಇನ್ನೋವೇಶನ್ ವಲಯ) ಕ್ಯಾಂಪಸ್ ಹಾಗೂ ಟೈರ್-2 ಮತ್ತು ಟೈರ್ 3 ನಗರಗಳಲ್ಲಿನ ವೇಗವರ್ಧಕಗಳಿಂದ ಬೆಂಬಲಿತವಾದ ₹1,000 ಕೋಟಿ ಅನುದಾನದ AI ಹಾಗೂ ರೊಬೊಟಿಕ್ಸ್ ಸಾಮರ್ಥ್ಯ ಇವೆಲ್ಲವೂ ಒಟ್ಟಾಗಿ AI ಅನ್ನು R&D ಯಿಂದ ರಫ್ತಿಗೆ ವೃದ್ಧಿಸಲು ಅಗತ್ಯವಾದ ಶಕ್ತಿಶಾಲಿ ನೀತಿ-ನಿಧಿ-ಸಿಒಇ ಸಂಪನ್ಮೂಲವನ್ನು ಸೃಷ್ಟಿಸಿವೆ.

LEAVE A REPLY

Please enter your comment!
Please enter your name here