ಬಾಗಲಕೋಟೆ:ಬಾಗಲಕೋಟೆ:ದಿನಾಂಕ 06/10/2025 ರಂದು ಭಾರತದ ಶ್ರೇಷ್ಠ ನ್ಯಾಯಾಂಗ ವೇದಿಕೆಯಾದ ಸುಪ್ರೀಂ ಕೋರ್ಟ್ನಲ್ಲಿ ನಡೆದ ಘಟನೆ – ದೇಶದ ನ್ಯಾಯಾಂಗದ ಇತಿಹಾಸದಲ್ಲಿ ಕಪ್ಪು ಅಧ್ಯಾಯವಾಗಿದೆ.ದೇಶದ ಪ್ರಧಾನ ನ್ಯಾಯಮೂರ್ತಿಯಾಗಿರುವ ಗೌರವಾನ್ವಿತ ಶ್ರೀ ಬಿ.ಆರ್. ಗವಾಯಿ ಅವರ ಮೇಲಿನ ಶೂ ದಾಳಿ ಕೇವಲ ವ್ಯಕ್ತಿಯ ಮೇಲಿನ ಕೃತ್ಯವಲ್ಲ, ಅದು ನ್ಯಾಯದ ಮೇಲಿನ ದಾಳಿ, ಸಂವಿಧಾನದ ಮೇಲಿನ ಅವಮಾನ, ಮತ್ತು ಪ್ರಜಾಪ್ರಭುತ್ವದ ಆತ್ಮದ ಮೇಲಿನ ನೇರ ಹಲ್ಲೆ.ವಕೀಲ ವೃತ್ತಿಯವರಾಗಿರುವ ಕಿಶೋರ್ ಎಂಬಾತನಿಂದ ಈ ಕೃತ್ಯ ನಡೆದುದು ಅತ್ಯಂತ ವಿಷಾದನೀಯ.ನ್ಯಾಯಾಲಯದ ಗೌರವ ಕಾಪಾಡಬೇಕಾದ ವೃತ್ತಿಯವರಿಂದಲೇ ನ್ಯಾಯದ ಪೀಠದ ಮೇಲೆ ದಾಳಿ ನಡೆಯುವುದು – ವೃತ್ತಿ ನೀತಿಯ ಕುಸಿತದ ಸಂಕೇತವಾಗಿದೆ.ಆದರೂ ಇಷ್ಟೊಂದು ಗಂಭೀರ ಘಟನೆಯ ಬಳಿಕವೂ ಸಂಬಂದಪಟ್ಟ ವ್ಯಕ್ತಿಯ ಬಂಧನವಾಗದಿರುವುದು ನಮ್ಮೆಲ್ಲರ ಮನಸ್ಸಿಗೆ ನೋವುಂಟುಮಾಡಿದೆ.ವಕೀಲನನ್ನು ಬಂದಿಸದೆ ಇರುವದು ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ಕೈಗನ್ನಡಿಯಾಗಿದೆ.ಇದು ನ್ಯಾಯಾಂಗದ ಸ್ವಾಯತ್ತತೆಯ ಮೇಲಿನ ನಂಬಿಕೆಗೆ ಧಕ್ಕೆಯುಂಟುಮಾಡುತ್ತದೆ.ವಿದೇಶಗಳೂ ಈ ಘಟನೆಗೆ ಕಣ್ಣಿಟ್ಟಿದ್ದು ಭಾರತದ ನ್ಯಾಯಾಂಗದ ಗೌರವವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ನ್ಯಾಯಮೂರ್ತಿಯ ಮೇಲಿನ ದಾಳಿ ಎಂದರೆ ಅದು ನ್ಯಾಯದ ದೇವಾಲಯದ ಮೇಲಿನ ದಾಳಿ.ನ್ಯಾಯದ ಪವಿತ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ನೈತಿಕ ಕರ್ತವ್ಯವಾಗಿದೆ.ಅದಕ್ಕಾಗಿ, ನಾವು ಕಾನೂನು ವಿದ್ಯಾರ್ಥಿಗಳ ಒಕ್ಕೂಟ, ಜಮಖಂಡಿ ಪರವಾಗಿ ಕೆಳಗಿನ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ರಾಷ್ಟ್ರಪತಿಗಳವರು ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ.ಸಕೀಲ ಕಿಶೋರ್ ಅವರನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡುವಂತೆ,2Dುವರ ಪರವಾಗಿ ಸಮರ್ಥನೆ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ.3Dಇಂತಹ ಕೃತ್ಯಗಳು ಪುನರಾವರ್ತನೆಂದಾಗದಂತೆ ಕಠಿಣ ನಿಯಮಾತ್ಮಕ ಕ್ರಮಗಳು ಕೈಗೊಳ್ಳುವಂತೆ.ನ್ಯಾಯದ ಮೇಲೆ ದಾಳಿ ಎಂದರೆ ಸಂವಿಧಾನದ ಆತ್ಮದ ಮೇಲೆ ದಾಳಿ.ಸಂವಿಧಾನದ ಗೌರವ ಕಾಪಾಡುವುದು ರಾಷ್ಟ್ರದ ಗೌರವ ಕಾಪಾಡುವಂತೆಯೇ ನ್ಯಾಯದ ಬಲವೇ ಪ್ರಜಾಪ್ರಭುತ್ವದ ಶಕ್ತಿ ಅದನ್ನು ದುರ್ಬಲಗೊಳಿಸುವ ಯಾವುದೇ ಕೃತ್ಯವನ್ನು ಕಾನೂನಿನ ಕತ್ತಿಯಿಂದಲೇ ಸಂಹರಿಸಬೇಕೆಂದು ಕಾನೂನು ವಿದ್ಯಾರ್ಥಿಗಳ ಒಕ್ಕೂಟ, ಜಮಖಂಡಿ ರಾಷ್ಟ್ರಪತಿಗೆ ಜಮಖಂಡಿ ಉಪವಿಭಾಗಾಧಿಕಾರಿಗಳಮುಖಾಂತರ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here