ದಾವಣಗೆರೆ:ಇವತ್ತಿನಿಂದ ಅಮೃತ ಮಹೋತ್ಸವದ ಸಿದ್ಧತೆ, ಅದರ ಹಿಂದೆ ನಡೆಯುತ್ತಿರುವ ಕೆಲಸ ಮತ್ತು ಕಾರ್ಯಕ್ರಮದ ಪ್ರತಿಯೊಂದು ಹೆಜ್ಜೆಯನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಹೋಗುತ್ತೇನೆ. ಯಾಕೆಂದರೆ… ಇದು ಮತ್ತೊಂದು ಕಾರ್ಯಕ್ರಮವಲ್ಲ. ಇದು ಅಭಿಮಾನಿಗಳ ಪಾಲಿಗೆ ಒಂದು ಐತಿಹಾಸಿಕ ಕ್ಷಣವಾಗಬೇಕು ಎಂಬ ಕನಸಿನಿಂದ ರೂಪುಗೊಳ್ಳುತ್ತಿರುವ ಮಹೋತ್ಸವ! ಸುಮಾರು ಒಂದು ಕೋಟಿಗೂ ಮಿಗಿಲಾದ ವೆಚ್ಚ, ಬರೋಬ್ಬರಿ 18 ಗಂಟೆಗಳ ಕಾರ್ಯಕ್ರಮ. ಬೆಳಗ್ಗೆ 6 ಗಂಟೆಗೆ ಆರಂಭವಾಗಿ ರಾತ್ರಿ 12 ಗಂಟೆಯವರೆಗೆ ಸಾಗುವ ಇಂತಹ ಒಂದು ಬೃಹತ್ ಕಾರ್ಯಕ್ರಮವನ್ನು ರೂಪಿಸುವುದು ಮಾತಿನಲ್ಲಿ ಹೇಳುವಷ್ಟು ಸುಲಭವಲ್ಲ. ಅದರ ಹಿಂದೆ ನೂರಾರು ಜನರ ಶ್ರಮ, ಸಾವಿರಾರು ಅಭಿಮಾನಿಗಳ ಪ್ರೀತಿ ಮತ್ತು ತಿಂಗಳುಗಳ ತಯಾರಿ ಇದೆ.
ಇದರ ಮೊದಲ ಅದ್ಧೂರಿ ಅಧ್ಯಾಯವೇ,
ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜ!
ಸೆಪ್ಟೆಂಬರ್ 27ರಂದು ಬೆಳಗ್ಗೆ 6 ಗಂಟೆಗೆ ಟೌನ್ ಹಾಲ್‌ನಿಂದ ಆರಂಭವಾಗುವ ಮೆರವಣಿಗೆ… ನಾಯಂಡಹಳ್ಳಿಯವರೆಗೆ ಸಾಗಲಿದೆ. ಆ ಅರ್ಧ ಕಿಲೋಮೀಟರ್ ಉದ್ದದ ಧ್ವಜವನ್ನು ಸಾವಿರಾರು ಅಭಿಮಾನಿಗಳು ಹೆಮ್ಮೆಯಿಂದ ಹೊತ್ತು ಸಾಗಲಿದ್ದಾರೆ.
ಹಾಗಾಗಿ ಸೆಪ್ಟೆಂಬರ್ 27 ರಂದು ಬೆಳಗ್ಗೆ 6 ಗಂಟೆಗೆ ಟೌನ್ ಹಾಲ್ ಬಳಿ ಬಂದು ಬಿಟ್ಟರೆ, ನೀವು ಮನೆಗೆ ಹೋಗುವುದು ರಾತ್ರಿ 12 ಗಂಟೆ ನಂತರವೇ! ಆ ಮಟ್ಟದಲ್ಲಿ ನಡೆಯಲಿದೆ ಈ ಕಾರ್ಯಕ್ರಮ.
ಕೊನೆಮಾತು:
ಆ ದಿನ ವಿಷ್ಣು ಸೇನಾನಿಗಳು ಒಂದು ಕಾರ್ಯಕ್ರಮವನ್ನು ಮಾತ್ರ ಮಾಡುವುದಿಲ್ಲ! ಒಬ್ಬ ಮಹಾನ್ ಕಲಾವಿದನ ಮೇಲಿನ ಅಭಿಮಾನ ಹೇಗಿರುತ್ತದೆ ಎನ್ನುವುದನ್ನು ಇಡೀ ನಾಡಿಗೆ ತೋರಿಸಲಿದ್ದಾರೆ.ಬೆಳಗ್ಗೆ 6 ಗಂಟೆಯಿಂದ ರಾತ್ರಿ 12ರ ತನಕ.
ನಂದಿ ಲಿಂಕ್ ಗ್ರೌಂಡ್, ನಾಯಂಡಹಳ್ಳಿ, ಬೆಂಗಳೂರು





