ಅಂದಿನ ಪರಿಸ್ಥಿತಿ ಇಂದು ಏನಾದರೂ ಬಂದಿದ್ದರೆ ಫಕೀರಪ್ಪ ಜೋಳಿಗೆ ಹಿಡಿದುಕೊಂಡು ಓಡಿ ಹೋಗುತ್ತಿದ್ದರು.
ಅಂದು ಚಿದಂಬರಂ ಚಿನ್ನ ಕೊಳ್ಳಬೇಡಿ ಎಂದರು ವೀರಪ್ಪ ಮೊಯ್ಲಿ ಪೆಟ್ರೋಲ್ ಬಂಕ್ ಮುಚ್ಚುವ ಮಾತಾಡಿದರು ಎಂದು ಇಂದಿಗೂ ಬೊಬ್ಬೆ ಹೊಡೆಯುವ ಅಂಧಭಕ್ತರೇ ಸ್ವಲ್ಪ ಕಣ್ಣು ತೆರೆದು ಈ ಅಂಕಿಅಂಶಗಳನ್ನು ನೋಡಿ ಸತ್ಯ ಅರಿಯುವ ಕನಿಷ್ಠ ಜ್ಞಾನ ನಿಮಗಿದೆಯೇ ಅಂದು ಸರ್ಕಾರ ಅಂತಹ ಮಾತುಗಳನ್ನಾಡಲು ಇದ್ದ ಅಂತರಾಷ್ಟ್ರೀಯ ಕಾರಣಗಳೇನು ಮತ್ತು ಇಂದು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿದ್ದರೂ ದೇಶದ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿರುವುದು ಏಕೆ ಎಂದು ಓದಿ.
2013ರ ಅಂದಿನ ನೈಜ ಪರಿಸ್ಥಿತಿ ಮತ್ತು ಜಾಗತಿಕ ಒತ್ತಡ
2013ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸರಾಸರಿ 108 ರಿಂದ 112 ಡಾಲರ್ ವರೆಗೆ ಇತ್ತು ಸಿರಿಯಾ ಬಿಕ್ಕಟ್ಟು ಮತ್ತು ಮಧ್ಯಪ್ರಾಚ್ಯದ ಅಸ್ಥಿರತೆಯಿಂದಾಗಿ ತೈಲ ಪೂರೈಕೆ ಕಷ್ಟವಾಗಿದ್ದ ಕಾಲವದು ಭಾರತವು ಅಂದು ತನ್ನ ವಿದೇಶಿ ವಿನಿಮಯ ಮೀಸಲನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿತ್ತು ಏಕೆಂದರೆ ಕೇವಲ ತೈಲ ಬೆಲೆ ಏರಿಕೆ ಮಾತ್ರವಲ್ಲದೆ ಅಮೇರಿಕದ ಆರ್ಥಿಕ ನೀತಿಗಳಿಂದಾಗಿ ಭಾರತೀಯ ರೂಪಾಯಿ ಮೌಲ್ಯವು ಕೇವಲ ನಾಲ್ಕು ತಿಂಗಳಲ್ಲಿ 54 ರಿಂದ 68 ರೂಪಾಯಿಗೆ ಕುಸಿದಿತ್ತು ಇಂತಹ ಡಬಲ್ ಹೊಡೆತದಿಂದಾಗಿ ದೇಶದ ಆರ್ಥಿಕತೆಯನ್ನು ಉಳಿಸಲು ಅಂದಿನ ಹಣಕಾಸು ಸಚಿವ ಚಿದಂಬರಂ ಅವರು ಚಿನ್ನದ ಆಮದು ಕಡಿಮೆ ಮಾಡಿ ಎಂದು ಮನವಿ ಮಾಡಿದ್ದರು ಏಕೆಂದರೆ ಚಿನ್ನದ ಆಮದಿಗೆ ನಾವು ಅತಿ ಹೆಚ್ಚು ಡಾಲರ್ ವೆಚ್ಚ ಮಾಡಬೇಕಿತ್ತು ಇನ್ನು ವೀರಪ್ಪ ಮೊಯ್ಲಿ ಅವರು ಪೆಟ್ರೋಲ್ ಬಂಕ್ ಮುಚ್ಚುವ ಪ್ರಸ್ತಾಪ ಮಾಡಿದ್ದು ಇಂಧನ ಸಂರಕ್ಷಣೆಯ ಜಾಗೃತಿಗಾಗಿ.
