ವಿಜಯಪುರ:ದಲಿತ ಸಂಘಟನೆಗಳ ಒಕ್ಕೂಟ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟ ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳಾಪರ, ಬಸವಪರ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇದೇತಿಂಗಳ 16,ರಂದು ವಿಜಯಪುರ ಬಂದ್ ಗೆ ಕರೆ ಕೊಡಲಾಗಿದೆ.
ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶ್ರೀ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆತ ಘಟನೆಯನ್ನು ಖಂಡಿಸಿ ಗುರುವಾರ, ದಿನಾಂಕ 16-10-2025 ರಂದು ವಿಜಯಪುರ ಬಂದ್
ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯುವುದು.
ಈ ಪ್ರತಿಭಟನಾ ಮೆರವಣಿಗೆ : ಮುಂಜಾನೆ 10 ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಣಪತಿ ಚೌಕ, ವಾಜಪೇಯಿ ಸರ್ಕಲ್, ಕಿರಾಣಾ ಬಜಾರ್, ಸಿದ್ದೇಶ್ವರ ರಸ್ತೆ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ನಡೆಯಲಿದೆ.
ಪ್ರಜಾಪ್ರಭುತ್ವದ ಮೂರನೆಯ ಅಂಗ ಮತ್ತು ಸಂವಿಧಾನ ರಕ್ಷಣೆಯ ಹೊಣೆಗಾರಿಕೆಯ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ನ್ಯಾ. ಬಿ.ಆರ್. ಗವಾಯಿ ಅವರ ಮೇಲೆ ಮನುವಾದಿ ಮಾನಸಿಕ ಸ್ಥಿತಿಯ ವಕೀಲನೊಬ್ಬ ನ್ಯಾಯಾಲಯದ ಕಲಾಪ ನಡೆಯುತ್ತಿರುವ ಸಮಯದಲ್ಲೇ ಬೂಟು ಎಸೆಯುವ ಪ್ರಯತ್ನ ಮಾಡಿದ್ದಾನೆ.
ಈ ಘಟನೆಯು ವೈಯಕ್ತಿಕ ಅಸಹನೆ ಮಾತ್ರವಾಗಿರದೆ, ಸಮಸ್ತ ಭಾರತೀಯರಿಗೆ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಬಹುದೊಡ್ಡ ಪಡ್ಯಂತ್ರದ ಭಾಗವಾಗಿದೆ. ದೇಶದಲ್ಲಿ ಆವರಿಸಿಕೊಳ್ಳುತ್ತಿರುವ ಅಮಾನವೀಯ ಧಾರ್ಮಿಕ ಮೂಲಭೂತವಾದದ ಸಂಕೇತವಾಗಿದೆ. ಇದು ಕೇವಲ ನ್ಯಾ. ಗವಾಯಿ ಅವರ ಮೇಲಿನ ಹಲ್ಲೆಯಾಗಿರದೆ ನೇರವಾಗಿ ಸಂವಿಧಾನ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಸಿದ್ದಾಂತದ ಮೇಲೆ ನಡೆದ ಹಲ್ಲೆಯಾಗಿದೆ.
ಕೋಮುವಾದಿ ಸಂಘಟನೆ RSS ಗೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿಯೇ ಇಂಥ ಕುಕೃತ್ಯವೊಂದು ನಡೆದಿರುವುದು ಈ ದೇಶದಲ್ಲಿ ಮತ್ತೆ ಮನುಸ್ಮೃತಿಯನ್ನು ಶಾಸನವಾಗಿ ಮರುಪ್ರತಿಷ್ಠಾಪಿಸುವ ಹುನ್ನಾರವಾಗಿದೆ. ಘಟನೆ ನಡೆದ 9 ತಾಸುಗಳ ನಂತರ ಬಂದಿರುವ ಪ್ರಧಾನ ಮಂತ್ರಿಗಳ ಪ್ರತಿಕ್ರಿಯೆ, ಗೃಹಮಂತ್ರಿಯಾದಿಯಾಗಿ ಕೇಂದ್ರ ಸರಕಾರದ ಮೌನ ಸಮ್ಮತಿಯೇ ಇದಕ್ಕೆ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನ್ಯಾ. ಗವಾಯಿ ಕುರಿತು ಅವಹೇಳನಕಾರಿ ಹೇಳಿಕೆಗಳ ಮೂಲಕ ಅವರ ಚಾರಿತ್ಯಹರಣ ಮಾಡುತ್ತಿರುವುದರ ಹಿಂದಿರುವ ಮನುವಾದಿ ಸಂತತಿಗಳ ಕುಯುಕ್ತಿಯನ್ನು ಅರಿಯಬಹುದಾಗಿದೆ.
ಸನಾತನಿ ವಕೀಲನ ದುಷ್ಕೃತ್ಯವನ್ನು ನ್ಯಾ. ಬಿ.ಆರ್. ಗವಾಯಿ ಅವರು ಕ್ಷಮಿಸಿರಬಹುದು. ಆದರೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂರಕ್ಷಿಸಲು ಬಯಸುವ ಯಾರೂ ಕೂಡಾ ಕ್ಷಮಿಸಲಾರರು. ಈ ಸನಾತನಿಗೆ ಕಾನೂನು ಪ್ರಕಾರವೇ ಕಠಿಣ ಶಿಕ್ಷೆಗೆ ಒಳಪಡಿಸುವುದು ಅತ್ಯಗತ್ಯವಾಗಿದೆ.
ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನಷ್ಟಗೊಳಿಸಲು ಹೊರಟಿರುವ ಮನುವಾದಿ ಸನಾತನಿ ಸಂತತಿಗಳ ನಡೆಯನ್ನು ಖಂಡಿಸಿ ಇದೇ ದಿ. 16-10-2025 ರಂದು ‘ವಿಜಯಪುರ ಬಂದ್’ ಕರೆಕೊಡಲಾಗಿದೆ ಹಾಗೂ ಅಂದು ಮುಂಜಾನೆ 10 ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಸಮಾನತೆ, ಸೋದರತೆಯನ್ನು ಬಯಸುವ, ಸಂವಿಧಾನ ಸಂರಕ್ಷಣೆ ಬಯಸುವ ಪ್ರತಿಯೊಬ್ಬರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿ.
ಸಂಪರ್ಕಕ್ಕಾಗಿ
ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ
ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರ, ಜಲನಗರ, ವಿಜಯಪುರ
: 9880884471, 8050123277, 9448117226, 9341610911, 9448815524,
7026578155, 9901448441, 9740420826, 9845301617, 9741824266, 9972062074
ಬನ್ನಿ ಭಾಗವಹಿಸಿ.. ಹೋರಾಟಕ್ಕೆ ಕೈ ಜೋಡಿಸಿ ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಕರೆ ಕೊಟ್ಟಿವೆ.





