ಮೈಸೂರು:
ಪ್ರತಿಷ್ಠಿತ “ಮೈಸೂರು ದಸರಾ ಉತ್ಸವ 2024” ರಲ್ಲಿ ದಾವಣಗೆರೆಯ “ನಮನ ಅಕಾಡೆಮಿ” ನವರಾತ್ರಿಯ 9 ದಿನಗಳಂದು ದುರ್ಗಾದೇವಿಯು ವಿವಿಧ ರೂಪಗಳನ್ನು ಧಾರಣೆ ಮಾಡಿ ಅನೇಕ ದುಷ್ಟ ರಾಕ್ಷಸರನ್ನು ಸಂಹಾರ ಮಾಡಿದ ನವದುರ್ಗೆಯರ 9 ಅವತಾರದ ವೈಶಿಷ್ಟತೆ ಬಗ್ಗೆ ಗುರುಗಳಾದ ವಿದುಷಿ ಶ್ರೀಮತಿ ಮಾಧವಿ ಡಿ ಕೆ ಅವರ ಪರಿಕಲ್ಪನೆ ಹಾಗೂ ನೃತ್ಯ ಸಂಯೋಜನೆಯ ಶಾಸ್ತ್ರೀಯ ನೃತ್ಯ ರೂಪಕ “ನವಶಕ್ತಿ ನಮನ” ಪ್ರಸ್ತುತಪಡಿಸಲಾಯಿತು. ನಮನ ಅಕಾಡೆಮಿಯ ಗುರು ವಿದುಷಿ ಶ್ರೀಮತಿ ಮಾಧವಿ ಡಿ ಕೆ ಹಾಗೂ ಅವರ ಹದಿನಾರು ಜನ ಶಿಷ್ಯಂದಿರು ಈ ನೃತ್ಯ ರೂಪದಲ್ಲಿ ಪಾಲ್ಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.