ನಿಮ್ಮ ಮೋದಿ ನಾನೇ ಎಲ್ಲ ನನ್ನಿಂದ ಎಲ್ಲಾ ಮೋದಿ ಇದ್ದರೆ ಸಾಧ್ಯ, ಮೋದಿ ಇರುವುದರಿಂದ ದೇಶಕ್ಕೆ ಯಾವುದೇ ತೊಂದರೆ ಇಲ್ಲ ಪುಕ್ಕಟೆ ಪ್ರಚಾರ ಮಾಡಲಿಲ್ಲ ದೇಶದ ಮುಂದೆ ಸತ್ಯ ಮೊದಲೇ ಒಪ್ಪಿಕೊಂಡಿದ್ದರು.
ಇಂದಿನ ಪರಿಸ್ಥಿತಿ ಮತ್ತು ಅಂಕಿಅಂಶಗಳ ಕಟು ಸತ್ಯ
ಇಂದು 2026ರ ಮೇ ತಿಂಗಳಿನ ಸ್ಥಿತಿಯನ್ನು ಗಮನಿಸಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 105 ಡಾಲರ್ ಆಸುಪಾಸಿನಲ್ಲಿದೆ ಅಂದರೆ 2013ಕ್ಕೆ ಹೋಲಿಸಿದರೆ ತೈಲ ಬೆಲೆ 17 ಡಾಲರ್ ಕಡಿಮೆ ಇದೆ ಅಥವಾ ಕೆಲವು ಸಂದರ್ಭಗಳಲ್ಲಿ ಅದಕ್ಕಿಂತಲೂ ಕಡಿಮೆ ಇರುತ್ತದೆ ಆದರೆ ಇಂದು ನೀವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ನೀಡುತ್ತಿರುವ ಬೆಲೆ ಎಷ್ಟು ಅಂದು ತೈಲ ಬೆಲೆ 110 ಡಾಲರ್ ಇದ್ದಾಗಲೂ ಪೆಟ್ರೋಲ್ ಬೆಲೆ 70 ರಿಂದ 75 ರೂಪಾಯಿ ಗಡಿ ದಾಟಿರಲಿಲ್ಲ ಆದರೆ ಇಂದು ತೈಲ ಬೆಲೆ ಅಷ್ಟೇ ಇದ್ದರೂ ನೀವು 100 ರೂಪಾಯಿಗೂ ಹೆಚ್ಚು ಬೆಲೆ ನೀಡುತ್ತಿರುವುದು ಯಾವ ಸಾಧನೆಗಾಗಿ
ರೂಪಾಯಿ ಮೌಲ್ಯದ ಪಾತಾಳ ಯಾನ
ಅಂದು ರೂಪಾಯಿ ಮೌಲ್ಯ 68ಕ್ಕೆ ಕುಸಿದಾಗ ದೇಶವೇ ಮುಳುಗಿಹೋಯಿತು ಎಂದು ರೊಚ್ಚಿಗೆದ್ದವರು ಇಂದು ರೂಪಾಯಿ ಮೌಲ್ಯ ಡಾಲರ್ ಎದುರು 95 ರೂಪಾಯಿಗೆ ಕುಸಿದಿದ್ದರೂ ಮೌನವಾಗಿರುವುದು ಏಕೆ ಅಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯು ನಮ್ಮ ನಿಯಂತ್ರಣದಲ್ಲಿ ಇರಲಿಲ್ಲ ಆದರೆ ಇಂದು ಆಂತರಿಕವಾಗಿ ವಿಪರೀತ ತೆರಿಗೆಗಳನ್ನು ವಿಧಿಸಿ ಜನಸಾಮಾನ್ಯರ ಹಣ ಲೂಟಿ ಮಾಡುತ್ತಿರುವುದು ಯಾರು ಯಾಕೆ ಅಂದು ಚಿದಂಬರಂ ಅವರು ದೇಶದ ಆರ್ಥಿಕ ಆರೋಗ್ಯ ಕಾಪಾಡಲು ಕಠಿಣ ಮಾತುಗಳನ್ನಾಡಿದ್ದರು ಆದರೆ ಇಂದು ಮೊನ್ನೆ ಮೊನ್ನೆಯವರೆಗೂ ದೇಶದ ಆರ್ಥಿಕತೆ ಹದಗೆಡುತ್ತಿದ್ದರೂ ಎಲ್ಲವೂ ಸುಭಿಕ್ಷವಾಗಿದೆ ಎಂದು ಸುಳ್ಳು ಅಂಕಿಅಂಶಗಳ ಮೇಲೆ ನೃತ್ಯ ಮಾಡುತ್ತಾ ಇದ್ದಿದ್ದು ನಿಮ್ಮ ಬಿಜೆಪಿ ಸರ್ಕಾರ ಈಗ ಯಾಕೆ ಏಕಾಏಕಿ ಆರ್ಥಿಕತೆ ಕುಸಿಯುತ್ತಿದೆ ಎಂದು ಬೊಬ್ಬೆ ಹಾಕುವುದು??
