ಬೆಂಗಳೂರು:ನವೆಂಬರ್ 16 ರಂದು ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸಮಾಡುತ್ತಿರುವ ಲಕ್ಷಾಂತರ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ನವೆಂಬರ್16 ರಂದು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಿದ್ದಾರೆ.
ಕನ್ಸಸ್ಟ್ರಕ್ಷನ್ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾ(CWFI) ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ನಾಲ್ಕುಲೇಬರ್ ಕೋಡ್ ಗಳ ಅಡಿಯಲ್ಲಿ ರದ್ದಾಗಿರುವ 1996 ರ ಕಟ್ಟಡ ಕಾರ್ಮಿಕ ಕಾನೂನು ಮತ್ತು ಸೆಸ್ ಕಾನೂನುಗಳು ಪುನರ್ ಸ್ಥಾಪನೆಗೊಳ್ಳಬೇಕು. ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗಳನ್ನು ಅವುಗಳಲ್ಲಿ ಶೇಖರಣೆಗೊಂಡಿರುವ ಸಾವಿರಾರು ಕೋಟಿ ನಿಧಿಯನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಈ ಹೋರಾಟಕ್ಕೆ ಕರೆ ನೀಡಲಾಗಿದೆ.
ರಾಜ್ಯದಲ್ಲಿಬಾಕಿ ಉಳಿಸಿಕೊಂಡಿರುವ ಶೈಕ್ಷಣಿಕ ಸಹಾಯಧನ ಪಾವತಿ
ಮಾಡಬೇಕು ಮತ್ತು ಸಹಾಯಧನ ಮೊತ್ತ ಹೆಚ್ಚಿಸಬೇಕು ಮಾಸಿಕ ಪಿಂಚಣಿಯನ್ನುರೂ.5000ಗೆ ಹೆಚ್ಚಿಸಿ ‘ವೈದ್ಯಕೀಯ ತಪಾಸಣೆ’ ಹೆಸರಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಯಾಗಲಿ ದುಬಾರಿವೆಚ್ಚದ ಕೌಶಲ್ಯ ಕೇಂದ್ರ ಮತ್ತು ವಸತಿ ಶಾಲೆ ನಿರ್ಮಾಣ ಯೋಜನೆ ಕೈಬಿಡಬೇಕು. ಕಲ್ಯಾಣ ಯೋಜನೆಗಳ ಜಾರಿಗಾಗಿ ಮಾಡಿರುವ ಗುತ್ತಿಗೆ ಆಧಾರಿತ ಖಾಸಗಿ ಏಜೆನ್ಸಿ ಕಾರ್ಮಿಕ ಸೇವಾ ಕೇಂದ್ರಗಳನ್ನು ರದ್ದುಮಾಡಿಬೇಕು.
ಕರಾಳ ಲೇಬರ್ ಕೋಡ್ ರದ್ದತಿಗಾಗಿಅ ಮೊದಲಾದ ಇತರೆ ಬೇಡಿಕೆಗಳಿಗಾಗಿ ಒತ್ತಾಯಿಸಿ ಎಲ್ಲ ಜಿಲ್ಲಾಕೇಂದ್ರಗಳಲ್ಲಿರುವ ಕಾರ್ಮಿಕಾಧಿಕಾರಿಗಳ ಕಚೇರಿಗಳ ಎದುರು ನಡೆಯುವ ಪ್ರತಿಭಟನೆಗಳಲ್ಲಿ ಸಾವಿರಾರು ಕಾರ್ಮಿಕರು ಭಾಗವಹಿಸಲಿದ್ದಾರೆ.
ಬೆಂಗಳೂರಿನಲ್ಲಿ ಬನ್ನೇರುಘಟ್ಟ ರಸ್ತೆಯ ಡೈರಿ ಸರ್ಕಲ್,
ಬಳಿ ಇರುವ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ನೇತೃತ್ವದಲ್ಲಿ ಬೆಂಗಳೂರಿನ ಕಾರ್ಮಿಕರ ಪ್ರತಿಭಟನೆಗಳು ನಡೆಯಲಿವೆ.
ಈಗಾಗಲೇ ನವೆಂಬರ್1 ರಿಂದ15 ರವರೆಗೆ ಈ ಹೋರಾಟಕ್ಕೆ ಪೂರ್ವಭಾವಿಯಾಗಿ ಮತ್ತು ಡಿಸೆಂಬರ್1 ರಿಂದ ದೆಹಲಿಯಲ್ಲಿ ನಡೆಯುವ ಅಖಿಲ ಭಾರತ ಪ್ರತಿಭಟನೆ ಯಶಸ್ವಿಗೆ ಐನೂರಕ್ಕೂ ಅಧಿಕ ಕೆಲಸದ ಸ್ಥಳಗಳಲ್ಲಿ ಪೊಸ್ಟರ್ ಪ್ರದರ್ಶನಗಳ ಮೂಲಕ ಸಣ್ಣ ಸಣ್ಣ ಸಭೆಗಳ ಮೂಲಕ ಸಾವಿರಾರು ಕಾರ್ಮಿಕರನ್ನು ನವೆಂಬರ್16 ಹೋರಾಟಕ್ಕೆ ಅಣಿನೆರೆಸಲಾಗಿದೆ.





