ಮೈಸೂರು:ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷೆ ನೀಡುವುದೇ ದಸರೆಯ ಸಂದೇಶ ಎಂದು ಸರ್ಕಾರ ವಿಜಯದಶಮಿ ಶುಭಾಶಯ ತಿಳಿಸುವ ಜಾಹಿರಾತು ಪ್ರಕಟಿಸಿದೆ.
ವಿಜಯನಗರ ಅರಸರು ವಿಜಯದ ಸಂಕೇತವಾಗಿ ಪ್ರಾರಂಭಿಸಿರುವ ಆಯುಧಪೂಜೆ – ದಸರಾ ಉತ್ಸವವನ್ನು ಮೈಸೂರು ಒಡೆಯರ್ ಮುಂದುವರೆಸಿದ್ದು, ಇಂದಿಗೂ ಆ ಪರಂಪರೆಯನ್ನು ಪಾಲಿಸಲಾಗುತ್ತಿದೆ.

ಜನಪರವಾಗಿರುವ ನಮ್ಮ ಸರ್ಕಾರವನ್ನು ದುಷ್ಟರಿಂದ ರಕ್ಷಿಸು ಎಂದು ಜಾಹೀರಾತಿನ ಮೂಲಕ ಪ್ರಾರ್ಥಿಸಲಾಗಿದೆ.
ಇದು ದಸರಾದ ಆಶಯವೂ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.ಈ ಸಮಯದಲ್ಲಿ ಮಾಧ್ಯಮದವರು ಜಾಹೀರಾತು ಕುರಿತು ಕೇಳಿದಪ್ರಶ್ನೆಗೆ

ಇಡೀ ಜಾಹೀರಾತಿನಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷದ ಹೆಸರು ಹೇಳಿಲ್ಲ.ಬೇರೆ ಯಾರಿಗೂ ಇಲ್ಲದ ಸಮಸ್ಯೆ ಬಿಜೆಪಿಯವರಿಗೆ ಮಾತ್ರ ಯಾಕೆ ಕಾಡಿದೆ?

ಇದು “ಕುಂಬಳಕಾಯಿ ಕಳ್ಳರು ಹೆಗಲು ಮುಟ್ಟಿಕೊಂಡ” ಹಾಗಾಯಿತು.ಎಂದು ಮುಖ್ಯ ಮಂತ್ರಿಸಿದ್ದರಾಮಯ್ಯನವರು ಪ್ರತಿಪಕ್ಷಗಳಿಗೆ ತಿವಿದರು.

LEAVE A REPLY

Please enter your comment!
Please enter your name here