ಬೆಂಗಳೂರು:ರಂಗಭೂಮಿಯೂ ನಿರಂತರವಾಗಿ ಚಲಿಸಲು ರಂಗ ಸಂಘಟಕರ ಪಾತ್ರ ದೊಡ್ಡದು,ಒಂದು ನಾಟಕ ತಯಾರಾಗಲು ನಟನೆ, ನಿರ್ದೇಶನ, ಸಂಘಟನೆಯ ಸಂಗಮವೆ ರಂಗಭೂಮಿಯ ಉಳಿವಿಗೆ ಭದ್ರ ಬುನಾದಿಯಾಗಿದೆ, ಈ ರಂಗ ಪರಂಪರೆಯನ್ನು ಸಿಜಿಕೆಯಂತ ಕ್ರಿಯಾಶೀಲ ರಂಗ ಸಂಘಟಕರು ಜೀವಂತವಾಗಿ ಇಟ್ಟು ಹೋಗಿದ್ದಾರೆ. ಅದನ್ನು ಉಳಿಸುವ ಕೆಲಸ ಇಂದಿನ ಸಂಘಟಕರು ಮುಂದುವರೆಸಲಿ ಎಂದು ಸಂಸ್ಕೃತಿ ಚಿಂತಕರಾದ ಡಾ.ಎಚ್. ಆರ್. ಸ್ವಾಮಿ ಅಭಿಪ್ರಾಯಪಟ್ಟರು.

ಸಂಸ ಥಿಯೇಟರ್ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ ಸಂಸ ನಾಟಕೋತ್ಸವದಲ್ಲಿ ಸಮಾರೋಪ ನುಡಿಗಳನ್ನಾಡುತ್ತಾ ಸಂಸ ಥಿಯೇಟರ್ ಕಳೆದ 18ವರ್ಷಗಳಿಂದ ಕನ್ನಡ ರಂಗ ಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದೆ. ಹತ್ತಾರು ನಾಟಕೋತ್ಸವಗನ್ನು ಆಯೋಜಿಸಿದೆ ಜೊತೆಗೆ ಮೈಸೂರಿನ ಡಾ.ಗಂಗೂಭಾಯಿ ಹಾನಗಲ್ ಪ್ರದರ್ಶನ ಕಲ ವಿಶ್ವ ವಿದ್ಯಾಲಯ ದಿಂದ ಡಿಪ್ಲೋಮ ಸರ್ಟಿಫಿಕೇಟ್ ನೀಡುವ ರಂಗಶಾಲೆಯನ್ನು ತೆರೆದು ಒಳ್ಳೆಯ ಕೆಲಸ ಮಾಡುತ್ತಿದೆ. ಇಂತಹ ರಂಗಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲರಾದ ಡಾ. ಕೂಡ್ಲುರು ವೆಂಕಟಪ್ಪ, ಕನ್ಯಾಕುಮಾರಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ. ಎಚ್. ತುಕಾರಾಂ, ಬರಹಗಾರರಾದ ಗಿರಿಯಪ್ಪ ಎಂ. ದಮ್ಮಪ್ರಿಯ ಹಾಜರಿದ್ದರು. ಕಾರ್ಯಕ್ರಮದ ನಂತರ ಬಿಎಂಟಿಸಿಯ ಕಲಾಕುಟೀರ ಕಲಾವಿದರಿಂದ ಪೊಲೀಸ್ ಅಧಿಕಾರಿಗಳಾಗಿದ್ದ ಡಾ. ಮಧುಕರ್ ಶೆಟ್ಟಿ ಅವರ ಜೀವನ ಆಧಾರಿತ ಖಾಕಿಯೊಳಗಿನ ಸಂತ ನಾಟಕ ಸಿದ್ದರಾಮ ಕೊಪ್ಪರ್ ಅವರ ನಿರ್ದೇಶನದಲ್ಲಿ ಪ್ರದರ್ಶನವಾಯಿತು.

LEAVE A REPLY

Please enter your comment!
Please enter your name here