ಬಾಗಲಕೋಟೆ:ಕರ್ನಾಟಕ ಸರ್ಕಾರದ ಆಡಳಿತ ಪಕ್ಷದ ಶಾಸಕರಲ್ಲಿ ಬಹುತೇಕರು ನಾಲಿಗೆ ಹರಿಬಿಡುವ ನಾಲಾಯಕರೇ ಹೆಚ್ಚಿದ್ದಾರನಿಸುತ್ತದೆ.ಸರ್ಕಾರದ ಕೆಲಸ ದೇವರಕೆಲಸವೆಂಬ ಹಣೆಬರಹದ ಸೌಂದರ್ಯ ಸೌಧದಘನತೆಗೆ ತಕ್ಕವರಿಗೆ ಅಧಿಕಾರ ಸಿಗುವ ಕನಸು ಬಹುದೂರವಾಗಿಹೋಗಿದೆ.ಸಮಾಜಸೇವೆಯ ಹೆಸರಲ್ಲಿ ಸಮಾಜಸ್ವಾಹಕರೇ ಇಂದಿನ ಜನಪ್ರತಿನಿಧಿಗಳು! ಅದರಲ್ಲೂ ಕೆಲವು ಶಾಸಕರಂತೂ ಬಾಯಿಬಿಟ್ರೆ ಥೂ ಅವಿವೇಕದ ಮಾತುಗಳು.ವಿಜಯಾನಂದ ಕಾಶಪ್ಪನವರ್ ಬಹುತೇಕ ಆತ ಅಭಿವೃದ್ಧಿ ಮಾಡದೇ ಬರೀ ತನ್ನ ತರ್ಲೆ ಮಾತುಗಳಿಂದಲೇ ರಾಜ್ಯದಲ್ಲಿ ಹೆಚ್ಚು ಗುರುತಿಸಿಕೊಂಡವ.ಇವನ ಕ್ಷೇತ್ರದಲ್ಲಿ ಅದರಲ್ಲೂ ಈತನ ಹುಟ್ಟೂರಿನಿಂದ ಕನಿಷ್ಠ ಹತ್ತು ಕಿಲೋಮೀಟರ್ ವ್ಯಾಪ್ತಿಯ ಒಳಗೇ ದೂರದಲ್ಲಿರುವ ಕವಜಗನೂರು,ಅನಪ್ಪಕಟ್ಟೆ,

ಇಂದವಾರ ಗ್ರಾಮಗಳ ಹೆಸರಲ್ಲಿ ಬರುವ ಅನುದಾನ ಮತ್ತು ಅಭಿವೃದ್ಧಿ ಹೆಸರಿನ ಕಾಮಗಾರಿಗಳು ಬೋಗಸ್ ದಾಖಲೆಗಳ ಸೃಷ್ಟಿ ಯಲ್ಲೇ ಮುಗಿದುಹೋಗಿರುತ್ತವೆಯೋ ಅಥವಾ ಈ ಗ್ರಾಮಗಳಿಗೆ ಯಾವುದೇ ಅನುದಾನ ಬರುತ್ತಿಲ್ಲವೋ ಗೊತ್ತಿಲ್ಲಾ.ಬಹುಶ ರಸ್ತೆ,ಚರಂಡಿ,ಬೀದಿ ದೀಪ ಮುಂತಾದ ನಾಗರೀಕ ಕನಿಷ್ಠ ಮೂಲಭೂತ ಸೌಕರ್ಯಗಳ ಅನುದಾನವಂತೂ ಬಂದಿರಲೇ ಬೇಕು.ಅವು ಕೂಡಾ ಇಲ್ಲಿ ಆಗಿರುವುದಿಲ್ಲಾ.ಯಾರಾದರೂ ಪ್ರಶ್ನಿಸಿದರೆ ಚೇಲಾಗಳ ಕಿರುಕುಳ.ಜನರು ಜಾತಿ ನೋಡಿ,ಪಕ್ಷನೋಡಿ,ಹಣನೋಡಿ,ದೌರ್ಜನ್ಯ ಕ್ಕೆ ಹೆದರಿ ಅಥವಾಇನ್ಯಾವುದಕ್ಕೋ ಗೊತ್ತಿಲ್ಲಾ ಮತಹಾಕ್ತಾರೆ.ಆದರೆ ಕೆಲಸ ಕೇಳಲುಹೋದರೆ ವೈರತ್ವದೃಷ್ಟಿಯಿಂದ ನೋಡೋದು ಎಷ್ಟು ಸರಿ? ಶಾಸಕ ವಿಜಯಾನಂದ ಕಾಶಪ್ಪನವರ ಹಣ ಬಲ,ಜಾತಿಬಲ ಇತರೆ ಬಲಗಳಿಂದ ಗೆಲ್ತಾರೆ ಆದರೆ ಅದೆಲ್ಲದಕ್ಕೂ ಅವಮಾನ ವಾಗುವಂತೆ ಅಭಿವೃದ್ಧಿ? ಇವರ ಕ್ಷೇತ್ರ ಎಂದು ಹೇಳುವುದಕಿಂತಲೂ ಇವರ ಹುಟ್ಟೂರು ಹಾವರಗಿ ಈ ಹಾವರಗಿ ಗ್ರಾಮಚಾಯತಿಗೆ ಒಳಪಟ್ಟ ಇಂದವಾರ