2013ರಲ್ಲಿ ಭಾರತದ ಚಾಲ್ತಿ ಖಾತೆ ಕೊರತೆ ಎದುರಿಸಲು ಸರ್ಕಾರವು ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿತು ಮತ್ತು ತೈಲ ಬಳಕೆಯನ್ನು ಕಡಿಮೆ ಮಾಡಲು ಜನರಲ್ಲಿ ವಿನಂತಿಸಿತು ಅದು ಅಪ್ಪಟ ದೇಶದ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿತ್ತು ಇಂದು ಅದೇ ಅಂತರಾಷ್ಟ್ರೀಯ ಪರಿಸ್ಥಿತಿಗಳು ಮರುಕಳಿಸಿದಾಗ ಸರ್ಕಾರವು ಜನರಿಗೆ ನೆರವಾಗುವ ಬದಲು ತೈಲ ಬೆಲೆ ಏರಿಕೆಯ ಹೊರೆಯನ್ನು ಜನರ ಮೇಲೆ ಹಾಕುತ್ತಿದೆ 2013ರಲ್ಲಿ ಅಂತರಾಷ್ಟ್ರೀಯ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 110 ಡಾಲರ್ ಇದ್ದಾಗಲೂ ಸಾಮಾನ್ಯ ಮನುಷ್ಯನಿಗೆ ಪೆಟ್ರೋಲ್ ಎಟಕುವಂತಿತ್ತು ಆದರೆ ಇಂದು ನಿಮ್ಮ ಕಣ್ಣೆದುರೇ ರೂಪಾಯಿ ಮೌಲ್ಯ ನುಚ್ಚುನೂರಾಗುತ್ತಿದೆ ತೈಲ ಬೆಲೆ ಗಗನಕ್ಕೇರುತ್ತಿದೆ ಇಷ್ಟೆಲ್ಲಾ ವಾಸ್ತವ ಕಣ್ಣೆದುರಿದ್ದರೂ ಅಂದು ಚಿದಂಬರಂ ಮತ್ತು ಮೊಯ್ಲಿ ಅವರ ಮಾತುಗಳನ್ನು ಅಣಕಿಸುವ ನಿಮ್ಮ ಅಜ್ಞಾನಕ್ಕೆ ಏನೆನ್ನಬೇಕು
ಕೊನೆಯದಾಗಿ ನೆನಪಿಡಿ ಅಂದು ಇದ್ದದ್ದು ಜಾಗತಿಕ ಬಿಕ್ಕಟ್ಟು ಮತ್ತು ಸರ್ಕಾರದ ಪ್ರಾಮಾಣಿಕ ಹೋರಾಟ ಇಂದು ಇರುವುದು ಆಡಳಿತಾತ್ಮಕ ವೈಫಲ್ಯ ಯುದ್ಧ ನಿನ್ನೆ ಮೊನ್ನೆ ಆರಂಭ ಆಗಿದ್ದು ಅಲ್ಲ ಜನರ ದಾರಿ ತಪ್ಪಿಸುವ ತಂತ್ರಗಾರಿಕೆ ಕೇವಲ ಸುಳ್ಳು ಪ್ರಚಾರದ ಮೊರೆ ಹೋಗದೆ ಅಂಕಿಅಂಶಗಳನ್ನೊಮ್ಮೆ ತಾಳೆ ಹಾಕಿ ನೋಡಿ ಆಗ ತಿಳಿಯುತ್ತದೆ ಅಂದಿನ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತು.(ಕೃಪೆ:ಹರೀಶ್ ಇಂಡಿಯಾ ಫೇಸ್‌ಬುಕ್)
Home ಸಾರ್ವಜನಿಕ ಧ್ವನಿ ಇಂದು ಆಂತರಿಕವಾಗಿ ವಿಪರೀತ ತೆರಿಗೆಗಳನ್ನು ವಿಧಿಸಿ ಜನಸಾಮಾನ್ಯರ ಹಣ ಲೂಟಿ ಮಾಡುತ್ತಿರುವುದು ಯಾರು ಯಾಕೆ?ಸತ್ಯ ಅರಿಯುವ...





