ಇತೀಚೆಗೆ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ನಗರದ ಪಂಜುರ್ಲಿ ಹೋಟೆಲ್ ಸಭಾ ಭವನದಲ್ಲಿ ಶ್ರೀ ಆರ್ಯ ದುರ್ಗಾದೇವಿ ಪ್ರಕಾಶನ ಹಾಗೂ ಮಾನ್ವಿತಾ ಸ್ಟುಡಿಯೋ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ “ಮಾನ್ವಿತಾ ಕಲೋತ್ಸವ” ಕಲೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನವನ್ನು ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ತ್ರಿಭಾಷಾ ಸಾಹಿತಿಗಳಾದ ಡಾ. ಎಲ್. ಪಿ. ಲಮಾಣಿ ಹಿಂದಿ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಅವರಿಗೆ ಮಾನ್ವಿತಾ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಶ್ರೀಯುತ ಲಮಾಣಿ ಅವರು ಹಿಂದಿ, ಕನ್ನಡ ಹಾಗೂ ಬಂಜಾರ ಭಾಷೆಯಲ್ಲಿ 20 ಕ್ಕೂ ಅಧಿಕ ಕವನ, ಸಾಹಿತ್ಯ, ಸಂಪಾದಿತ ಹಾಗೂ ವಿಮರ್ಶಾತ್ಮಕ ಕೃತಿಗಳನ್ನು ರಚಿಸಿರುತ್ತಾರೆ ಮತ್ತು 75 ಕ್ಕೂ ಅಧಿಕ ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಲೇಖನಗಳನ್ನು ಪ್ರಕಟಿಸುತ್ತಾರೆ.
ಸಾಹಿತ್ಯ ಸೇವೆಯ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಹಸ್ರಾರು ಜನ ಬಡ ವಿದ್ಯಾರ್ಥಿಗಳಿಗೆ ಸಹಾಯ ಸಹಕಾರವನ್ನು ಮಾಡುವುದರೊಂದಿಗೆ ಪ್ರೇರಣಾದಾಯಿ ವ್ಯಕ್ತಿತ್ವವವು ಬೆಳೆಸಿಕೊಂಡು ಬಂದಿರುತ್ತಾರೆ. ಶ್ರೀಯುತ ಲಮಾಣಿ ಹಲವು ಅವರ ಸಾಹಿತ್ಯಿಕ ಹಾಗೂ ಸಾಮಾಜಮುಖ ಸಾಧನೆಯನ್ನು ಪರಿಗಣಿಸಿ ಮಾನ್ವಿತಾ ಸ್ಟುಡಿಯೋ ಹಾಗೂ ಶ್ರೀ ಆರ್ಯ ದುರ್ಗಾದೇವಿ ಪ್ರಕಾಶನ ಮುಂಡಗೋಡ ಸಾಹಿತ್ಯ ರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದ ಸಂದರ್ಭದಲ್ಲಿ ಕವಿವಿ ಧಾರವಾಡ ಹಿಂದಿ ವಿಭಾಗದ ವಿದ್ಯಾರ್ಥಿಗಳ ಬಳಗ ಡಾ. ಎಲ್. ಪಿ. ಲಮಾಣಿ ಅಭಿಮಾನಿ ಬಳಗದ ಪ್ರಮುಖರಾದ ಶ್ರೀ ಮಹೇಶ್ ರಾಥೋಡ್, ಶ್ರೀ ಚೇತನ ಜಾಧವ ಶ್ರೀಮತಿ ಗಾಯತ್ರಿ ರಾಥೋಡ ಅಪಾರ ಆಸಕ್ತಿದಾಯಕ ಬಂಜಾರ ಸಮುದಾಯದ ಅಭಿಮಾನಿ ಬಳಗ ಹರ್ಷ ಭಕ್ತಪಡಿಸಿ ಶುಭಕೋರಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here