ಮೂಡಲಗಿ:ಅ,10-ತಾಲೂಕಿನ ಯಾದವಾಡ ಗ್ರಾಮದಲ್ಲಿ ಸ್ವಚ್ಛತಾ ಹಿ ಸೇವಾ ಆಂದೋಲ ಅಡಿಯಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚಿಕನ್ ಅಂಗಡಿ, ಮಟನ್ ಅಂಗಡಿ, ಮದ್ಯದ ಅಂಗಡಿ ಹಾಗೂ ಕಟಿಂಗ್ ಅಂಗಡಿಗಳ ಮಾಲೀಕರ ಸಭೆಯನ್ನು ಗ್ರಾಮ ಪಂಚಾಯತ ಕಾರ್ಯಲಯದಲ್ಲಿ ಕರೆಯಲಾಗಿತ್ತು.
ಗ್ರಾಮವನ್ನು ಸ್ವಚ್ಛವಾಗಿಡಲು ನಡೆದ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಕಲ್ಮೇಶ ಗಾಣಗಿ ಅವರು ವಹಿಸಿ ಮಾತನಾಡಿದರು.ಗ್ರಾಮವನ್ನು ನಾವೆಲ್ಲರೂ ಸ್ವಚ್ಛವಾಗಿ ಇಟ್ಟುಕೊಳ್ಳುವ ಕೆಲಸ ಸದಾ ನಡೆಯಬೇಕು.ಸ್ವಚ್ಛವಾಗಿ ಇಡುವುದರಿಂದ ರೋಗದಿಂದ ದೂರವಾಗುತ್ತೇವೆ.ಎಲ್ಲ ಅಂಗಡಿ ಮಾಕೀಕರು ನಮ್ಮ ಜೊತೆಯಲ್ಲಿ ಸಹಾಕರ ನೀಡಿರಿ,ನಿಮ್ಮ ಸಹಕಾರ ಬಹಳ ಮುಖ್ಯ ಎಂದು ಹೇಳಿದರು. ಸಭೆಯಲ್ಲಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಅರ್ಜುನ ಕಮತಗಿ, ಕಾರ್ಯದರ್ಶಿಗಳಾದ ಈರಪ್ಪ ಕುಂದರಗಿ ಹಾಗೂ ಗ್ರಾಮದ ಅಂಗಡಿಕಾರರ ಮಾಲೀಕರು ಭಾಗವಹಿಸಿದ್ದರು.





