ಬೆಂಗಳೂರು:
ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳು ವೈದ್ಯರ ಕೊರತೆ, ಅತಿಯಾದ ರೋಗಿಗಳ ದಟ್ಟಣೆ, ಮೂಲಸೌಕರ್ಯಗಳ ಕೊರತೆ, ಮತ್ತು ಸ್ವಚ್ಛತೆಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗುವುದು ಕಷ್ಟಕರವಾಗಿದೆ..
ವೈದ್ಯರು ಮತ್ತು ಸಿಬ್ಬಂದಿಯ ಕೊರತೆ: ನಿಗದಿತ ಸಮಯಕ್ಕೆ ವೈದ್ಯರು ಲಭ್ಯವಿರುವುದಿಲ್ಲ. ಅಗತ್ಯ ಸಿಬ್ಬಂದಿಯ ಕೊರತೆಯಿಂದಾಗಿ, ಬರುವ ರೋಗಿಗಳಿಗೆ ದೀರ್ಘಕಾಲ ಕಾಯಬೇಕಾದ ಅನಿವಾರ್ಯತೆ ಇರುತ್ತದೆ..
ಮೂಲಸೌಕರ್ಯಗಳ ಕೊರತೆ: ಅತ್ಯಾಧುನಿಕ ಉಪಕರಣಗಳ ಕೊರತೆ, ನಿಯಮಿತ ವಿದ್ಯುತ್ ಇಲ್ಲದಿರುವುದು, ಕುಡಿಯುವ ನೀರಿನ ಸಮಸ್ಯೆ ಮತ್ತು ರೋಗಿಗಳಿಗೆ ಸೂಕ್ತ ಹಾಸಿಗೆಗಳ ಕೊರತೆ ಇರುತ್ತದೆ..
ಸ್ವಚ್ಛತೆಯ ಕೊರತೆ: ಆಸ್ಪತ್ರೆಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯ ಕೊರತೆಯಿರುತ್ತದೆ. ಇದರಿಂದ ರೋಗಿಗಳಿಗೆ ಸೋಂಕು ತಗಲುವ ಭೀತಿ ಹೆಚ್ಚಾಗಿರುತ್ತದೆ…
ಖಾಸಗಿ ಔಷಧಿಗಳ ಮೊರೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗಬೇಕಾದ ಔಷಧಿಗಳು ಲಭ್ಯವಿಲ್ಲದೆ, ಹೊರಗಿನಿಂದ ದುಬಾರಿ ಬೆಲೆಗೆ ಔಷಧಿಗಳನ್ನು ಖರೀದಿಸಬೇಕಾದ ಪರಿಸ್ಥಿತಿ ಇರುತ್ತದೆ..
ದೀರ್ಘಾವಧಿಯ ಕಾಯುವಿಕೆ :- ಹೊರರೋಗಿ (OPD) ವಿಭಾಗದಲ್ಲಿ ವೈದ್ಯರನ್ನು ತೋರಿಸಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ.
ಆಡಳಿತಾತ್ಮಕ ನಿರ್ಲಕ್ಷ್ಯ: ತುರ್ತು ಸಂದರ್ಭಗಳಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಆಸ್ಪತ್ರೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ನಿಷ್ಕ್ರಿಯತೆ ಕಂಡುಬರುತ್ತದೆ…
ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ ಎಷ್ಟೇ ಮನವಿ ಮಾಡಿದರೂ ಆ ಮನವಿ ಪೇಪರ್ ಗೆ ಸೀಮಿತವಾಗಿದೆಯೇ ಹೊರತು ಯಾವುದೇ ಪರಿಹಾರ ಸಿಗುವುದಿಲ್ಲ..ಬಡ ಜನಾಂಗದರು ದೊಡ್ಡ ಮಟ್ಟದ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಯಲ್ಲಿ ಸಾಮರ್ಥ್ಯವಿಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋಗುತ್ತಾರೆ.. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಸಮರ್ಪಕವಾದ ಒಂದು ವ್ಯವಸ್ಥೆ ಮತ್ತು ವೈದ್ಯರು ಆಗಲಿ ಯಾವುದೇ ರೀತಿಯ ಸವಲತ್ತು ಇರುವುದಿಲ್ಲ.. ಆ ಸಂಧರ್ಭದಲ್ಲಿ ಉನ್ನತ ಮಟ್ಟದ ಚಿಕಿತ್ಸೆಗಾಗಿ ಬಡ ಜನಾಂಗದವರು ಖಾಸಗಿ ಆಸ್ಪತ್ರೆ ಅವಲಂಬಿತವಾಗ ಬೇಕಾಗುತ್ತದೆ.. ಆದರೆ ಬಡವರಲ್ಲಿ ಅಷ್ಟು ದೊಡ್ಡ ಮೊತ್ತದ ಹಣ ಇಲ್ಲದೆ ಇರುವುದರಿಂದ ಅವರು ಉನ್ನತ ಮಟ್ಟದ ಚಿಕಿತ್ಸೆ ಪಡೆಯಲು ಹೋಗುವುದಿಲ್ಲ..
