ಸುರಪುರದ ಶಾಂತಪುರ್ ಕ್ರಾಸ್ ಬಳಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಿರವಾರ ಪಟ್ಟಣ ಪಂಚಾಯಿತಿ ಸದಸ್ಯರು ಬಿಜೆಪಿ ಹಿರಿಯ ನಾಯಕರು ಆಗಿದ್ದ ಶ್ರೀ ಕೃಷ್ಣ ನಾಯಕ ಹಾಗೂ ಅವರ ಧರ್ಮಪತ್ನಿ, ಅಳಿಯ, ಮಗಳು, ಅವರ ಧರ್ಮಪತ್ನಿ ತಂಗಿ ಮೊಮ್ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟಿರುವ ದುರಂತ ಸುದ್ದಿ ಕೇಳಿ ಬರ ಸಿಡಿಲು ಬಡೆದಂತಾಗಿದೆ.

ಕೃಷ್ಣ ನಾಯಕರು ಜನಸೇವೆಯಲ್ಲಿ ಸದಾ ಮುಂದು. ಎರಡು ಅವಧಿಗೆ ಪಟ್ಟಣ ಪಂಚಾಯಿತಿ ಸದಸ್ಯರಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮಾದರಿ ಜನನಾಯಕನು ಆಗಿದ್ದರು ಪ್ರತಿ ದಿನಾ ಬೆಳಗಿನ ಜಾವ ಒಂದು ಗಂಟೆ
ಸಿರವಾರ ಪಟ್ಟಣ ಸ್ವಚ್ಛತೆಗೆ ಮೀಸಲಾಡುತ್ತಿದ್ದ ಒಬ್ಬ ಉತ್ಸಾಹಿ ನಾಯಕನ ಅಗಲಿಕೆಯು ಸಿರವಾರ ತಾಲೂಕಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ.

ಮೃತರ ಆತ್ಮಕ್ಕೆ ಶಾಂತಿಯನ್ನು, ಕುಟುಂಬ ವರ್ಗದವರಿಗೆ ಅಪಾರ ಸ್ನೇಹಿತರಿಗೆ ಈ ದುರಂತದ ನೋವನ್ನು ಸಹಿಸುವ ಶಕ್ತಿ ಆ ಭಗವಂತ ಕರುಣಿಸಲಿ

LEAVE A REPLY

Please enter your comment!
Please enter your name here