ಅನಪಕಟ್ಟಿ ಇವರ ಕಡೆಗಣ್ಣಿಗೂ ಕಾಣಿಸಲ್ಲಾ ಅನಿಸುತ್ತದೆ.ಇಲ್ಲಿಯ ಗ್ರಾಮಗಳು ಮತ್ತು ವಾಸಿಸುವ ಜನರು ಆದಿಕಾಲದ ಕಾಡಿನಲ್ಲಿ ವಾಸಿಸುತ್ತಾರೇನೋ ಅನಿಸುತ್ತದೆ.ಕುಡಿಯಲು ಶುದ್ದ ನೀರಿನ ಘಟಕದ ಹೆಸರಲ್ಲಿ,ರಸ್ತೆ,ಚರಂಡಿ,ಬೀದಿದೀಪ,ಇತರೆ ಆರೋಗ್ಯ,ಸೌಚಾಲಯ ಹೆಸರಲ್ಲಿ ಒಂದೂ ಕಾಮಗಾರಿಗಳು ನಡೆಯದೆಯೇ ಬಿಲ್ಗಳು ಪಾಸಾಗುತ್ತವೆಯೆನೋ ಅನಿಸುತ್ತದೆ.ಕಾರಣ ಒಬ್ಬನೇ ಒಬ್ಬ ಅಧಿಕಾರಿ ಡಿಸಿ,ಎಸಿ,ತಹಶೀಲದಾರ್,ಕಾರ್ಯನಿರ್ವಾಹಕ ಅಭಿಯಂತರರು ಈ ಗ್ರಾಮದ ಮತ್ತು ಇಲ್ಲಿ ವಾಸಿಸುವ ಜನರ ಸ್ತಿತಿಗತಿಗಳ ಗಮನಿಸುತ್ತಿಲ್ಲಾ. ಇಲ್ಲಿಯ ಜನರೇ ಒಂದು ರೀತಿಯ ಭಯದ ವಾತಾವರಣದಲ್ಲಿ ಬದುಕುತಿದ್ದಾರನಿಸುತ್ತದೆ.ಈ ಶಾಸಕ ಕ್ರಿಕೇಟ್ ಟಿಕೇಟ್ ಗಾಗಿ ಅಧಿವೇಶನದಲ್ಲಿ ವೀರಾವೇಷದಿಂದ ಪ್ರಶ್ನೆ ಮಾಡುತ್ತಾರೆ.ಆದರೆ ತನ್ನನ್ನು ಆ ಸ್ಥಾನಕ್ಕೆ ಕಳಿಸಿದ ಮತದಾರ ಪ್ರಭುಗಳು ಅದರಲ್ಲೂ ತನ್ನ ಹುಟ್ಟೂರಿನ ಪಂಚಾಯತಿಗೆ ಒಳಪಡುವ ಗ್ರಾಮಗಳ ಅಭಿವೃದ್ಧಿ ಬಗ್ಗೆ ದ್ವನಿ ಬರುವುದಿಲ್ಲಾ ಇದಕಿಂತ ನಾಚಿಕೆಗೇಡಿನ ವಿಷಯ ಯಾವುದಿದೆ?ಅವರ ಕೆಲವು ಮಾತುಗಳನ್ನು ಗಮನಿಸಿದರೆ ವೀರತ್ವ,ಸೂರತ್ವ ಕೆಲಸ ಮಾತ್ರ ಝೀರೋ ಮಾತಿಗೂ ಕೃತಿಗೂ ಸಂಬಂದವೇ ಇಲ್ಲಾ.ಇವರ ಸ್ವಗ್ರಾಮದ ಹಾವರಗಿ ಪಕ್ಕದಲ್ಲೇ ಇರುವ
ಇಂದವಾರ.

