ಬಾಗಲಕೋಟೆ:ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕೀನ. ಹಾವರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂದವಾರ ಗ್ರಾಮದ ಮೀನುಗಾರ ಶ್ರೀ ಗುರಪ್ಪ ತಂದೆ ಬಸವರಾಜ ಚಲವಾದಿ ಇವರು ನಾರಾಯಣ ಪುರ ಆಣೆಕಟ್ಟೆಯ ಹಿನ್ನೀರಿನಲ್ಲಿ ಪುಟ್ಟಿಯಲ್ಲಿ ಮೀನುಹಿಡಿಯಲು ದಿನಾಂಕ.21=5=2026=ಗುರುವಾರ ನೀರಿಗೆ ಇಳಿದು ಹೋದಾಗ ಸಯಂಕಾಲ.4ಘಂಟೆಯ ಸಮಯದಲ್ಲಿ ನಾರಯಣಪೂರ ಆಣೆಕಟ್ಟೆಯ ಹೀನಿರಿನ ಕೃಷ್ಣಾನದಿಯಲ್ಲಿ ಮುಳುಗಿದ್ದಾನೆ. ಬಸವಸಾಗರ ಜಲಾಶಯದ ಹಿನ್ನೀರಿನಲ್ಲಿ ಪುಟ್ಟಿತೂಗುಂಡು ಮೀನುಹೀಡಿಯಲು ನಿರಿನಲ್ಲಿ ಹೋಗಿದ್ದಾಗ ಪುಟ್ಟಿಯಲ್ಲಿ ನೀರು ತುಂಬಿ ನದಿಯಲ್ಲಿ ಮೀನುಗಾರನಾದ ಗುರಪ್ಪ ತಂದೆ ಬಸವರಾಜ ಚಲವಾದಿ ನದಿ ನೀರಿನಲ್ಲಿ ಮುಳುಗಿ ಹೋಗಿದ್ದು.

ಅಗ್ನಿಶಾಮಕ ದಳ ಹಾಗೂ ಪೊಲೀಸ್ ರು ಹಾಗೂ ಕಂದಾಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ ಬಂದು ಗ್ರಾಮಸ್ಥರು ಸೇರಿ ಎಲ್ಲರೂ ನದಿಯಲ್ಲಿ ಎರಡು ದಿನಗಳಿಂದ ಹುಡುಕಿದರೂ ಕೂಡ ಇಲ್ಲಿಯವರೆಗೂ ಸಿಕ್ಕಿರುವುದಿಲ್ಲಾ. ಇಂದವಾರ ಗ್ರಾಮದ ದಿವಂಗತ ಬಸವರಾಜಪ್ಪ ಚಲುವಾದಿ ಇವರ ಮಗ ಶ್ರೀ ಗುರಪ್ಪ ಬಸಪ್ಪ ಚಲವಾದಿಯವರ ಕುಟುಂದಲ್ಲಿ ದುಃಖ ಮಡುಗಟ್ಟಿದೆ.ಇಂದವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದುಃಖದ ರಾರ್ಮೋಡ ಮುಸುಕಿದೆ.ಎರಡು ದಿವಸಗಳಿಂದ ಶೋಧಕಾರ್ಯನಡೆದಿದ್ದರೂ ಸಹ ಇದು ವರೆಗೂ ಪತ್ತೆಯಾಗಿಲ್ಲಾ.

ಈ ಜಲಾಶಯದ ಹಿನ್ನೀರಿನ ಎಡ,ಬಲ ಬದಿಗಳಲ್ಲಿ ಗಿಡ,ಗಂಟಿ ತುಂಬಿದ್ದು ಸ್ವಚ್ಛವಾದ ವಾತಾವರಣ ಇರುವುದಿಲ್ಲಾ.ನದಿ ದಡದ ಜನರ ಬದುಕು ಬಹಳ ಕಷ್ಟಕರದಲ್ಲಿದೆ ಈ ಹಿನ್ನೀರಿನಲ್ಲಿ ಮೊಸಳೆಯಂತ ಜಲಚರಗಳು ಮಾನವನ ಜೀವಕ್ಕೆ ಅಪಾಯಕರವಾಗಿವೆ.
ಸಂಬಂಧಿಸಿದ ಇಲಾಖೆಯವರು ನದಿಯ ಎಡಬಲ ಬೆಳೆದು ನಿಂತಿರುವ ದಟ್ಟ ಮುಳ್ಳು ಕಂಟಿಗಳನ್ನು ಸ್ವಚ್ಚಗೊಳಿಸಬೇಕು ಈ ಎಡಬಲ ಗಾಢವಾದ ಗಿಡಗಂಟಿ ಒಳಗೆ ಮೊಸಳೆ ಹಾಗೂ ಇತರೆ ಕ್ರೂರ ಪ್ರಾಣಿಗಳೂ ಸೇರಿಕೊಂಡು ಜನರ ಪ್ರಾಣ ಹಾನಿ ಮಾಡಬಹುದಾಗಿದ್ದರಿಂದ ಸ್ವಚ್ಚತೆಯ ಕ್ರಮ ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ನಾಗರಾಜ್ ಬೀ. ಹೂಗಾರ್ ಸರ್ಕಾರವನ್ನು ಈ ಮೂಲಕ ಒತ್ತಾಯಿಸಿದ್ದಾರೆ.





