ಬೆಂಗಳೂರು:ಸಂಸ ಥಿಯೇಟರ್, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಆಶ್ರಯದಲ್ಲಿ ದಿನಾಂಕ 3,4,5,ಆಗಸ್ಟ್ 2026 ಮೂರು ದಿನಗಳ ಕಾಲ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಸಂಸ ನಾಟಕೋತ್ಸವ ನಡೆಯಲಿದೆ.
ಡಾ.ಕೂಡ್ಲೂರು ವೆಂಕಟಪ್ಪ
ಕಥೆಗಾರರು ಹಾಗೂ ಪ್ರಾಂಶುಪಾಲರು, ಸಂಸ ರಂಗಶಿಕ್ಷಣ ಕೇಂದ್ರ, ಬೆಂಗಳೂರು ಉದ್ಘಾಟನೆ ಮಾಡಲಿದ್ದು,ಅತಿಥಿಗಳಾಗಿದೀಪಕ್ ಮೈಸೂರು, ಎಂ. ಎಸ್. ಕುಮಾರ್,ಜಯರಾಮ ಎಂ,ಆನಂದ ಪಣ್ಣೆದೊಡ್ಡಿ ಆಗಮಿಸಲಿದ್ದಾರೆ,ಸಂಜೆ 7ಕ್ಕೆ
ಸಂಚಲನ ಮೈಸೂರು ರಂಗ ತಂಡ ಅಭಿನಯಿಸುವ
ಭವ ಏನಗೆ ಹಿಂಗಿತು ನಾಟಕ ಪ್ರದರ್ಶನ ವಾಗಲಿದೆ.ಎರಡನೇ ದಿನ ವೆಂಕಟ ನರಸಿಂಹಲು,ಸತೀಶ್ ಶಾಸ್ತ್ರೀ,ಸೋಮಶೇಖರ್ ಎನ್. ಎ.ಅತಿಥಿಗಳಾಗಿ ಆಗಮಿಸಲಿದ್ದಾರೆ ಅಂದು ಸಂಜೆ ಸಂಸ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು
ಚಿ. ಶ್ರೀನಿವಾಸರಾಜು ರಚನೆಯ ಫೀನಿಕ್ಸ್ ಹಾಗೂ ರಾಯಚೂರಿನ ರಂಗ ಸಂಗಮ ತಂಡ ವಾಲ್ಮೀಕಿ ಕವಿಗಳ ವೀರ ಲಕ್ಷ್ಮಣ ನಾಟಕ ಪ್ರದರ್ಶನ ವಾಗಲಿವೆ. ಮೂರನೇ ದಿನ
ಸಂಸ್ಕೃತಿ ಚಿಂತಕರಾದ ಡಾ.ಎಚ್. ಆರ್. ಸ್ವಾಮಿ ಸಮಾರೋಪ ನುಡಿಗಳನ್ನಾಡಲಿದ್ದು,
ಗಿರಿಯಪ್ಪ ಎಂ.ದಮ್ಮಪ್ರಿಯ, ಡಾ.ಎಚ್.ತುಕಾರಾಂ
ಭಾಗವಹಿಸಲಿದ್ದಾರೆ. ಸಂಜೆ 7ಗಂಟೆಗೆ ಬಿಎಂಟಿಸಿ ಸಂಸ್ಥೆಯ ಕಲಾವಿದರ ಕಲಾ ಕುಟೀರ ತಂಡವು ಪೊಲೀಸ್ ಅಧಿಕಾರಿಗಳಗಿದ್ದ ಸುಧಾಕರ್ ಶೆಟ್ಟಿ ಅವರ ಜೀವನ ಆಧಾರಿತ ಖಾಕಿಯೊಳಗಿನ ಸಂತ ನಾಟಕವನ್ನು ಸಿದ್ದರಾಮ ಕೊಪ್ಪರ್
ರಚನೆ,ನಿರ್ದೇನದಲ್ಲಿ ಪ್ರದರ್ಶನ ವಾಗಲಿದೆ

LEAVE A REPLY

Please enter your comment!
Please enter your name here