ಬೆಂಗಳೂರು:

ಜಾಗೃತಿ ಟ್ರಸ್ಟ್, ಬೆಂಗಳೂರು ಇವರು ಆಯೋಜಿಸಿದ್ದ ನಗೆ ಹಬ್ಬ 2026 ಅಭೂತಪೂರ್ವ ಯಶಸ್ಸುಗೊಂಡಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಹಾಸ್ಯಬ್ರಹ್ಮ ಎಂ.ಎಸ್.ನರಸಿಂಹಮೂರ್ತಿಯವರ 77ನೇ ಜನ್ಮದಿನಾಚರಣೆ ಸಮಾರಂಭ, ಎಂ.ಎಸ್.ಎನ್. ವಿರಚಿತ ಬೇಂದ್ರೆ ಮತ್ತು ಹಾಸ್ಯ ಕೃತಿಯ ಲೋಕಾರ್ಪಣೆ, ಆದರ್ಶ ದಂಪತಿಗಳಿಗೆ ಪುರಸ್ಕಾರ ಮತ್ತು ಸಾಧಕರಿಗೆ ಕೆಂಪಮ್ಮ ಪ್ರಶಸ್ತಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಗೌಶುಭಂ ಫೌಂಡೇಶನ್ನಿನ ನರೇಂದ್ರ ಅವರು ನೆರವೇರಿಸಿದರೆ, ಕೃತಿ ಲೋಕಾರ್ಪಣೆಯನ್ನು ಸತ್ವ ಗ್ರೂಪಿನ ಶಂಕರಪ್ಪನವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ವೆಂಕಟೇಶ ವೃಷಭಾದ್ರಿ ಮತ್ತು ಬೆಳಕು ಸಂಸ್ಥೆಯ ಸಂಸ್ಥಾಪಕರಾದ ಅಣ್ಣಪ್ಪ ಮೇಟಿಗೌಡ,, ತಿಮ್ಮಯ್ಯ, ಗುರುಗಂಗಾಧರ್ ಲಯನ್ಸ್ ಉಪಸ್ಥಿತರಿದ್ದರು. ಪ್ರಾಸ್ತಾವಿಕ ನುಡಿಯನ್ನು ಜಾಗೃತಿ ಟ್ರಸ್ಟ್ ನ ಅಧ್ಯಕ್ಷರಾದ ಬಿ.ನಾಗೇಶರವರು, ನರೇಂದ್ರ, ಮಂಜುನಾಥ, ತಿಮ್ಮಯ್ಯನವರು, ಗಣ್ಯರ ನುಡಿಗಳನ್ನು ಹಂಚಿಕೊಂಡರು.

ಶ್ರೀಯುತ ವೈ.ವಿ.ಗುಂಡೂರಾವ್, ಶ್ರೀಮತಿ ಇಂದು ಸಾಲಿಮಠ, ಶ್ರೀ ಉಮೇಶಗೌಡ ಇವರೊಂದಿಗೆ ನಗೆಹಬ್ಬದ ಸಾರಥ್ಯವನ್ನು ವಹಿಸಿಕೊಂಡಿದ್ದ ಎಂ.ಎಸ್.ಎನ್. ಅವರು ಸಭಾಂಗಣದಲ್ಲಿ ಸೇರಿದವರಿಗೆಲ್ಲ ನಗೆಯ ಡೋಸ್ ಕೊಟ್ಟು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಜನ್ಮದಿನಾಚರಣೆ, ಪುಸ್ತಕ ಬಿಡುಗಡೆ, ಗಣ್ಯರ ನುಡಿಗಳು, ನಗೆಹಬ್ಬ, ಜಾನಪದ ಗೀತೆಗಳ ಗಾಯನ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು. ಕಾರ್ಯಕ್ರಮದ ನಿರೂಪಣೆಯನ್ನು ಸಾಹಿತಿ ಶ್ರೀಮತಿ ಪುಷ್ಪಲತಾ ಹೆಗಡೆಯವರು ಹಾಗು ವಂದನಾರ್ಪಣೆಯನ್ನು ಎ.ಪಿ.ಮಂಜುಳರವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ರಂಜಿಸಿದ ಸರ್ವರಿಗೂ ಜಾಗೃತಿ ಟ್ರಸ್ಟ್ ಪರವಾಗಿ ಅಭಿನಂದಿಸಿ ಗೌರವ ಸ್ಮರಣಿಕೆಗಳನ್ನು ನೀಡಿ ಬೀಳ್ಕೊಡಲಾಯಿತು. ಹಾಸ್ಯದ ಹೊನಲಿನೊಂದಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

LEAVE A REPLY

Please enter your comment!
Please enter your name here