ಧಾರವಾಡ:ಇತ್ತೀಚಿಗೆ ಸಾಂಸ್ಕೃತಿಕ ನಗರಿ ಧಾರವಾಡದ “ಕನ್ನಡ ಸಾಹಿತ್ಯ ಪರಿಷತ್” ಸಭಾಭವನದಲ್ಲಿ ಅಕ್ಷರ ದೀಪ ಫೌಂಡೇಶನ್ (ರಿ) ಗದಗ ಕರ್ನಾಟಕ ಇವರು ಆಯೋಜಿಸಿದ್ದ “ರಾಷ್ಟ್ರಮಟ್ಟದ ಗಜಲ್ ಕವಿಗೋಷ್ಠಿ ” ಸಾಧಕರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಭವ್ಯ ಸಮಾರಂಭದಲ್ಲಿ ಶಿಗ್ಗಾವ್ ತಾಲೂಕ್ ತಡಸ್ ಕಮಲಾ ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಗಾಯತ್ರಿ ಎಲ್. ರಾಥೋಡ ಇವರಿಗೆ ಕನ್ನಡ ಸಾಹಿತ್ಯ, ಶಿಕ್ಷಣ, ನೆಲ-ಜಲ, ನಾಡು – ನುಡಿ ಸಂಸ್ಕೃತಿಗೆ ಇವರು ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಅಕ್ಷರ ದೀಪ ಫೌಂಡೇಶನ್ (ರಿ) ಗದಗ ಕರ್ನಾಟಕ ಅವರು ದಿನಾಂಕ 6 ಸೆಪ್ಟೆಂಬರ್ 2026 ರ ರವಿವಾರದಂದು ನಡೆದ “ರಾಷ್ಟ್ರಮಟ್ಟದ ಗಜಲ್ ಕವಿಗೋಷ್ಠಿ ” ಸಾಧಕರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಭವ್ಯ ಸಮಾರಂಭದ ವೇದಿಕೆಯಲ್ಲಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು ಶ್ರೀಮತಿ ರಾಥೋಡ್ ಇವರು ಶಾಲಾ ಅಧ್ಯಾಪನ ಕಾರ್ಯದ ಜೊತೆಗೆ ಕವಿತೆ, ಸಾಹಿತ್ಯ, ಸಂಗೀತ- ಗಾಯನ, ಕನ್ನಡ ನಾಡು ನುಡಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿರುವ ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಸದರ ಸಂಸ್ಥೆಯವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಸಾಹಿತಿಗಳು, ವಿಮರ್ಶಕರು, ಪ್ರಸಿದ್ಧ ಗಜಲ್ ರಚಕಾರರು ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ್ ಕಿನ್ನಾಳ, ರಂಜಾನ್ ದರ್ಗಾ, ಶ್ರೀ ನಾಗೇಶ್ ನಾಯಕ್ ತ್ರಿಭಾಷಾ ಸಾಹಿತಿಗಳಾದ ಡಾ. ಎಲ್. ಪಿ. ಲಮಾಣಿ ಡಾ. ಎಸ್ ಎಚ್ ಹಾವೇರಿ ಇತರರು ಉಪಸ್ಥಿತರಿದ್ದರು ಶುಭ ಸಂದರ್ಭದಲ್ಲಿ ಕಮಲಾನಗರ ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಅಪಾರ ವಿದ್ಯಾರ್ಥಿ ಬಳಗ ಎಸ್ಡಿಎಂಸಿ ಅಧ್ಯಕ್ಷರು ಸರ್ವ ಸದಸ್ಯರು ಹರ್ಷ ಭಕ್ತಪಡಿಸಿ ಶುಭಕೋರಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here