ಗ್ರಾಮದ ಸರ್ಕಾರಿ ಶಾಲೆಯನ್ನು ಗನಮಿಸಿ ತಾಲೂಕಿನ ಶಿಕ್ಷಣ ಅಧಿಕಾರಿಗಳಾಗಲಿ ಜಿಲ್ಲಾಧಿಕಾರಿಗಳಾಗಲಿ ಬಂದಿರುವುದಿಲ್ಲ ಶಾಲೆಯು ತುಂಬಾ ಶೀತಲಗೊಂಡಿದ್ದು ಎಷ್ಟೋ ಮನವಿ ಕೊಟ್ಟರೂ ಕೂಡ ಇಲ್ಲಿವರೆಗೆ ಯಾವುದೇ. ಕೆಲಸ ಮಾಡಿರುವುದಿಲ್ಲ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಾವರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರತಕ್ಕಂತ ಇಂದವಾರಗ್ರಾಮದ ಚಿಕ್ಕ ಮಕ್ಕಳು ಓದುವ ಸರ್ಕಾರಿ ಶಾಲೆಯ ದುರಸ್ತಿ ಹಾಗೂ ಪುನರ್ ನಿರ್ಮಾಣ ಮಾಡದೆ ಇರುವ ಕುರಿತು ಊರಿನ ಗ್ರಾಮಸ್ಥರು ಹಾಗೂ ರೈತರು ಕೊಟ್ಟ ಮನವಿಗೆ ಸ್ಪಂದಿಸದ ತಾಲೂಕಿನ ಶಿಕ್ಷಣ ಅಧಿಕಾರಿಗಳು ಹಾಗೂ ಎ ಡಬ್ಲ್ಯೂ ತಕ್ಷಣ ಡಿಸ್ಮಿಸ್ ಮಾಡಬೇಕೆಂದು ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನ ರೈತ ಸಂಘ ಹಾಗೂಹಸಿರು ಸೇನೆಮನವಿ ಮಾಡಿ ಕೊಂಡಿರುತ್ತಾರೆ ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ.ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರು ನಾಗರಾಜ್ ಬಿ ಹೂಗಾರ್ ಸಾಕಷ್ಟು ಸಲ ಮನವಿಮಾಡಿದರೂ ಗಮನಿಸುತ್ತಿಲ್ಲಾ ಜಿಲ್ಲಾಧಿಕಾರಿ ಮತ್ತು ಶಾಸಕ ಕೂಡಲೇ ಈ ಇಂದವಾರ,ಕವಜಗನೂರು,ಅನಪಕಟ್ಟೆ ಗ್ರಾಮಗಳ ಸಾರ್ವಜನಿಕ ಕನಿಷ್ಠ ಮೂಲಭೂತ ಸೌಲಭ್ಯ ಶಿಕ್ಷಣ,ಆರೋಗ್ಯ,ಸ್ವಚ್ಚತಾ ಕುರಿತು ಅಭಿವೃದ್ಧಿ ಮಾಡದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಮರಣಾಂತರ ಉಪವಾಸ ಕೈಗೊಳ್ಳಲು ಸಾರ್ವಜನಿಕರು ಸಿದ್ದಗೊಳ್ಳಬೇಕಾಗುತ್ತದೆ ಎಂದು ಜನಾಕ್ರೋಶ ವ್ಯಕ್ತವಾಗುತ್ತಿದೆ.

LEAVE A REPLY

Please enter your comment!
Please enter your name here