ಬಡ ಉಪಯೋಗವಿಲ್ಲದ ಸರ್ಕಾರಿ ಆಸ್ಪತ್ರೆ ಯಾಕೆ? ಸೇವೆ ಕೊಡುತ್ತೇವೆ ಎಂದು ಹೆಸರಿಗೆ ಮಾತ್ರವ?
ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಯಾವುದೇ ರೀತಿಯ ಉಪಯೋಗವಿಲ್ಲ.. ಎಲ್ಲ ರೀತಿಯ ಕೊರತೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ಇದೆ.. ಸರ್ಕಾರಿ ಯಾಕೆ ಸರ್ಕಾರಿ ಆಸ್ಪತ್ರೆಯನ್ನು ನಿರ್ವಹಣೆ ಮಾಡುತ್ತಿಲ್ಲ.. ಸರ್ಕಾರಕ್ಕೆ ಜನರ ಮೇಲೆ ಹಾಗೂ ಬಡವರ ಮೇಲೆ ಸ್ವಲ್ಪ ಆದರೂ ಕರುಣೆ ಇಲ್ಲವೇ.. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಜಾಸ್ತಿ ಆದರೂ ಸರ್ಕಾರ ಯಾಕೆ ಈ ಗಂಭೀರವಾದ ವಿಷಯದ ಬಗ್ಗೆ ಚರ್ಚೆ ಮಾಡುತ್ತಿಲ್ಲ..ಬಡವರಿಗೆ ಯಾಕೆ ಉತ್ತಮ ಚಿಕಿತ್ಸೆ ನೀಡುತ್ತಿಲ್ಲ.. ಬಡವರು ಎಂದರೆ ಸರ್ಕಾರಕ್ಕೆ ಅಷ್ಟು ಕೀಲಾಗಿ ಹೋಗಿದೆಯಾ.. ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆಯ.. ಚಿಕಿತ್ಸೆ ಸಿಗದೇ ಇರುವ ಆಸ್ಪತ್ರೆ ಯಾಕೆ ಬಡವರ ಹೆಸರು ಹೇಳಿಕೊಂಡು ಮಾಡುತ್ತಿದ್ದೀರಿ.. ಯಾವುದೇ ಪ್ರಯೋಜನ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲ…
ಸಮಸ್ಯೆ ಕೇಳಿದರೆ ಆರೋಪ, ಸುಮ್ಮನಿದ್ದರೆ ಸಾವು.
ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ ಕೇಳಲು ಯಾರಾದರೂ ಮುಂದಾದರೆ ಅವರ ಮೇಲೆ ಎಲ್ಲಸಲ್ಲದ್ದು ಆರೋಪ ಮಾಡುತ್ತಾರೆ.. ಯಾವುದೇ ಸಮಸ್ಯೆ ಬಗ್ಗೆ ಮಾತಾನಾಡದೆ ಇದ್ದರೆ ಕೊನೆಯದಾಗಿ ಸಾವೇ ಗತಿ.. ಇಂತಹ ತುಂಬಾ ಘಟನೆಗಳು ನಮ್ಮ ರಾಜ್ಯದಲ್ಲಿ ನಡೆದಿದೆ.. ಈಗ ಪ್ರಸ್ತುತವಾಗಿ ನಡೆಯುತ್ತಿದೆ… ಸರ್ಕಾರಿ ಆಸ್ಪತೆಯಲ್ಲಿ ಸಾವಿನ ಪ್ರಸ್ತುತವಾಗಿ ಸಾವಿನ ಸಂಖ್ಯೆ ಜಾತಿ ಆಗಿದೆ ಹೊರತು ಬದುಕುವವರ ಸಂಖ್ಯೆ ಕಡಿಮೆ ಯಾಗಿದೆ.. ಈ ರೀತಿಯ ಸಮಸ್ಯೆ ಯಾಕೆ ಸರ್ಕಾರಿ ಆಸ್ಪತ್ರೆಯಲ್ಲಿ ಆಗುತ್ತಿದೆ.. ಹಾಗಾದರೆ ಬಡವರಿಗೆ ಈ ಸಮಸ್ಯೆ ಬಗ್ಗೆ ಕೇಳಲು ಹಕ್ಕು ಇಲ್ಲವೇ? ತಾವು ಏನು ಮಾಡಿದರೂ ನಾವು ಸುಮ್ಮನಿರಬೇಕೆ.. ಯಾವುದಾದರೂ ಒಂದು ತುರ್ತು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿ ಸರಿಯಾದ ಸಮಯಕ್ಕೆ ವೈದ್ಯರು ಇಲ್ಲದೆ ಸಾವನ್ನು ಅಪ್ಪುವುದು,ಯಾಕೆಂದರೆ ಅವರಲ್ಲಿ ಉನ್ನತ ಮಟ್ಟಕ್ಕೆ ಹೋಗಲು ಬಡ ಕುಟುಂಬ ಹಾಗಾಗಿ ಇದೆಲ್ಲ ಸರಿ ಪಡಿಸಿದರೆ ಮಾತ್ರ ಜನ ಜೀವನ ಸರಿಯಾಗುತ್ತದೆ…
ರಾಜಕಾರಣಿಗಳಿಗೆ ಚುನಾವಣೆ ಸಂಧರ್ಭದಲ್ಲಿ ಮಾತ್ರ ಬಡವರ ಅಗತ್ಯ.
ಎಷ್ಟೆಲ್ಲಾ ಸಮಸ್ಯೆ ಆದರೂ ಕೂಡ ರಾಜಕಾರಣಿಗಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ.. ಚುನಾವಣೆ ಸಂಧರ್ಭದಲ್ಲಿ ಮಾತ್ರ ಬಡವರ ಮನೆಗೆ ಬಂದು ಮಾತನಾಡಿ ವೋಟು ಹಾಕಿಸಿ ಕೊಳ್ಳುತ್ತಾರೆ.. ಚುನಾವಣೆ ಮುಗಿದ ನಂತರ ಬಡ ಜನಾಂಗದ ಗೋಳು ಕೇಳುವವರಿಲ್ಲ.. ಸತ್ತರೂ ಬದುಕಿದರೂ ಅದು ಬಡವರಿಗೆ ಮಾತ್ರ.. ಇವರು ತಮ್ಮ ಇಶಾರಾಮಿ ಜೀವನ ಮಾಡುತ್ತಾರೆ.. ಹಾಗಾದರೆ ಈ ಸರ್ಕಾರಿ ಆಸ್ಪತ್ರೆ ಸಮಸ್ಯೆ ಪರಿಹರಿಸುವವರು ಯಾರು? ಬಡವರಿಗೆ ಸಾವೇ ಗತಿಯಾ ಅಥವಾ ಅನಾರೋಗ್ಯ ದಿಂದ ತಪ್ಪಿಸಲು ಉತ್ತಮ ಚಿಕಿತ್ಸೆ ನೀಡುತ್ತಾರೆಯೇ ಕಾದು ನೋಡಬೇಕಾಗಿದೆ. ಎಂದು
ಸಾಮಾಜಿಕ ಕಾರ್ಯಕರ್ತ

ಪವನ್ ಕುಮಾರ್ ಶಿರ್ವ ರವರು ದೂರುತಿದ್ದಾರೆ.





