ಬೆಂಗಳೂರು:ಸ್ವಾತಂತ್ರ್ಯ ಹೋರಾಟಗಾರರು, ದೇಶದ ಪ್ರಥಮ ಪ್ರಧಾನಿಗಳು ಆದ ನಮ್ಮೆಲ್ಲರ ಹೆಮ್ಮೆಯ ನಾಯಕ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಜನ್ಮದಿನದ ನಮನಗಳು.

ಸ್ವತಂತ್ರ, ಸ್ವಾಭಿಮಾನಿ, ಸ್ವಾವಲಂಬಿ ಮತ್ತು ಜಾತ್ಯತೀತ ಭಾರತ ನಿರ್ಮಾಣಕ್ಕೆ ಪ್ರಗತಿಪರ ಚಿಂತನೆ, ಮುನ್ನೋಟ ಮತ್ತು ಸಾಮಾಜಿಕ ಕಾಳಜಿಯೊಂದಿಗೆ ಭದ್ರವಾದ ಬುನಾದಿ ಹಾಕಿದವರು ಜವಾಹರ ಲಾಲ್ ನೆಹರೂರವರು. ಆ ಬುನಾದಿಯ ಮೇಲೆಯೇ ಇಂದಿನ ಆಧುನಿಕ ಭಾರತ ನಿಂತಿದೆ.

ಅಪ್ಪಟ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿಯಾಗಿದ್ದ ಪಂಡಿತ್ ನೆಹರೂ ದೇಶದ ಎಲ್ಲ ಆಡಳಿತಗಾರರಿಗೆ ಮಾದರಿಯಾಗಿದ್ದಾರೆ.

ರಾಷ್ಟ್ರದ ಉಜ್ವಲ ಭವಿಷ್ಯವನ್ನು ಬೆಳೆಯುವ ಮಕ್ಕಳಲ್ಲಿ ಕಂಡು, ಅವರನ್ನು ಪ್ರೀತಿಸುತ್ತಿದ್ದ ನೆಹರೂ ಅವರು ಬದುಕು – ಸಾಧನೆ ಇಂದಿಗೂ ಸ್ಪೂರ್ತಿಯಾಗಿದೆ.

ನಾಡಿನ‌ ಸಮಸ್ತ ಮಕ್ಕಳಿಗೆ ಮಕ್ಕಳ ಜಯಂತಿಯ ಶುಭಾಶಯಗಳು. ನೀವೆಲ್ಲರೂ ನೆಹರೂರವರನ್ನು ಓದಿ ಅರಿತು, ಆ ಹಾದಿಯಲ್ಲಿ ಹೆಜ್ಜೆಹಾಕುವಂತಾಗಲಿ ಎಂದು ಆಶಿಸುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ನೇಹರು ಅವರಿಗೆ ಜನ್ಮದಿನಾಚರಣೆಯ ಶುಭಾಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here