ಬೆಂಗಳೂರು, ನ. 12:
ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ವತಿಯಿಂದ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿರುವ ಶಾಸಕರ ಭವನದ ಆವರಣದಲ್ಲಿರುವ ವಾಲ್ಮೀಕಿ ತಪೋವನದ “ಮಹರ್ಷಿ ವಾಲ್ಮೀಕಿ ಕುಟೀರ”ದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ಹಾಗೂ ವೇದಿಕೆ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಅವರು, ಹೈಕೋರ್ಟ್ ತೀರ್ಪು ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ನಾನು ಬಳ್ಳಾರಿಯ ಮಾಜಿ ಸಂಸದ, ವಾಲ್ಮೀಕಿ ಸಮುದಾಯಕ್ಕೆ ಸೇರಿದವನು. ನಮ್ಮ ರಾಜ್ಯದಲ್ಲಿ ಎಸ್ಟಿ 51 ಜಾತಿಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಜನ, ಎಸ್ಸಿ 101 ಜಾತಿಗಳಲ್ಲಿ 1.25 ಕೋಟಿಗೂ ಹೆಚ್ಚು ಜನ, ಒಬಿಸಿ 2000 ಜಾತಿಗಳಲ್ಲಿ ಸುಮಾರು 3 ಕೋಟಿ ಜನರಿದ್ದಾರೆ.”
“ಶಿಕ್ಷಣದಲ್ಲಿ, ಉದ್ಯೋಗದಲ್ಲಿ ನಮಗೆ ಸಾಕಷ್ಟು ಪ್ರಾತಿನಿಧ್ಯವೇ ಇಲ್ಲ. ಅದಕ್ಕಾಗಿ ವರ್ಷಗಟ್ಟಲೆ ಹೋರಾಟ ಮಾಡಿದೆವು. ಕೊನೆಗೆ 2023ರಲ್ಲಿ ಕಾಯ್ದೆ ಸಂಖ್ಯೆ 1/2023 ಬಂತು. ಅದರಲ್ಲಿ ಎಸ್ಸಿಗೆ 17%, ಎಸ್ಟಿಗೆ 7%, ಒಬಿಸಿಗೆ 32% ಸೇರಿ ಒಟ್ಟು 56% ಮೀಸಲಾತಿ ಸಿಕ್ಕಿತ್ತು.ಎಂದು ಉಗ್ರಪ್ಪ ಅವರು ತಿಳಿಸಿದರು:
2023ರ ಮಾರ್ಚ್ 23ರಂದೇ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಿ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದರು. ಆದರೆ ಕೇಂದ್ರ ಸರ್ಕಾರ ಇಂದಿಗೂ ಸೇರಿಸಲೂ ಇಲ್ಲ, ತಿರಸ್ಕರಿಸಲೂ ಇಲ್ಲ. ಅದು ಹಾಗೆಯೇ ಬಾಕಿ ಇದೆ.”
“2026ರ ಅಕ್ಟೋಬರ್ 12ರವರೆಗೆ ಈ ಕಾಯ್ದೆ ಜಾರಿಯಲ್ಲಿತ್ತು. ಆದರೆ ಕೆಲವು ಸ್ವಾರ್ಥಿಗಳು ಹಾಕಿದ ರಿಟ್ ಅರ್ಜಿಯಿಂದ ಹೈಕೋರ್ಟ್ ಈ ಕಾಯ್ದೆಯನ್ನು ರದ್ದು ಮಾಡಿತು. ಇದು ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕೆ ಮರಣಘಂಟೆ ಯಾಗಿದೆ.”
“ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ – ಅನುಭವಿಕ ದತ್ತಾಂಶ ಇದ್ದರೆ ಶೇ. 50ರ ಮಿತಿಯನ್ನು ಹೆಚ್ಚಿಸಬಹುದು ಎಂದು. ಇಡಬ್ಲ್ಯೂಎಸ್ಗೆ ಶೇ. 10% ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈಗ ದೇಶದಲ್ಲಿ ಮೀಸಲಾತಿ ಶೇ. 60ಕ್ಕೆ ಹೋಗಿದೆ. ಆದರೂ ನಮ್ಮ ಕಾಯ್ದೆಯನ್ನು ರದ್ದು ಮಾಡಿದ್ದಾರೆ.”
ಈಗ ಇರುವುದು ಒಂದೇ ದಾರಿ. ಈ ಕಾಯ್ದೆಯನ್ನು 9ನೇ ಪರಿಚ್ಛೇದಕ್ಕೆ ಸೇರಿಸಬೇಕು. ಇಲ್ಲದಿದ್ದರೆ ಸಂವಿಧಾನದ 15 ಮತ್ತು 16ನೇ ವಿಧಿಗಳಿಗೆ ತಿದ್ದುಪಡಿ ತರಬೇಕು. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು.”
ಪ್ರಧಾನಿಗಳಿಗೆ ಆ ರಾಜಕೀಯ ಇಚ್ಛಾಶಕ್ತಿ ಇದೆ ಎಂದು ನಂಬಿದ್ದೇನೆ. ದಯವಿಟ್ಟು ಮಾಡಿ. ಇಲ್ಲದಿದ್ದರೆ ಎಸ್ಸಿ, ಎಸ್ಟಿ, ಒಬಿಸಿ ವರ್ಗಗಳು ಹಾಳಾಗಿ ಹೋಗುತ್ತವೆ, ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದಿಲ್ಲ.”
ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಎಸ್ಎಲ್ಪಿ ಹಾಕಿದೆ, ಅದು ಬಾಕಿ ಇದೆ. ಆದರೆ ಸುಪ್ರೀಂ ಕೋರ್ಟ್ನಿಂದಲೂ ಸರಿಯಾದ ಪರಿಹಾರ ಸಿಗದಿದ್ದರೆ ಇನ್ನೂ ಅನ್ಯಾಯವಾಗುತ್ತದೆ.”
ಆದ್ದರಿಂದ ನಾನು ಪ್ರಧಾನಿಗಳಿಗೆ ನಿನ್ನೆ, ನ. 11ರಂದು ಪತ್ರ ಬರೆದಿದ್ದೇನೆ. ನಾನು ಸೇರಿದಂತೆ 10 ಜನರ ನಿಯೋಗಕ್ಕೆ ನವದೆಹಲಿಯಲ್ಲಿ ಅಥವಾ ಕರ್ನಾಟಕದಲ್ಲಿ ಭೇಟಿಗೆ ಅವಕಾಶ ಕೊಡಿ ಎಂದು ಕೇಳಿದ್ದೇನೆ. ಪತ್ರದ ಪ್ರತಿಯನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಗೂ ಕಳುಹಿಸಿದ್ದೇನೆ.”
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯಲ್ಲಿ
ರಾಯಚೂರು ವಾಲ್ಮೀಕಿ ಸ್ವಾಮೀಜಿ.
ಸೇವಾಲಾಲ ಸ್ವಾಮೀಜಿ.ಎಂ. ನರಸಿಂಹಯ್ಯ,ಈ ರಾಜಪ್ಪ.
ವೇಣುಗೋಪಾಲ ನಾಯಕ. ಗೋಪಾಲಕೃಷ್ಣ. ಜಯಶ್ರೀ ಗುಡ್ಡೇಕಾಯಿ. ಹಾಗೂ ಪದಾಧಿಕಾರಿಗಳು. ರೈತ ಮುಖಂಡರು ಎಸ್ಸಿ ಎಸ್ಟಿ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು.
(ಕೃಪೆ:ಸೋಶಿಯಲ್ ಮೀಡಿಯಾ)





