ವಿಜಯಪುರ:ವಿಜಯಪುರ ಜಿಲ್ಲೆಯ ಹೊನಗನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಸವನಹಳ್ಳಿ ಯಲ್ಲಿ ಕಳೆದ ಐದಾರು ತಿಂಗಳಿನಿಂದ ಗ್ರಾಮದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಒದಗಿಸುತ್ತಿಲ್ಲಾ.ಸಾರ್ವಜನಿಕರು ಒತ್ತಾಯಿಸಿದಾಗೊಮ್ಮೆ ಹದಿನೈದು ಇಪ್ಪತ್ತು ದಿವಸಗಳಿಗೆ ಒಮ್ಮೆ ನೀರು ಬಿಟ್ಟು ಮರೆಮಾಚಿ ಸುಮ್ಮನಾಗಿಬಿಡುತ್ತಾರೆ.ಈ ಬಗ್ಗೆ ಸಾರ್ವಜನಿಕರು ಪಿಡಿಓ ಅವರನ್ನು ಸಂಪರ್ಕಿಸಿದರೆ ಸಾರ್ವಜನಿಕರಮೇಲೆ ಹರಿಹಾಯ್ದು ದೂರುನೀಡುವುದಾಗಿ ಹೆದರಿಸುತ್ತಾ ಸರ್ವಾಧಿಕಾರಿಯಂತೆ ವರ್ತಿಸುತ್ತಾ ಪಕ್ಷಪಾತ ಧೋರಣೆ ಅನಿಸರಿಸುತ್ತಾರೆ ಸಾರ್ವಜನಿಕರಿಗೆ ಗೌರವವಿಲ್ಲದಂತೆ ಮಾತಾಡುತ್ತಾ ರಾಜಕೀಯನಾಯಕರ ಸಹಕಾರದಿಂದ ಸಾರ್ವಜನಿಕರನ್ನು ಕೀಳಾಗಿ ನೋಡುತ್ತಾರೆ.ಕುಡಿಯುವ ನೀರಿಗಾಗಿ ಸಾಕಷ್ಟು ಬಾರಿ ಪಿಡಿಓ ಗೆ ಮನವಿಮಾಡಿದರೂ ಸ್ಪಂದಿಸುತ್ತಿಲ್ಲವಾದ್ದರಿಂದ ಜಿಲ್ಲಾ ಪಂಚಾಯತ ಸಿ.ಇ.ಓ ಹಾಗೂ ಜಿಲ್ಲಾಧಿಕಾರಿಗಳಿಗೂ ಮನವಿಸಲ್ಲಿಸಿದರೂ ಪಿಡಿಓ ಅವರ ತಪ್ಪುಮಾಹಿಂದನೋ ಏನೋ ಗೊತ್ತಿಲ್ಲಾ ಅವರೂ ಯಾವ ಕ್ರಮ ಕೈಗೊಂಡಿಲ್ಲಾ ವಾದ್ದರಿಂದ ಜುಲೈ ಒಂದರಂದು ಪಿಡಿಓ ವರ್ಗಾವಣೆ ಮತ್ತು ಹೊನಗನಹಳ್ಳಿ, ಸವನಹಳ್ಳಿ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕರಿಂದ ಹೊನಗನಹಳ್ಳಿ ಗ್ರಾಮಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ ಈ ಕುರಿತು ಬಬಲೇಶ್ವರ ಪೊಲೀಸ್ ಠಾಣೆಗೂ ಮಾಹಿತಿ ಒದಗಿಸಲಾಗಿದೆ.ಠಾಣಾಧಿಕಾರಿಯ ಸೂಚನೆಯಂತೆ ವಿಜಯಪುರ ತಾಲ್ಲೂಕಿನ ತಹಶಿಲ್ದಾರರ ಗಮನಕ್ಕೂ ತರಲಾಗಿದೆ.ಆದ್ದರಿಂದ ಸರ್ಕಾರ ಕೂಡಲೆ ರೈತಾಪಿವರ್ಗದವರೇ ಹೆಚ್ಚಾಗಿರುವ ಈ ಎರಡೂ ಗ್ರಾಮಗಳಲ್ಲಿ ಎತ್ತುಗಳು,ಎಮ್ಮೆಗಳು,ಹಸುಗಳು,ಕುರಿಮೇಕೆಗಳು,ಕೋಳಿ ,ಬೆಕ್ಕು,ನಾಯಿ ಮುಂತಾದ ರೈತರ ಸಾಕು ಪ್ರಾಣಿಗಳಿಗೂ ನೀರಿನ ಅಗತ್ಯವಿದೆ ಆದ್ದರಿಂದ ಪ್ರತಿನಿತ್ಯ ಸರಿಯಾದ ಪ್ರಮಾಣದಲ್ಲಿ ನೀರು ಒದಗಿಸಬೇಕೆಂದ ಸಾರ್ವಜನಿಕರು ಈ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನ ಇದಕ್ಕೂ ಮನ್ನಣೆ ಸಿಗದಿದ್ದರೆ ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸಬೇಕಾಗುತ್ತದೆ.ಸಂಬಂಧಿಸಿದ ಅಧಿಕಾರಿ,ಜನಪ್ರತಿನಿಧಿಗಳು ಇದಕ್ಕೆ ಅವಕಾಶ ನೀಡದಂತೆ ಸರಿಪಡಿಸಲು ಈ ಮೂಲಕ ಮನವಿ.






